'ಜಾಗತಿಕ ಆಡಳಿತ ವಿಫಲವಾಗಿದೆ', ಉಕ್ರೇನ್ ಯುದ್ಧ ವಿಚಾರದಲ್ಲಿ ಭಿನ್ನಮತ ಬಗೆಹರಿಸಲು ಜಿ20 ಸೇತುವೆಯಾಗಬೇಕು: ಪ್ರಧಾನಿ ಮೋದಿ
ಉಕ್ರೇನ್ ಮೇಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಜಿ20 ರಾಷ್ಟ್ರಗಳಿಗೆ ಕರೆ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಆಡಳಿತವು "ವಿಫಲವಾಗಿದೆ" ಎಂದು ಹೇಳಿದ್ದಾರೆ.
Published: 02nd March 2023 12:31 PM | Last Updated: 03rd March 2023 02:20 PM | A+A A-

ಜಿ20 ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಉಕ್ರೇನ್ ಮೇಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಜಿ20 ರಾಷ್ಟ್ರಗಳಿಗೆ ಕರೆ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಆಡಳಿತವು "ವಿಫಲವಾಗಿದೆ" ಎಂದು ಹೇಳಿದ್ದಾರೆ.
"ಕಳೆದ ಕೆಲವು ವರ್ಷಗಳ ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಸಾಂಕ್ರಾಮಿಕ, ಭಯೋತ್ಪಾದನೆ ಮತ್ತು ಯುದ್ಧಗಳನ್ನು ನೋಡಿದಾಗ ಜಾಗತಿಕ ಆಡಳಿತವು ವಿಫಲವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ" ಎಂದು ಜಿ 20 ವಿದೇಶಾಂಗ ಮಂತ್ರಿಗಳ ಸಭೆಯ ಉದ್ಘಾಟನೆ ದಿನ ವರ್ಚುವಲ್ ಮೂಲಕ ಮಾತನಾಡಿರುವ ಮೋದಿ ಹೇಳಿದ್ದಾರೆ.
"ನಾವು ಆಳವಾದ ಜಾಗತಿಕ ವಿಭಜನೆಯ ಸಮಯದಲ್ಲಿ ಭೇಟಿಯಾಗುತ್ತಿದ್ದೇವೆ. ಈ ಉದ್ವಿಗ್ನತೆಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ನಾವೆಲ್ಲರೂ ನಮ್ಮ ನಿಲುವುಗಳನ್ನು ಮತ್ತು ನಮ್ಮ ದೃಷ್ಟಿಕೋನಗಳನ್ನು ಹೊಂದಿದ್ದೇವೆ. ಆದಾಗ್ಯೂ, ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳಾಗಿ ನಾವು ಸಹ ಜವಾಬ್ದಾರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಭಾರತವು ಈ ವರ್ಷ ತನ್ನ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು ಬಡತನವನ್ನು ನಿವಾರಿಸುವುದು ಮತ್ತು ಹವಾಮಾನ ಹಣಕಾಸು ಮುಂತಾದ ವಿಷಯಗಳ ಮೇಲೆ ಕೇಂದ್ರೀಕರಿಸಲು ಬಯಸಿದೆ. ಆದರೆ ಉಕ್ರೇನ್ ಯುದ್ಧವು ಇಂತಹ ಅಜೆಂಡಾಗಳಿಂದ ದೂರವಿರುವಂತೆ ಮಾಡಿದೆ ಎಂದರು.
ಇದನ್ನೂ ಓದಿ: ಜಿ20 ವಿದೇಶಾಂಗ ಸಚಿವರ ಸಭೆ: ಉಕ್ರೇನ್ ಯುದ್ಧ ವಿಚಾರದಲ್ಲಿ ಭಿನ್ನಮತ
ಜುಲೈ ನಂತರ ಮೊದಲ ಬಾರಿಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಒಂದೇ ಕಡೆ ಸಭೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಇಬ್ಬರೂ ಮಾತುಕತೆ ನಡೆಸುವುದು ಸಂಶಯವಾಗಿದೆ.
ಚೀನಾ ರಷ್ಯಾದ ಮಿತ್ರರಾಷ್ಟ್ರಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಪರಿಗಣಿಸುತ್ತಿದೆ ಮತ್ತು ಅವರು ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಬೀಜಿಂಗ್ ನ್ನು ನಿರುತ್ಸಾಹಗೊಳಿಸಲು ವಿದೇಶಾಂಗ ಮಂತ್ರಿಗಳ ಶೃಂಗಸಭೆಯನ್ನು ಬಳಸುತ್ತಾರೆ ಎಂದು ಪಾಶ್ಚಿಮಾತ್ಯ ಪ್ರತಿನಿಧಿಗಳಲ್ಲಿ ಆತಂಕವಿದೆ.
ರಷ್ಯಾದೊಂದಿಗಿನ ಭಾರತದ ದೀರ್ಘಾವಧಿಯ ಭದ್ರತಾ ಸಂಬಂಧಗಳು ಕಳೆದ ವರ್ಷದಿಂದ ಆಕ್ರಮಣವನ್ನು ಖಂಡಿಸಲು ನಿರಾಕರಿಸಿದ ನಂತರ ವಿಚಿತ್ರವಾದ ರಾಜತಾಂತ್ರಿಕ ಸ್ಥಾನದಲ್ಲಿ ಇರಿಸಿದೆ.ಆದರೆ EU ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಪ್ ಬೊರೆಲ್ ಅವರು "ಈ ಯುದ್ಧವು ಕೊನೆಗೊಳ್ಳಬೇಕು ಎಂದು ರಷ್ಯಾವನ್ನು ಅರ್ಥಮಾಡಿಕೊಳ್ಳಲು" ಭಾರತವು ಸಭೆಯನ್ನು ಬಳಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿ20 ಹಣಕಾಸು ಸಚಿವರ ಸಭೆ: ಜರ್ಮನಿ ಮತ್ತು ಕೆನಡಾ ಕಡೆಯಿಂದ ಛೀಮಾರಿ; ರಷ್ಯಾ ಅಧಿಕಾರಿಗಳ ಆರೋಪ
ಮಾಸ್ಕೋದಲ್ಲಿ ಲಾವ್ರೊವ್ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ನಂತರ ಬೀಜಿಂಗ್ ರಷ್ಯಾದೊಂದಿಗೆ "ಕಾರ್ಯತಂತ್ರದ ಸಮನ್ವಯವನ್ನು ಬಲಪಡಿಸಲು" ಸಿದ್ಧವಾಗಿದೆ ಎಂದು ಚೀನಾದ ಸುದ್ದಿ ಸಂಸ್ಥೆ ಕ್ಸಿನ್ಹುವಾ ಕಳೆದ ವಾರ ಉನ್ನತ ರಾಜತಾಂತ್ರಿಕ ವಾಂಗ್ ಯಿ ಅವರನ್ನು ಉಲ್ಲೇಖಿಸಿದ್ದಾರೆ.
ಕಳೆದ ವಾರ ಬೆಂಗಳೂರಿನಲ್ಲಿ ನಡೆದ G20 ಹಣಕಾಸು ಮಂತ್ರಿಗಳ ಸಭೆಯು ರಷ್ಯಾ ಮತ್ತು ಚೀನಾ ಯುದ್ಧದ ಬಗ್ಗೆ ಸಾಮಾನ್ಯ ಹೇಳಿಕೆಯನ್ನು ಒಪ್ಪಿಕೊಳ್ಳಲು ವಿಫಲವಾಗಿದೆ. ಭಾರತವು ಉಕ್ರೇನ್ ಆಕ್ರಮಣವನ್ನು ಖಂಡಿಸದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಪುಟಿನ್‌ಗೆ ಇದು "ಯುದ್ಧದ ಸಮಯವಲ್ಲ" ಎಂದು ಮಾಸ್ಕೋಗೆ ಛೀಮಾರಿಯಾಗಿ ಕಾಣುವ ಹೇಳಿಕೆಗಳನ್ನು ನೀಡಿದ್ದರು.
ಇಂದಿನ ಸಭೆಯು ದೇಶಗಳ ಮಧ್ಯೆ ಭಿನ್ನಾಭಿಪ್ರಾಯವನ್ನು ಬಗೆಹರಿಸುವ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.