ಕೋಟಾದಲ್ಲಿ ಜೆಇಇ ಆಕಾಂಕ್ಷಿ ಆತ್ಮಹತ್ಯೆ; ಇದೇ ವರ್ಷ 11 ವಿದ್ಯಾರ್ಥಿಗಳು ಸಾವಿಗೆ ಶರಣು!

ರಾಜಸ್ಥಾನದ ಕೋಟಾದಲ್ಲಿ 17 ವರ್ಷದ ಜೆಇಇ ಆಕಾಂಕ್ಷಿಯೊಬ್ಬ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ. ಇದರೊಂದಿಗೆ ಇದೇ ವರ್ಷ ಈ ಕೋಚಿಂಗ್ ಹಬ್‌ನಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಟಾ: ರಾಜಸ್ಥಾನದ ಕೋಟಾದಲ್ಲಿ 17 ವರ್ಷದ ಜೆಇಇ ಆಕಾಂಕ್ಷಿಯೊಬ್ಬ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ. ಇದರೊಂದಿಗೆ ಇದೇ ವರ್ಷ ಈ ಕೋಚಿಂಗ್ ಹಬ್‌ನಲ್ಲಿ ಓದುತ್ತಿದ್ದ 11 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರ್ಗವ್ ಕೇಶವ್ ಎಂಬ ವಿದ್ಯಾರ್ಥಿಯ ಶವ ಇಲ್ಲಿನ ಜವಾಹರ್ ನಗರ ಪ್ರದೇಶದ ರಾಜೀವ್ ಗಾಂಧಿ ನಗರದಲ್ಲಿ ಆತನ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯ ನಿವಾಸಿಯಾಗಿರುವ ಕೇಶವ್, ಕಳೆದ ಎರಡು ತಿಂಗಳಿನಿಂದ ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಜಂಟಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.

ಸೋಮವಾರ ಬೆಳಗ್ಗೆ ಮಗನನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದ ಪೋಷಕರು ಉಪಹಾರ ತರುವುದಕ್ಕಾಗಿ ಹೊರಗೆ ಹೋದ ನಂತರ ವಿದ್ಯಾರ್ಥಿ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಜವಾಹರ್ ನಗರ ವೃತ್ತದ ಅಧಿಕಾರಿ ಡಿಎಸ್ಪಿ ಅಮರ್ ಸಿಂಗ್ ತಿಳಿಸಿದ್ದಾರೆ.

ದಂಪತಿಗಳು ತಮ್ಮ ಮಗನ ಕೋಣೆಗೆ ಆಹಾರದೊಂದಿಗೆ ಹಿಂದಿರುಗಿದಾಗ, ಒಳಗಿನಿಂದ ಚಿಲಕ ಹಾಕಿರುವುದನ್ನು ಕಂಡು ಬಂದಿದೆ. ತಕ್ಷಣ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೇರ್‌ಟೇಕರ್ ಕಿಟಕಿಯ ಮೂಲಕ ಇಣುಕಿ ನೋಡಿದಾಗ ಕೇಶವ್ ಅವರ ದೇಹ ಸೀಲಿಂಗ್ ಫ್ಯಾನ್‌ಗೆ ನೇತಾಡುತ್ತಿರುವುದು ಕಂಡುಬಂದಿದೆ ಎಂದು ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com