ನಮ್ಮ ಸಂಸತ್ ನಲ್ಲಿ ಮೈಕ್ರೋಫೋನ್ ಗಳನ್ನು ನಿಶ್ಯಬ್ದಗೊಳಿಸಲಾಗುತ್ತಿದೆ: ಬ್ರಿಟೀಷ್ ಸಂಸದರಿಗೆ ರಾಹುಲ್ ಗಾಂಧಿ

ನಮ್ಮ ಸಂಸತ್ ನಲ್ಲಿ ಮೈಕ್ರೋಫೋನ್ ಗಳನ್ನು ನಿಶ್ಯಬ್ದಗೊಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟೀಷ್ ಸಂಸದರೆದುರು ಹೇಳಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಬ್ರಿಟನ್: ನಮ್ಮ ಸಂಸತ್ ನಲ್ಲಿ ಮೈಕ್ರೋಫೋನ್ ಗಳನ್ನು ನಿಶ್ಯಬ್ದಗೊಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟೀಷ್ ಸಂಸದರೆದುರು ಹೇಳಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
 
ಹೌಸಸ್ ಆಫ್ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ನಲ್ಲಿ ಬ್ರಿಟೀಷ್ ಸಂಸದರೆದುರು ಮಾತನಾಡಿರುವ ರಾಹುಲ್ ಗಾಂಧಿ, ಈ ಹೇಳಿಕೆಯನ್ನು ನೀಡಿದ್ದು, ಲೋಕಸಭೆಯಲ್ಲಿ ಆಗಾಗ್ಗೇ ವಿಪಕ್ಷಗಳ ವಿರುದ್ಧ ಮೈಕ್ರೋಫೋನ್ ಗಳನ್ನು ನಿಶ್ಯಬ್ದಗೊಳಿಸಲಾಗುತ್ತದೆ ಎಂದು ಆರೋಪ ಮಾಡಿದ್ದಾರೆ.

ಭಾರತೀಯ ಮೂಲದ ಲೇಬರ್ ಪಕ್ಷದ ಸಂಸದ ವಿರೇಂದ್ರ ಶರ್ಮಾ ಅವರು ಆಯೋಜಿಸಿದ್ದ ಗ್ರಾಂಡ್ ಕಮಿಟಿ ರೂಮ್ ನಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆಯ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ಅದನ್ನು ಅದನ್ನು ಜನ ಸಮೂಹವನ್ನು ತಲುಪಿದ ಆಳವಾದ ರಾಜಕೀಯ ಚಟುವಟಿಕೆ ಎಂದು ಬಣ್ಣಿಸಿದ್ದಾರೆ. 

ರಾಹುಲ್ ಗಾಂಧಿ ಇದೇ ವೇಳೆ ಲಘು ಧಾಟಿಯಲ್ಲಿ ಮಾತನಾಡಿದ್ದು, ದುರಸ್ತಿಯಾಗಬೇಕಿದ್ದ ಮೈಕ್ರೋಫೋನ್ ಒಂದರ ಸಹಾಯದಿಂದ, ಆ ಪರಿಸ್ಥಿತಿಯನ್ನು ಭಾರತದಲ್ಲಿ ವಿಪಕ್ಷಗಳನ್ನು ತುಳಿಯಲಾಗುತ್ತಿರುವ ಬಗೆಯನ್ನು ವಿವರಿಸಿದ್ದಾರೆ.

ನಮ್ಮ ಮೈಕ್ ಗಳು ದುರಸ್ತಿಯಾಗಬೇಕಿಲ್ಲ. ಅವು ಕಾರ್ಯನಿರ್ವಹಿಸುತ್ತಿವೆ. ಆದರೆ ಅದನ್ನು ಚಾಲೂ ಮಾಡುವುದಕ್ಕೆ ಸಾಧ್ಯವಿಲ್ಲ. ನಾನು ಮಾತನಾಡುತ್ತಿದ್ದಾಗ ಹಲವು ಬಾರಿ ನನಗೆ ಇದರ ಅನುಭವ ಆಗಿದೆ ಎಂದು ರಾಹುಲ್ ಗಾಂಧಿ ಭಾರತದಲ್ಲಿ ರಾಜಕಾರಣಿಯಾಗಿರುವ ಬಗ್ಗೆ ತಮ್ಮ ಅನುಭವಗಳನ್ನು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹಂಚಿಕೊಂಡಿದ್ದಾರೆ.
 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com