ರಾಜಸ್ತಾನದಲ್ಲಿ ಸಚಿನ್ ಪೈಲಟ್ ಹೊಸ ಪಕ್ಷ ಸ್ಥಾಪನೆ ಅಥವಾ ಬಿಜೆಪಿ ಸೇರ್ಪಡೆ? ಕುತೂಹಲಕ್ಕೆ ಜೂನ್ 11ಕ್ಕೆ ತೆರೆ?
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ಮುಂದಿನ ನಡೆಯ ಬಗ್ಗೆ ಊಹಾಪೋಹಗಳ ನಡುವೆ, ಅವರ ನಿಕಟವರ್ತಿಗಳು ಹೇಳುವ ಪ್ರಕಾರ, ಹಿಂದಿನ ವಸುಂಧರಾ ರಾಜೆ ಸರ್ಕಾರದ ಅವಧಿಯಲ್ಲಿ ಆಪಾದಿತ ಭ್ರಷ್ಟಾಚಾರದ ವಿರುದ್ಧ ಕ್ರಮ ಸೇರಿದಂತೆ ತಮ್ಮ ಬೇಡಿಕೆಗಳ ಬಗ್ಗೆ ದೃಢವಾಗಿದ್ದಾರೆ.
Published: 07th June 2023 11:00 AM | Last Updated: 07th June 2023 07:39 PM | A+A A-

ಸಚಿನ್ ಪೈಲಟ್
ಜೈಪುರ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ಮುಂದಿನ ನಡೆಯ ಬಗ್ಗೆ ಊಹಾಪೋಹಗಳ ನಡುವೆ, ಅವರ ನಿಕಟವರ್ತಿಗಳು ಹೇಳುವ ಪ್ರಕಾರ, ಹಿಂದಿನ ವಸುಂಧರಾ ರಾಜೆ ಸರ್ಕಾರದ ಅವಧಿಯಲ್ಲಿ ಆಪಾದಿತ ಭ್ರಷ್ಟಾಚಾರದ ವಿರುದ್ಧ ಕ್ರಮ ಸೇರಿದಂತೆ ತಮ್ಮ ಬೇಡಿಕೆಗಳ ಬಗ್ಗೆ ದೃಢವಾಗಿದ್ದಾರೆ. ಈ ಬಗ್ಗೆ ಪಕ್ಷದ ಹೈಕಮಾಂಡ್‌ನಿಂದ ನಿರ್ಣಾಯಕ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿನ್ ಪೈಲಟ್ ಹೊಸ ಪಕ್ಷವನ್ನು ಘೋಷಿಸಬಹುದು ಎಂದು ಕೆಲವು ವರದಿಗಳು ಹೇಳುತ್ತಿದ್ದರೂ, ಅಶೋಕ್ ಗೆಹ್ಲೋಟ್ ಸರ್ಕಾರವು ಹಿಂದಿನ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ಆಪಾದಿತ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮತ್ತು ತಮ್ಮ ಬೇಡಿಕೆಗಳ ಈಡೇರಿಕೆಗೆ ಮಾತ್ರ ಗಮನಹರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸರ್ಕಾರಿ ನೇಮಕಾತಿ ಪರೀಕ್ಷೆಯ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತಹ ಯುವಕರ ಸಮಸ್ಯೆಗಳನ್ನು ಸಹ ಸಚಿನ್ ಪೈಲಟ್ ಎತ್ತಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪೈಲಟ್ ಕಳೆದ ವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರೊಂದಿಗೆ ನಡೆಸಿದ ಸಭೆಯು ಇಬ್ಬರು ರಾಜಸ್ಥಾನದ ಪ್ರಮುಖರ ನಡುವಿನ ಯಾವುದೇ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
2018 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಚಾರದಲ್ಲಿ ಜಗಳದಲ್ಲಿಯೇ ನಿರತರಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಇಬ್ಬರ ನಡುವೆ ಶಾಂತಿಯನ್ನು ಸ್ಥಾಪಿಸಲು ಪಕ್ಷವು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: ಕರ್ನಾಟಕ ಆಯ್ತು, ಈಗ ರಾಜಸ್ಥಾನ ಬಿಕ್ಕಟ್ಟು ಪರಿಹಾರಕ್ಕೆ ಮುಂದಾದ ಖರ್ಗೆ!
ಜೂನ್ 11 ರಂದು ದೌಸಾದಲ್ಲಿ ತನ್ನ ತಂದೆಯ ಪುಣ್ಯತಿಥಿಯ ಸಂದರ್ಭದಲ್ಲಿ ಸಚಿನ್ ಪೈಲಟ್ ತನ್ನ ಮುಂದಿನ ದಾರಿಯ ಬಗ್ಗೆ ಸ್ಪಷ್ಟವಾದ ಸೂಚನೆಯನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಅವರು ಪಕ್ಷದ ನಾಯಕತ್ವದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದು ಚೆಂಡು ಈಗ ಹೈಕಮಾಂಡ್ ಅಂಗಳದಲ್ಲಿದೆ ಎಂದು ಅವರಿಗೆ ನಿಕಟ ಮೂಲಗಳು ತಿಳಿಸಿವೆ.
ವಾರ್ಷಿಕವಾಗಿ ನಡೆಯುವ ರಾಜೇಶ್ ಪೈಲಟ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಸಿದ್ಧತೆಗಳು ದೌಸಾದಲ್ಲಿ ಭರದಿಂದ ನಡೆಯುತ್ತಿದ್ದು, ಪೈಲಟ್‌ಗೆ ನಿಕಟವಾಗಿರುವ ಕೃಷಿ ಮಾರುಕಟ್ಟೆ ರಾಜ್ಯ ಸಚಿವ ಮುರಾರಿ ಲಾಲ್ ಮೀನಾ ಅವರು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಊಹಾಪೋಹ ಅಲ್ಲಗಳೆದ ಮುರಾರಿ ಲಾಲ್ ಮೀನಾ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ನಿಕಟವರ್ತಿ ಮತ್ತು ಗೆಹ್ಲೋಟ್ ಸರ್ಕಾರದ ಸಚಿವ ಮುರಾರಿ ಲಾಲ್ ಮೀನಾ ಅವರು ಪೈಲಟ್ ಹೊಸ ಪಕ್ಷವನ್ನು ರಚಿಸುವ ಸಾಧ್ಯತೆಯನ್ನು "ಆಧಾರವಿಲ್ಲದ ವದಂತಿ" ಎಂದು ತಳ್ಳಿಹಾಕಿದ್ದಾರೆ.
ವಾರದ ಹಿಂದೆ ದೆಹಲಿಯಲ್ಲಿ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಒಳಗೊಂಡ ಸಭೆಯ ನಂತರ, ಪೈಲಟ್ ಅವರು ಜೂನ್ 11 ರಂದು ತಮ್ಮ ತಂದೆಯ ಪುಣ್ಯತಿಥಿಯಂದು ಕಾಂಗ್ರೆಸ್ ತೊರೆದು ತಮ್ಮದೇ ಆದ ಪಕ್ಷವನ್ನು ರಚಿಸಬಹುದು ಎಂಬ ಊಹಾಪೋಹ ರಾಜಸ್ಥಾನದಲ್ಲಿ ಚಾಲ್ತಿಯಲ್ಲಿದೆ.
ಪಕ್ಷದ ನಾಯಕತ್ವವು ಅವರ ಮಾತನ್ನು ಕೇಳುತ್ತಿಲ್ಲ ಅಥವಾ ಅಶೋಕ್ ಗೆಹ್ಲೋಟ್ ಅವರ ಬೇಡಿಕೆಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರ ಬೆಂಬಲಿಗರು ಹೇಳಿದ್ದಾರೆ. ಚುನಾವಣಾ ಆಯೋಗಕ್ಕೆ 'ಕಾಂಗ್ರೆಸ್ ಪ್ರಗತಿಪರ ಪಕ್ಷ' ಎಂಬ ಹೆಸರನ್ನು ನೋಂದಾಯಿಸಲು ಪೈಲಟ್ ಅರ್ಜಿ ಸಲ್ಲಿಸಿದ್ದರು ಎಂಬ ಮಟ್ಟಕ್ಕೆ ಈ ವದಂತಿಗಳು ಮುಂದುವರೆದವು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ ಬೆಂಬಲಿಗರ ಬಡಿದಾಟ!
ಪೈಲಟ್ ಹೊಸ ಪಕ್ಷವನ್ನು ಘೋಷಿಸುವ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ನಲ್ಲಿ ಆತಂಕ ಆವರಿಸಿದೆ. ಕಳೆದ ಮೂರು ತಿಂಗಳ ಮಾದರಿಯು ವದಂತಿಗಳಿಗೆ ಉತ್ತೇಜನ ನೀಡಿದೆ. ಹಿಂದಿನ ವಸುಂಧರಾ ರಾಜೇ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಏಪ್ರಿಲ್ 11ರಂದು ಸಚಿನ್ ಪೈಲಟ್ ಧರಣಿ ನಡೆಸಿದ್ದರು. ಮೇ 11 ರಂದು, ಪೈಲಟ್ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸಲು ಅಜ್ಮೀರ್‌ನಿಂದ ಜೈಪುರಕ್ಕೆ ಕಾಲ್ನಡಿಗೆಯಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನು ಎತ್ತಿದರು.
ಪ್ರಶಾಂತ್ ಕಿಶೋರ್ ಪೈಲಟ್ ಗೆ ಸಹಾಯ?: ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ಮತ್ತು ಅವರ ಸಂಸ್ಥೆ I-PAC ಪೈಲಟ್‌ಗೆ ಸಹಾಯ ಮಾಡುತ್ತಿದೆ ಎಂದು ಊಹಿಸಲಾಗಿದೆ. I-PAC ಸ್ವಯಂಸೇವಕರು ಪೈಲಟ್‌ಗೆ ಏಪ್ರಿಲ್ 11 ರಂದು ಒಂದು ದಿನದ ಉಪವಾಸ ಮುಷ್ಕರವನ್ನು ಯೋಜಿಸಲು ಸಹಾಯ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಜ್ಮೀರ್ ಮತ್ತು ಜೈಪುರ ನಡುವಿನ ಪಾದಯಾತ್ರೆಯ ಸಲಹೆಯನ್ನು I-PAC ಸಲಹೆಗಾರರು ಒದಗಿಸಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ, ಕೃಷಿ ಮಾರುಕಟ್ಟೆ ಸಚಿವ ಮುರಾರಿ ಲಾಲ್ ಮೀನಾ ನಾನು ಇದರಲ್ಲಿ ಯಾವುದನ್ನೂ ನಂಬುವುದಿಲ್ಲ; ನನ್ನ ಅಭಿಪ್ರಾಯದಲ್ಲಿ, ಇದು ಕೇವಲ ವದಂತಿಗಳು. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ' ಎಂದರು.
“ಮಹತ್ವದ ವಿಷಯಗಳು ಉನ್ನತ ನಾಯಕರು ಅಥವಾ ಹೈಕಮಾಂಡ್‌ನಿಂದ ತಿಳಿದಿವೆ. ನಾನು ಹೈಕಮಾಂಡ್ ಜೊತೆ ನಿಕಟ ಸಂಪರ್ಕ ಹೊಂದಿಲ್ಲ. ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ನನಗೆ ತಿಳಿದಿರುವ ಆಧಾರದ ಮೇಲೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಮೀನಾ ಅವರ ಹೇಳಿಕೆ ನಿಜವಾಗಿದ್ದರೆ, ಪೈಲಟ್ ಹೊಸ ಪಕ್ಷವನ್ನು ರಚಿಸುವ ಬದಲು ಮತ್ತೊಮ್ಮೆ ತಮ್ಮದೇ ಸರ್ಕಾರದ ವಿರುದ್ಧ ಚಳವಳಿಯನ್ನು ತೀವ್ರಗೊಳಿಸುವ ಸಾಧ್ಯತೆಯಿದೆ.
2018 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದಾಗಿನಿಂದ ಗೆಹ್ಲೋಟ್ ಮತ್ತು ಪೈಲಟ್ ಅಧಿಕಾರದ ಜಗಳದಲ್ಲಿ ತೊಡಗಿದ್ದಾರೆ. 2020 ರಲ್ಲಿ, ಪೈಲಟ್ ಅವರು ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯ ಎದ್ದರು, ನಂತರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಹುದ್ದೆಗಳಿಂದ ತೆಗೆದುಹಾಕಲಾಯಿತು.