ಕರ್ನಾಟಕದಲ್ಲಿ ಕೋಟ್ಯಾಂತರ ರೂ. ಸಿಕ್ಕರೂ ಬಿಜೆಪಿ ಶಾಸಕನನ್ನು ಏಕೆ ಬಂಧಿಸಿಲ್ಲ?: ಪ್ರಧಾನಿ ಮೋದಿಗೆ ಕೇಜ್ರಿವಾಲ್
ಲೋಕಾಯುಕ್ತ ದಾಳಿ ವೇಳೆ ಕೋಟ್ಯಾಂತರ ರೂಪಾಯಿ ನಗದು ಸಿಕ್ಕರೂ ಕರ್ನಾಟಕದ ಬಿಜೆಪಿ ಶಾಸಕನನ್ನು ಏಕೆ ಬಂದಿಸಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ಪ್ರಧಾನಿ...
Published: 07th March 2023 07:27 PM | Last Updated: 07th March 2023 08:08 PM | A+A A-

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ಲೋಕಾಯುಕ್ತ ದಾಳಿ ವೇಳೆ ಕೋಟ್ಯಾಂತರ ರೂಪಾಯಿ ನಗದು ಸಿಕ್ಕರೂ ಕರ್ನಾಟಕದ ಬಿಜೆಪಿ ಶಾಸಕನನ್ನು ಏಕೆ ಬಂದಿಸಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಪ್ರಧಾನಿ ಉದ್ದೇಶಿಸಿ ಕುಟುಕು ಟಿಪ್ಪಣಿಯನ್ನು ಟ್ವೀಟ್ ಮಾಡಿರುವ ದೆಹಲಿ ಸಿಎಂ, ಟಿಪ್ಪಣಿಯ ವಿಷಯ: ಲಂಚ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕನಿಗೆ ಜಾಮೀನು ಎಂದು ಬರೆದಿದ್ದಾರೆ.
ಲಂಚ ಪ್ರಕರಣದಲ್ಲಿ ಇಂದು ನಿರೀಕ್ಷಣಾ ಜಾಮೀನು ಪಡೆದ ಕರ್ನಾಟಕದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಉದಾಹರಣೆಯನ್ನು ಉಲ್ಲೇಖಿಸಿದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಬಂಧಿಸಿದ ನೀವು, ಬಿಜೆಪಿ ಶಾಸಕನನ್ನು ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಲೋಕಾಯುಕ್ತ ದಾಳಿ ವೇಳೆ ಸಿಕ್ಕ ಹಣಕ್ಕೆ ನಮ್ಮ ಬಳಿ ದಾಖಲೆ ಇದೆ, ವಾಪಸ್ ಪಡೆಯುತ್ತೇವೆ: ಮಾಡಾಳ್ ವಿರೂಪಾಕ್ಷಪ್ಪ
"ಮನೀಷ್ ಸಿಸೋಡಿಯಾ ಅವರ ಮನೆಯಲ್ಲಿ ನಡೆದ ದಾಳಿಯಲ್ಲಿ ಏನೂ ಪತ್ತೆಯಾಗಿಲ್ಲ. ಆದರೂ ಸಿಬಿಐ, ಇಡಿ(ಜಾರಿ ನಿರ್ದೇಶನಾಲಯ) ಎಲ್ಲಾ ಸೆಕ್ಷನ್‌ಗಳನ್ನು ಅನ್ವಯಿಸಿ ಅವರನ್ನು ಬಂಧಿಸಲಾಗಿದೆ. ನಿಮ್ಮ ಪಕ್ಷದ ಶಾಸಕರ ಮನೆಯಲ್ಲಿ ಅಷ್ಟು ದೊಡ್ಡ ಪ್ರಮಾಣದ ನಗದು ಪತ್ತೆಯಾಗಿದೆ. ಆದರೂ ಅವರನ್ನು ಏಕೆ ಬಂಧಿಸಲಿಲ್ಲ?" ಎಂದು ಎಎಪಿ ಮುಖ್ಯಸ್ಥ ಪ್ರಶ್ನಿಸಿದರು.