ದೆಹಲಿ ಅಬಕಾರಿ ನೀತಿ ಕೇಸು: ಇಡಿ ಮುಂದೆ ವಿಚಾರಣೆಗೆ ಬಿಆರ್ ಎಸ್ ನಾಯಕಿ ಕವಿತಾ ಹಾಜರು

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಪುತ್ರಿ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರು ಶನಿವಾರ ದೆಹಲಿಯ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಗೆ ಆಗಮಿಸಿ ದೆಹಲಿ ಸರ್ಕಾರದ ಮದ್ಯ ನೀತಿಯಲ್ಲಿ ಮದ್ಯ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವಲ್ಲಿ ಅವರ ಪಾತ್ರದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಪುತ್ರಿ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರು ಶನಿವಾರ ಬೆಳಗಿನ ಜಾವ 11 ಗಂಟೆ ಸುಮಾರಿಗೆ ದೆಹಲಿಯ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಗೆ ಆಗಮಿಸಿ ದೆಹಲಿ ಸರ್ಕಾರದ ಮದ್ಯ ನೀತಿಯಲ್ಲಿ ಮದ್ಯ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವಲ್ಲಿ ಅವರ ಪಾತ್ರದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸಲು ಮತ್ತು ಅಂಗೀಕರಿಸಲು ಜಂತರ್ ಮಂತರ್‌ನಲ್ಲಿ ರಾಜಕೀಯ ರ್ಯಾಲಿ ಇದ್ದುದರಿಂದ ಇಡಿ ವಿಚಾರಣೆಯ ಮೊನ್ನೆ ಮಾರ್ಚ್ 9 ರ ಸಮನ್ಸ್ ನ್ನು ಬಿಟ್ಟುಬಿಟ್ಟಿದ್ದರು. 

ಕವಿತಾ ಅವರ ವಿಚಾರಣೆಯು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಹೈದರಾಬಾದ್ ಮೂಲದ ಉದ್ಯಮಿ ಅರುಣ್ ಆರ್ ಪಿಲ್ಲರ್ ಅವರ ಬಂಧನ ನಂತರ ನಡೆದಿದೆ. ಪ್ರಸ್ತುತ ಇಬ್ಬರೂ ಇಡಿ ಬಂಧನದಲ್ಲಿದ್ದಾರೆ.  ಅವರು ಯೋಜಿತ ಪಿತೂರಿಯ ಮೂಲಕ ದೆಹಲಿ ಅಬಕಾರಿ ನೀತಿ 2021-22 ರಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಕವಿತಾ ಭಾಗವಾಗಿದ್ದ ಸೌತ್ ಗ್ರೂಪ್‌ನ ಮದ್ಯದ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮತ್ತು ವ್ಯವಸ್ಥೆಯಿಂದ ಲಂಚ ಪಡೆದಿದ್ದರು ಎಂಬುದು ಆರೋಪವಾಗಿದೆ. 

ದೆಹಲಿಯ ಅಬಕಾರಿ ಸಚಿವರಾಗಿ ಸಿಸೋಡಿಯಾ ಅವರು ತಿರುಚಿದ ಮತ್ತು ಜಾರಿಗೆ ತಂದ ನೀತಿಯು ಸೌತ್ ಗ್ರೂಪ್ ಎಂದು ಕರೆಯಲ್ಪಡುವ ಮದ್ಯದ ಗುಂಪಿಗೆ ಭಾರಿ ಲಾಭವನ್ನು ತಂದುಕೊಟ್ಟಿತು ಮತ್ತು ದೆಹಲಿ ಸರ್ಕಾರಕ್ಕೆ ಸುಮಾರು 2,973 ಕೋಟಿಗಳಷ್ಟು ಆದಾಯದ ನಷ್ಟವನ್ನು ಉಂಟುಮಾಡಿತು. ಅಬಕಾರಿ ನೀತಿಯು ದೆಹಲಿ ಸರ್ಕಾರದ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಪರವಾನಗಿದಾರರಿಗೆ ಮತ್ತು ಮಧ್ಯಸ್ಥಗಾರರಿಗೆ ನ್ಯಾಯಯುತ ಅವಕಾಶವನ್ನು ಒದಗಿಸಲು ಒದಗಿಸಲಾದ ಎಲ್ಲಾ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಇಡಿ ಆರೋಪಿಸಿದೆ.

ಅರುಣ್ ಪಿಳ್ಳೈ ಅವರನ್ನು ಮಾರ್ಚ್ 13 ರವರೆಗೆ ವಶಕ್ಕೆ ಪಡೆದಿರುವುದರಿಂದ ಪ್ರಸ್ತುತ ಇಡಿ ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇಡಿ ಪ್ರಕಾರ, ಪಿಳ್ಳೈ ಅವರು ಶೇಕಡಾ 32.5 ಪರ್ಸೆಂಟ್ ಮಾಲೀಕರಾಗಿದ್ದರು. ಮದ್ಯದ ದಂಧೆಕೋರರ ‘ಸೌತ್ ಗ್ರೂಪ್’ ಪ್ರತಿನಿಧಿಯಾಗಿ ಕಿಕ್ ಬ್ಯಾಕ್ ಹಣದ ನೇರ ಫಲಾನುಭವಿಯಾಗಿದ್ದು, ಅಕ್ರಮ ದಂಧೆಯಲ್ಲಿ ತೊಡಗಿದ್ದರು. 

ಸೌತ್ ಗ್ರೂಪ್‌ನ ಮದ್ಯ ವ್ಯಾಪಾರಿಗಳಲ್ಲಿ ಮಾಗುಂಟ ಶ್ರೀನಿವಾಸುಲು ರೆಡ್ಡಿ, ಅವರ ಮಗ ರಾಘವ್ ಮಾಗುಂಟ, ಅರಬಿಂದೋ ಫಾರ್ಮಾದ ಶರತ್ ರೆಡ್ಡಿ ಮತ್ತು ಕವಿತಾ ಸೇರಿದಂತೆ ಪ್ರಮುಖ ವ್ಯಕ್ತಿಗಳು ಮತ್ತು ರಾಜಕಾರಣಿಗಳು ಸೇರಿದ್ದಾರೆ ಎಂಬುದು ಇಡಿ ಆರೋಪವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com