ಸೋನಿಯಾ ಪಿಎ, ಕೇಂದ್ರ ಸಚಿವನಂತೆ ಸೋಗು ಹಾಕಿದ ವಂಚಕನ ಬಂಧನ
ದುರುದ್ದೇಶದಿಂದ ಕೇಂದ್ರ ಸಚಿವನಂತೆ ಬಿಂಬಿಸಿಕೊಳ್ಳುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ದೆಹಲಿ ಪೊಲೀಸ್ ವಿಶೇಷ ಘಟಕದ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸಂಜಯ್ ತಿವಾರಿ ಮತ್ತು ಆತನ ಮೂವರು ಸಹಚರರನ್ನು ವಿಶೇಷ ದಳ ಬಂಧಿಸಿದೆ.
Published: 03rd March 2023 11:51 AM | Last Updated: 03rd March 2023 11:51 AM | A+A A-

ಸೋನಿಯಾ ಗಾಂಧಿ
ನವದೆಹಲಿ: ದುರುದ್ದೇಶದಿಂದ ಕೇಂದ್ರ ಸಚಿವನಂತೆ ಬಿಂಬಿಸಿಕೊಳ್ಳುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ದೆಹಲಿ ಪೊಲೀಸ್ ವಿಶೇಷ ಘಟಕದ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸಂಜಯ್ ತಿವಾರಿ ಮತ್ತು ಆತನ ಮೂವರು ಸಹಚರರನ್ನು ವಿಶೇಷ ದಳ ಬಂಧಿಸಿದೆ.
ಸಂಜಯ್ ಕೇಂದ್ರ ಸಚಿವನಂತೆ ನಟಿಸುತ್ತಿದ್ದ ಎಂದು ದೆಹಲಿ ಪೊಲೀಸ್ ವಿಶೇಷ ಘಟಕ ಹೇಳಿದೆ. ಗುಪ್ತಚರ ಸಂಸ್ಥೆಯೊಂದಿಗೆ ಜಂಟಿಯಾಗಿ ವಂಚಕನನ್ನು ವಿವರವಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜಯ್ ಹಿಂದೆ ಇದೇ ರೀತಿಯ ಅಪರಾಧವೆಸಗಿದ್ದಾನೆ. 2017 ರಲ್ಲಿ ಸೋನಿಯಾ ಗಾಂಧಿ ಅವರ ವೈಯಕ್ತಿಕ ಸಹಾಯಕ (ಪಿಎ) ಆಗಿ ಬಿಂಬಿಸಿಕೊಂಡಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.