
ತಿರುವನಂತಪುರಂ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ ಕೇರಳ ಕೋರ್ಟ್ 135 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಅಪರಾಧಿ ತನ್ನ ಸೋದರ ಸಂಬಂಧಿಯ ಮೇಲೆ 2 ವರ್ಷಗಳ ಹಿಂದೆ ಅತ್ಯಾಚಾರವೆಸಗಿದ್ದ. ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಜಿ ಕುಮಾರ್ ತೀರ್ಪು ಪ್ರಕಟಿಸಿದ್ದು, ಪೋಕ್ಸೋ ಕಾಯ್ದೆ, ಐಪಿಸಿ, ಐಟಿ ಕಾಯ್ದೆ, ಬಾಲಾಪರಾಧಿ ನ್ಯಾಯಾಂಗ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳ ಅಡಿಯಲ್ಲಿ ಅಪರಾಧಿಗೆ 135 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದಾರೆ.
ಈಗ ಆತ ಜೈಲಿನಲ್ಲೆ ಇರುವುದರಿಂದ ಹಾಗೂ ಆ ಪೈಕಿ ಗರಿಷ್ಠವಾದ್ದು 20 ವರ್ಷವಾಗಿದ್ದರಿಂದ ಅಪರಾಧಿ 20 ವರ್ಷಗಳ ಕಾಲ ಜೈಲಿನಲ್ಲಿರಲಿದ್ದಾನೆ.
ಅಪರಾಧಿಗೆ 5.1 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಸಂತ್ರಸ್ತೆಗೆ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ. ಪ್ರಾಸಿಕ್ಯೂಷನ್ ಪ್ರಕಾರ, ಅಪರಾಧಿ ಸಂತ್ರಸ್ತೆಯ ತಂದೆಯ ಹಿರಿಯ ಸಹೋದರನ ಮಗನಾಗಿದ್ದು, ಅವಳನ್ನು ತನ್ನ ಶಾಲೆಗೆ ಕರೆದೊಯ್ದು ತನ್ನ ತಾಯಿಯ ಅಜ್ಜಿಯ ಮನೆಗೆ ಮರಳಿ ಕರೆತರುತ್ತಿದ್ದನು.
Advertisement