ರಾಮ್ ರಹೀಮ್ ಸರಣಿ ಹಂತಕ ಅಲ್ಲ: ಡೇರಾ ಮುಖ್ಯಸ್ಥನಿಗೆ ಪೆರೋಲ್ ಸಮರ್ಥಿಸಿಕೊಂಡ ಹರಿಯಾಣ ಸರ್ಕಾರ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ನೀಡಿರುವ ಪೆರೋಲ್ ಅನ್ನು ಹರಿಯಾಣ ಸರ್ಕಾರ ಸಮರ್ಥಿಸಿಕೊಂಡಿದ್ದು, ಅವರು 'ಕಠಿಣ ಕೈದಿ' ವರ್ಗದ ಅಡಿಯಲ್ಲಿ ಬರುವುದಿಲ್ಲ...
ಗುರ್ಮೀತ್ ರಾಮ್ ರಹೀಮ್ ಸಿಂಗ್
ಗುರ್ಮೀತ್ ರಾಮ್ ರಹೀಮ್ ಸಿಂಗ್

ಚಂಡೀಗಢ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ನೀಡಿರುವ ಪೆರೋಲ್ ಅನ್ನು ಹರಿಯಾಣ ಸರ್ಕಾರ ಸಮರ್ಥಿಸಿಕೊಂಡಿದ್ದು, ಅವರು 'ಕಠಿಣ ಕೈದಿ' ವರ್ಗದ ಅಡಿಯಲ್ಲಿ ಬರುವುದಿಲ್ಲ ಮತ್ತು ಅವರು ಸರಣಿ ಹಂತಕ ಅಲ್ಲ ಎಂದು ಹೇಳಿದೆ.

ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಮುಖ್ಯಸ್ಥನಿಗೆ ಜನವರಿ 20 ರಂದು 40 ದಿನಗಳ ಪೆರೋಲ್ ನೀಡಲಾಗಿದೆ. ಎರಡು ಕೊಲೆ ಪ್ರಕರಣಗಳಲ್ಲೂ ರಾಮ್ ರಹೀಮ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ.

ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ(ಎಸ್‌ಜಿಪಿಸಿ) ಇತ್ತೀಚೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪೆರೋಲ್ ಆದೇಶವನ್ನು ಪ್ರಶ್ನಿಸಿದೆ. ಅಲ್ಲದೆ ಎರಡು ಕೊಲೆ ಪ್ರಕರಣಗಳಲ್ಲಿ ರಾಮ್ ರಹೀಮ್ ಸಿಂಗ್ ಗೆ ಶಿಕ್ಷೆ ಆಗಿರುವುದರಿಂದ ಅವರು "ಸರಣಿ ಹಂತಕ" ಎಂದು ವಾದಿಸಿದೆ.

ಡೇರಾ ಮುಖ್ಯಸ್ಥ ಶಿಕ್ಷೆ ಅನುಭವಿಸುತ್ತಿರುವ ರೋಹ್ಟಕ್‌ನ ಸುನಾರಿಯಾ ಜೈಲಿನ ಅಧೀಕ್ಷಕರ ಮೂಲಕ ನೀಡಿದ ಉತ್ತರದಲ್ಲಿ, ರಾಜ್ಯ ಸರ್ಕಾರವು ಪೆರೋಲ್ ನೀಡುವ ಮೂಲಕ ಯಾವುದೇ ಅಕ್ರಮ ಎಸಗಿಲ್ಲ ಎಂದು ಹೇಳಿದೆ.

ಎಸ್‌ಜಿಪಿಸಿ ವಾದವನ್ನು ತಳ್ಳಿಹಾಕಿದ ರಾಜ್ಯ ಸರ್ಕಾರ, ಎರಡು ವಿಭಿನ್ನ ಕೊಲೆ ಪ್ರಕರಣಗಳಲ್ಲಿ ರಾಮ್ ರಹೀಮ್ ಸಿಂಗ್ ಅವರಿಗೆ ಶಿಕ್ಷೆಯಾಗಿದ್ದು, ಇದನ್ನು "ಸರಣಿ ಕೊಲೆ" ಎಂದು ಕರೆಯಲಾಗುವುದಿಲ್ಲ. ಏಕೆಂದರೆ ಅವರು ನೇರವಾಗಿ ಕೊಲೆ ಮಾಡಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com