ಜಿ-20 ವಿದೇಶಾಂಗ ಸಚಿವರ ಸಭೆ: ಬಹುಪಕ್ಷೀಯತೆ, ಆಹಾರ, ಇಂಧನ ಭದ್ರತೆ ಕುರಿತ ಮೊದಲ ಅಧಿವೇಶನ ಆರಂಭ
ಬಹುಪಕ್ಷೀಯತೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಅಭಿವೃದ್ಧಿ ಸಹಕಾರ ಕುರಿತು ಜಿ20 ವಿದೇಶಾಂಗ ಸಚಿವರ ಸಭೆಯ ಮೊದಲ ಅಧಿವೇಶನ ಗುರುವಾರ ಆರಂಭವಾಗಿದೆ.
Published: 02nd March 2023 01:05 PM | Last Updated: 02nd March 2023 01:13 PM | A+A A-

ಜಿ-20 ವಿದೇಶಾಂಗ ಸಚಿವರ ಸಭೆ
ನವದೆಹಲಿ: ಬಹುಪಕ್ಷೀಯತೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಅಭಿವೃದ್ಧಿ ಸಹಕಾರ ಕುರಿತು ಜಿ20 ವಿದೇಶಾಂಗ ಸಚಿವರ ಸಭೆಯ ಮೊದಲ ಅಧಿವೇಶನ ಗುರುವಾರ ಆರಂಭವಾಗಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಸಭೆಯಲ್ಲಿ' ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಭಾರತದ ಧ್ಯೇಯೋದ್ದೇಶವನ್ನು ಮನವರಿಕೆ ಮಾಡಿಕೊಡಲಾಗುತ್ತದೆ.
ಇದನ್ನೂ ಓದಿ: ಜಿ20 ವಿದೇಶಾಂಗ ಸಚಿವರ ಸಭೆ: ಉಕ್ರೇನ್ ಯುದ್ಧ ವಿಚಾರದಲ್ಲಿ ಭಿನ್ನಮತ
ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ದೃಷ್ಟಿಕೋನವನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಜಿ-20 ವಿದೇಶಾಂಗ ಸಚಿವರ ಸಭೆಯ ಮೊದಲ ಅಧಿವೇಶನ ನಡೆಯುತ್ತಿದೆ. ಬಹುಪಕ್ಷೀಯತೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಅಭಿವೃದ್ಧಿ ಸಹಕಾರ ಸುತ್ತಲಿನ ಸಮಕಾಲೀನ ಸವಾಲುಗಳ ಮೇಲೆ ಗಮನ ಕೇಂದ್ರೀಕರಿಸಿ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
Towards realising the vision of One Earth, One Family, One Future.
— Arindam Bagchi (@MEAIndia) March 2, 2023
Session I of #G20FMM gets underway.
Discussions to focus on contemporary challenges around multilateralism, food & energy security and development cooperation. pic.twitter.com/Tmig67IWWT
ನಿನ್ನೆ ದೆಹಲಿಯಲ್ಲಿ ಜಿ 20 ವಿದೇಶಿ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಷ್ಯಾ-ಉಕ್ರೇನ್ ಯುದ್ಧ ಕುರಿತ ಚರ್ಚೆಗಳು ಶೃಂಗಸಭೆಯ ಉಳಿದ ಕಾರ್ಯಸೂಚಿಗಳನ್ನು ಹಳಿತಪ್ಪಿಸಬಾರದು ಎಂದು ಸುಳಿವು ನೀಡಿದ್ದರು.