ಲಖನೌ ಕೋರ್ಟ್‌ನಲ್ಲಿ ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ ಆಪ್ತ ಸಂಜೀವ್ ಜೀವಾಗೆ ಗುಂಡಿಕ್ಕಿ ಬರ್ಬರ ಹತ್ಯೆ, ವಿಡಿಯೋ!
ಲಖನೌ ನ ಕೈಸರ್‌ಬಾಗ್‌ನಲ್ಲಿರುವ ಪಾಸ್ಕೋ ಕೋರ್ಟ್‌ನ ಗೇಟ್‌ನಲ್ಲಿ ವಕೀಲರ ಉಡುಪಿಯಲ್ಲಿದ್ದ ದುಷ್ಕರ್ಮಿಯೊಬ್ಬ ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ ಆಪ್ತ ಸಂಜೀವ್ ಜೀವಾ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಈ ವೇಳೆ ಓರ್ವ ಪೊಲೀಸ್ ಪೇದೆ ಹಾಗೂ ಒಂದು ಹೆಣ್ಣು ಮಗುವಿಗೆ ಸಹ ಗುಂಡು ತಗುಲಿದೆ.
Published: 07th June 2023 05:09 PM | Last Updated: 07th June 2023 05:45 PM | A+A A-

ಮೃತ ಸಂಜೀವ್ ಜೀವ
ಲಖನೌ ನ ಕೈಸರ್‌ಬಾಗ್‌ನಲ್ಲಿರುವ ಪಾಸ್ಕೋ ಕೋರ್ಟ್‌ನ ಗೇಟ್‌ನಲ್ಲಿ ವಕೀಲರ ಉಡುಪಿಯಲ್ಲಿದ್ದ ದುಷ್ಕರ್ಮಿಯೊಬ್ಬ ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ ಆಪ್ತ ಸಂಜೀವ್ ಜೀವಾ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಈ ವೇಳೆ ಓರ್ವ ಪೊಲೀಸ್ ಪೇದೆ ಹಾಗೂ ಒಂದು ಹೆಣ್ಣು ಮಗುವಿಗೆ ಸಹ ಗುಂಡು ತಗುಲಿದೆ.
ಸಂಜೀವ್ ಜೀವಾ, ಕೃಷ್ಣಾನಂದ ರೈ ಹತ್ಯೆ ಪ್ರಕರಣದ ಆರೋಪಿಯಾಗಿದ್ದು, ಮುನ್ನಾ ಬಜರಂಗಿ ಮತ್ತು ಮುಖ್ತಾರ್ ಅನ್ಸಾರಿಗೆ ಆಪ್ತನಾಗಿದ್ದ ಎನ್ನಲಾಗಿದೆ. ನ್ಯಾಯಾಲಯದ ಆವರಣದಲ್ಲಿ ಹಗಲು ಹೊತ್ತಿನಲ್ಲಿ ಸಂಜೀವ್ ಜೀವಾ ಮೇಲೆ ಗುಂಡು ಹಾರಿಸಲಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಲಕ್ನೋ ಕೋರ್ಟ್ ಕ್ಯಾಂಪಸ್‌ಗೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಈ ದಾಳಿಯಿಂದಾಗಿ ಮತ್ತೆ ಸಂಚಲನ ಮೂಡಿದೆ. ಪ್ರಯಾಗರಾಜ್ ಹತ್ಯಾಕಾಂಡದ ಸುಮಾರು ನಾಲ್ಕು ತಿಂಗಳ ನಂತರ, ಈ ಹತ್ಯಾಕಾಂಡವು ಸಂಚಲನವನ್ನು ಸೃಷ್ಟಿಸಿದೆ.
ವಕೀಲರ ಸೋಗಿನಲ್ಲಿ ಬಂದ ಕ್ರಿಮಿನಲ್‌ಗಳು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಪಿಯನ್ನು ಹಿಡಿದು ಪೊಲೀಸರು ಕೇಸರಬಾಗ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸಂಜೀವ್ ಜೀವಾ ಮುಜಾಫರ್‌ನಗರ ನಿವಾಸಿಯಾಗಿದ್ದು ಮುಖ್ತಾರ್ ಅನ್ಸಾರಿ, ಮುನ್ನಾ ಬಜರಂಗಿ ಮತ್ತು ಭಾಟಿ ಗ್ಯಾಂಗ್‌ಗಾಗಿ ಕೆಲಸ ಮಾಡುತ್ತಿದ್ದನು. ಈತನ ವಿರುದ್ಧ ಸುಮಾರು ಮೂರು ಡಜನ್ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್ ಸ್ಟರ್ ಎನ್ ಕೌಂಟರ್: ಅನಿಲ್ ದುಜಾನಾಗೆ ಗುಂಡಿಕ್ಕಿ ಹತ್ಯೆಗೈದ ಎಸ್ ಟಿಎಫ್
ಸಂಜೀವ್ ಜೀವಾ ಅವರ ಪತ್ನಿ ಪಾಯಲ್ ಮಹೇಶ್ವರಿ ಕೆಲವು ದಿನಗಳ ಹಿಂದೆ ತನ್ನ ಪತಿಗೆ ಜೀವ ಬೆದರಿಕೆಯನ್ನು ತಿಳಿಸಿ ಭದ್ರತೆಗಾಗಿ ಮನವಿ ಮಾಡಿದ್ದರು. ಇದಾದ ಬಳಿಕ ಅವರ ಭದ್ರತೆಯನ್ನೂ ಹೆಚ್ಚಿಸಲಾಗಿತ್ತು. ಆದರೆ ನ್ಯಾಯಾಲಯದ ಒಳಗೆ ದಾಳಿ ನಡೆಸಿರುವುದು ಆತಂಕವನ್ನುಂಟು ಮಾಡಿದೆ.
#मुख़्तार अंसारी का सहयोगी और संजीव महेश्वरी उर्फ़ जीवा को लखनऊ कोर्ट में जज के सामने चल रही सुनवाई के दौरान गोली मारी गई। वकील की वेशभूषा में आया था हमलावर। संजीव जीवा पेशी पर आया था। गोली कांड में घायल एक बच्ची की भी मौत।
— Mamta Tripathi (@MamtaTripathi80) June 7, 2023
भाजपा के बड़े नेता ब्रह्मदत्त द्विवेदी और कृष्णानंद राय… pic.twitter.com/w0JAZgopEJ
ಲಖನೌ ಕೋರ್ಟ್ ಕ್ಯಾಂಪಸ್‌ನಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬರ ಹೆಸರು ಲಾಲ್ ಮೊಹಮ್ಮದ್ ಎಂದು ಹೇಳಲಾಗಿದೆ. ಕೃಷ್ಣಾನಂದ ರೈ ಹತ್ಯೆ ಪ್ರಕರಣದಲ್ಲಿ ಸಂಜೀವ್ ಭಾಟಿ ಎಷ್ಟರ ಮಟ್ಟಿಗೆ ಶಾಮೀಲಾಗಿದ್ದನೆಂದರೆ ಅಂದಿನ ಶಾಸಕರ ಕಾರನ್ನು ಹತ್ತಿಸಿ ಎಕೆ 47 ನಿಂದ 27 ಗುಂಡುಗಳನ್ನು ಹಾರಿಸಿದ್ದರು ಎನ್ನಲಾಗಿದೆ. ಇದರಲ್ಲಿ ಕೃಷ್ಣಾನಂದ ರೈ ಸೇರಿದಂತೆ ಹಲವರು ಸಾವಿಗೀಡಾಗಿದ್ದರು. ಕೃಷ್ಣಾನಂದ ರೈ ಹತ್ಯೆ ಪ್ರಕರಣದಲ್ಲಿ ಮುಕ್ತಾರ್ ಅನ್ಸಾರಿ ಸೇರಿದಂತೆ ಹಲವರು ಶಿಕ್ಷೆಗೆ ಗುರಿಯಾಗಿದ್ದಾರೆ.