Cyclone Biparjoy: ಮನೆ ತೊರೆಯಲು ಕಚ್‌ ಗ್ರಾಮಸ್ಥರ ಹಿಂದೇಟು; ಅಧಿಕಾರಿಗಳಿಗೆ ಸವಾಲಾದ ಸ್ಥಳಾಂತರ ಕಾರ್ಯ!

ಬೈಪರ್‌ಜೋಯ್ ಚಂಡಮಾರುತದ ಹಿನ್ನೆಲೆಯಲ್ಲಿ ಕಚ್ ಜಿಲ್ಲೆಯ ಕರಾವಳಿ ಗ್ರಾಮಗಳಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಆದರೆ ಅನೇಕ ಗ್ರಾಮಸ್ಥರು ತಮ್ಮ ಜಾನುವಾರು ಮತ್ತು ಸಾಮಾನುಗಳನ್ನು ಬಿಡಲು ಹಿಂಜರಿಯುತ್ತಿರುವುದರಿಂದ ಅಧಿಕಾರಿಗಳು ಸವಾಲನ್ನು ಎದುರಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಚ್: ಬೈಪರ್‌ಜೋಯ್ ಚಂಡಮಾರುತದ ಹಿನ್ನೆಲೆಯಲ್ಲಿ ಕಚ್ ಜಿಲ್ಲೆಯ ಕರಾವಳಿ ಗ್ರಾಮಗಳಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಆದರೆ ಅನೇಕ ಗ್ರಾಮಸ್ಥರು ತಮ್ಮ ಜಾನುವಾರು ಮತ್ತು ಸಾಮಾನುಗಳನ್ನು ಬಿಡಲು ಹಿಂಜರಿಯುತ್ತಿರುವುದರಿಂದ ಅಧಿಕಾರಿಗಳು ಸವಾಲನ್ನು ಎದುರಿಸುತ್ತಿದ್ದಾರೆ.

ಪ್ರಬಲ ಚಂಡಮಾರುತ ಗುರುವಾರ ಸಂಜೆ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಅಪ್ಪಳಿಸುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಕಚ್, ದೇವಭೂಮಿ ದ್ವಾರಕಾ ಮತ್ತು ಜಾಮ್‌ನಗರ ಜಿಲ್ಲೆಗಳಲ್ಲಿ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ.

ಕಛ್ ಜಿಲ್ಲೆಯ ಕರಾವಳಿಯಿಂದ 5 ಕಿ.ಮೀ ದೂರದಲ್ಲಿರುವ ಆಶಿರ್ವಾಡ ಗ್ರಾಮದಲ್ಲಿ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಮನವೊಲಿಸಲು ಸಭೆ ನಡೆಸಿದ ನಂತರವೇ ಜನರು ಹೊರಹೋಗಲು ಒಪ್ಪಿಕೊಂಡಿದ್ದಾರೆ. 

ಸರ್ಕಾರಿ ಕಾರ್ಮಿಕ ಅಧಿಕಾರಿ ಸಿ ಟಿ ಭಟ್ ಮಾತನಾಡಿ, ಆಡಳಿತವು ಚಂಡಮಾರುತದಲ್ಲಿ ಸಾವುನೋವುಗಳನ್ನು ತಪ್ಪಿಸಲು ಬಯಸುತ್ತಿದೆ. ಸಮುದ್ರದ ಸಮೀಪದ 10 ಕಿ.ಮೀ ಪ್ರದೇಶದಲ್ಲಿ ನಿವಾಸಿಗಳನ್ನು ಸ್ಥಳಾಂತರಿಸಲು ಆಡಳಿತವು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಮಂಗಳವಾರ ಪಿಟಿಐಗೆ ತಿಳಿಸಿದರು.

ನಾವು ಜನರನ್ನು ಚಂಡಮಾರುತದ ಪ್ರಭಾವದಿಂದ ತಪ್ಪಿಸಲು ಆಶ್ರಯ ತಾಣಗಳಿಗೆ ಸ್ಥಳಾಂತರಿಸುತ್ತಿದ್ದೇವೆ. ನಾವು ಅವರಿಗೆ ಆಹಾರ ಮತ್ತು ಇತರ ಮೂಲಭೂತ ವಸ್ತುಗಳನ್ನು ಒದಗಿಸುವ ಮೂಲಕ ಕಾಳಜಿ ವಹಿಸುತ್ತಿದ್ದೇವೆ. ಗ್ರಾಮದ ಮುಖ್ಯಸ್ಥ ಆಡಮ್ ಇಬ್ರಾಹಿಂ ಅವರು ಆಶ್ರಯಕ್ಕೆ ತೆರಳಲು ಒಪ್ಪಿಕೊಂಡಿದ್ದಾರೆ. ಆದರೆ ಸುಮಾರು ಅರ್ಧದಷ್ಟು ನಿವಾಸಿಗಳು 400 ಜನರು ಗ್ರಾಮದಲ್ಲಿ ಉಳಿದಿದ್ದಾರೆ. ನಮ್ಮ ಬದುಕಿಗಾಗಿ ನಾವು ದನಗಳನ್ನು ಸಾಕುತ್ತೇವೆ. ನಾವು ಅವುಗಳನ್ನು ಬಿಟ್ಟು ಹೋಗುವುದಿಲ್ಲ, ಮಹಿಳೆಯರು ಮತ್ತು ಮಕ್ಕಳನ್ನು ನಿರಾಶ್ರಿತರ ಶಿಬಿರಗಳಿಗೆ ಕಳುಹಿಸುತ್ತೇವೆ ಹೇಳುತ್ತಿರುವುದಾಗಿ ಅವರು ಹೇಳಿದರು.

ಬಸ್ ಮತ್ತು ಖಾಸಗಿ ವಾಹನಗಳಲ್ಲಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಇಲ್ಲಿಯವರೆಗೆ ವಿವಿಧ ಗ್ರಾಮಗಳಿಂದ ಕನಿಷ್ಠ 78 ಜನರನ್ನು ಆಶ್ರಯವಾಗಿ ಪರಿವರ್ತಿಸಲಾದ ಜಖೌ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ. ನಮ್ಮನ್ನು ಜಖೌ ಬಂದರಿನಿಂದ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ನಮ್ಮ ಲಕ್ಷಾಂತರ ಮೌಲ್ಯದ ವಸ್ತುಗಳು ನಮ್ಮ ಗುಡಿಸಲುಗಳಲ್ಲಿ ಬಿದ್ದಿವೆ. ಚಂಡಮಾರುತದಲ್ಲಿ ಅವುಗಳಿಗೆ ಏನಾಗುತ್ತದೆ? ಹಾನಿಗೆ ಸರ್ಕಾರ ಪರಿಹಾರವನ್ನು ನೀಡುತ್ತದೆಯೇ?" ಎಂದು ಸ್ಥಳಾಂತರಗೊಂಡ ಹವಾಬಾಯಿ ಕೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com