ಲಖನೌ ಕೋರ್ಟ್ ಶೂಟೌಟ್: ಸಂಜೀವ್ ಜೀವಾ ಹತ್ಯೆಗೆ 20 ಲಕ್ಷ ರೂ. ಸುಪಾರಿ ಪಡೆದಿದ್ದ ಹಂತಕ!

ಲಖನೌ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ದರೋಡೆಕೋರ ಸಂಜೀವ್ ಜೀವಾನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ದಾಳಿಕೋರ ವಿಜಯ್ ಯಾದವ್(24) ಈ ಕೊಲೆಗೆ ಬರೋಬ್ಬರಿ 20 ಲಕ್ಷ ರೂ. ಸುಪಾರಿ ಪಡೆದಿದ್ದ ಎಂಬುದು...
ಮೃತ ರೌಡಿಸೀಟರ್ ಸಂಜೀವ್
ಮೃತ ರೌಡಿಸೀಟರ್ ಸಂಜೀವ್

ಲಖನೌ: ಲಖನೌ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ದರೋಡೆಕೋರ ಸಂಜೀವ್ ಜೀವಾನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ದಾಳಿಕೋರ ವಿಜಯ್ ಯಾದವ್(24) ಈ ಕೊಲೆಗೆ ಬರೋಬ್ಬರಿ 20 ಲಕ್ಷ ರೂ. ಸುಪಾರಿ ಪಡೆದಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ವಿಜಯ್ ಯಾದವ್ ಸಂಜೀವ್ ಜೀವಾ ಮೇಲೆ 357 ಬೋರ್‌ನೊಂದಿಗೆ ಜೆಕ್ ನಿರ್ಮಿತ ಮ್ಯಾಗ್ನಮ್ ಆಲ್ಫಾ ರಿವಾಲ್ವರ್ 7 ರಿಂದ 9 ಸುತ್ತು ಗುಂಡು ಹಾರಿಸಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಸಂಜೀವ್ ಜೀವಾ ಅವರ ದೇಹದಲ್ಲಿ ಎಂಟು ಗುಂಡೇಟಿನ ಗಾಯಗಳು ಪತ್ತೆಯಾಗಿವೆ. ಆರು ಗುಂಡುಗಳು ಮುಖ್ಯ ದೇಹವನ್ನು - ಮುಂಡವನ್ನು ಭೇದಿಸಿವೆ. ಎರಡೂ ಕೈಗೆ ತಲಾ ಎರಡು ಗುಂಡುಗಳು ತಾಗಿವೆ ಎಂದು ಶವಪರೀಕ್ಷೆ ವರದಿ ಹೇಳಿದೆ.

ಜೌನ್‌ಪುರದ ಕೆರಕಟ್‌ ನಿವಾಸಿ ವಿಜಯ್‌ ಯಾದವ್ ಕೆಲಸ ಅರಸಿ ಬಂದಿದ್ದ ಸಂದರ್ಭದಲ್ಲಿ ಸಂಜೀವ್‌ ಜೀವಾನನ್ನು ಕೊಲ್ಲುವ ಸುಪಾರಿ ನೀಡಿದ ವ್ಯಕ್ತಿಯನ್ನು ಭೇಟಿಯಾಗಿರಬಹುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನು ಖಚಿತಪಡಿಸಿಕೊಳ್ಳಲು ಆರೋಪಿ ಪ್ರಜ್ಞೆಗೆ ಮರಳುವುದಕ್ಕಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ನೆನಪಿಲ್ಲ ಎನ್ನುತ್ತಿರುವ ವಿಜಯ್, ಸುಪಾರಿ ನೀಡಿದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ. ವಿಜಯ್ ಯಾದವ್ ಈ ಹಿಂದೆ ಎರಡು ಕ್ರಿಮಿನಲ್ ಕೇಸ್ ಗಳನ್ನು ಹೊಂದಿದ್ದು, 2016 ರಲ್ಲಿ ಅಜಂಗಢದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಆರು ತಿಂಗಳು ಜೈಲಿನಲ್ಲಿ ಕಳೆದಿದ್ದಾನೆ.

ಎರಡು ತಿಂಗಳ ಹಿಂದೆ ಪರಸ್ಪರ ಒಪ್ಪಿಗೆ ಮೇರೆಗೆ ಈ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. 2021 ರಲ್ಲಿ ಜೌನ್‌ಪುರ್‌ನಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತೊಂದು ಪ್ರಕರಣ ದಾಖಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com