ಪಂಜಾಬ್ ನಲ್ಲಿ ಗನ್ ಸಂಸ್ಕೃತಿ ನಿಗ್ರಹ ಕಾರ್ಯಾಚರಣೆ ಮುಂದುವರಿಕೆ; 813 ಶಸ್ತ್ರಾಸ್ತ್ರ ಪರವಾನಗಿ ರದ್ದು
ಪಂಜಾಬ್ ಸರ್ಕಾರ ಗನ್ ಸಂಸ್ಕೃತಿ ನಿಗ್ರಹ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, 813 ಮಂದಿಯ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಿದೆ.
Published: 12th March 2023 03:48 PM | Last Updated: 12th March 2023 03:48 PM | A+A A-

ಪಂಜಾಬ್
ನವದೆಹಲಿ: ಪಂಜಾಬ್ ಸರ್ಕಾರ ಗನ್ ಸಂಸ್ಕೃತಿ ನಿಗ್ರಹ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, 813 ಮಂದಿಯ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಿದೆ.
ಲೂಧಿಯಾನ ಗ್ರಾಮೀಣ ಪ್ರದೇಶದ 87 ಮಂದಿಯ ಪರವಾನಗಿ ರದ್ದುಗೊಂಡಿದ್ದರೆ, ಶಹೀದ್ ಭಗತ್ ಸಿಂಗ್ ನಗರದ 48 ಮಂದಿ ಪರವಾನಗಿ ಕಳೆದುಕೊಂಡಿದ್ದಾರೆ. ಗುರ್ದಾಸ್ ಪುರದಲ್ಲಿ 10 ಮಂದಿಯ ಪರವಾನಗಿ ರದ್ದುಗೊಳಿಸಲಾಗಿದೆ. ಫರೀದ್ಕೋಟ್ ನಲ್ಲಿ 84, ಪಠಾಣ್ ಕೋಟ್ ನಲ್ಲಿ 199, ಹೋಶಿಯಾಪುರ್ ನಲ್ಲಿ 47, ಕಪುರ್ಥಲ 6, ಎಸ್ಎಎಸ್ ಕಸ್ಬಾ ದಲ್ಲಿ 235 ಮಂದಿ, ಸಂಗ್ರೂರ್ ನಲ್ಲಿ 16 ಮಂದಿ ಪರವಾನಗಿ ಕಳೆದುಕೊಂಡಿದ್ದಾರೆ.
ಅಮೃತ್ ಸರ ಕಮಿಷರೇಟ್ ನಲ್ಲಿ 27 ಮಂದಿ, ಜಲಂಧರ್ ಕಮಿಷರನೇಟ್ ನಲ್ಲಿ 11 ಮಂದಿ ಹಾಗೂ ಇನ್ನೂ ಹಲವು ಜಿಲ್ಲೆಗಳಲ್ಲಿ ಪರವಾನಗಿಯೂ ರದ್ದಾಗಿದೆ.
ಈ ವರೆಗೂ ಪಂಜಾಬ್ ಸರ್ಕಾರ 2,000 ಮಂದಿಯ ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಗನ್ ಗಳನ್ನು ಇಟ್ಟುಕೊಳ್ಳುವುದಕ್ಕೆ ನಿರ್ದಿಷ್ಟವಾದ ನಿಯಮಗಳಿವೆ ಹಾಗೂ ಈಗ ಸಾರ್ವಜನಿಕ ಸಮಾರಂಭಗಳಲ್ಲಿ, ಧಾರ್ಮಿಕ ಸ್ಥಳಗಳು, ವಿವಾಹ ಸಮಾರಂಭಗಳಲ್ಲಿ ಗನ್ ಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಪಂಜಾಬ್ ಸರ್ಕಾರ ಹೇಳಿದೆ.