ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದಕ್ಕೆ ಕೇಂದ್ರದ ವಿರೋಧ ಖಂಡಿಸಿದ ಎಲ್ಜಿಬಿಟಿಕ್ಯೂ
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿರುವುದನ್ನು ಎಲ್ಜಿಬಿಟಿಕ್ಯೂ ಸಮುದಾಯದ ಕಾರ್ಯಕರ್ತರು ಮತ್ತು ಸದಸ್ಯರು ಖಂಡಿಸಿದ್ದಾರೆ.
Published: 12th March 2023 10:19 PM | Last Updated: 13th March 2023 05:26 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿರುವುದನ್ನು ಎಲ್ಜಿಬಿಟಿಕ್ಯೂ ಸಮುದಾಯದ ಕಾರ್ಯಕರ್ತರು ಮತ್ತು ಸದಸ್ಯರು ಖಂಡಿಸಿದ್ದಾರೆ.
ಭಾರತದ ಬಹುತ್ವ ಮತ್ತು ವೈವಿಧ್ಯತೆಯ ಹೊರತಾಗಿಯೂ ಕೇಂದ್ರ ಸರ್ಕಾರ ಇನ್ನೂ ಭಿನ್ನಲಿಂಗೀಯರಿಗೆ ಮಾತ್ರ ವಿವಾಹದ ಹಕ್ಕುಗಳನ್ನು ನೀಡಬಹುದೆಂದು ನಂಬುತ್ತಿದೆ ಎಂದು ಎಲ್ಜಿಬಿಟಿಕ್ಯೂ ಟೀಕಿಸಿದೆ.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಕುರಿತು ಸೋಮವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಸಲಿಂಗ ವಿವಾಹದ ಕಾನೂನು ಮಾನ್ಯತೆ ವೈಯಕ್ತಿಕ ಕಾನೂನುಗಳು ಮತ್ತು ಅಂಗೀಕೃತ ಸಾಮಾಜಿಕ ಮೌಲ್ಯಗಳಿಗೆ ಸಂಪೂರ್ಣ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಪ್ರತಿ-ಅಫಿಡವಿಟ್ ಸಲ್ಲಿಸಿದ ಕೇಂದ್ರ ಸೆಕ್ಷನ್ 377 ಐಪಿಸಿಯ ಅಪರಾಧೀಕರಣವು ಸಲಿಂಗ ವಿವಾಹಕ್ಕೆ ಮಾನ್ಯತೆ ಸಾಧ್ಯವಿಲ್ಲ ಎಂದು ಹೇಳಿದೆ. ಭಿನ್ನಲಿಂಗೀಯ ಸ್ವಭಾವಕ್ಕೆ ಸೀಮಿತವಾದ ವಿವಾಹದ ಶಾಸನಬದ್ಧ ಮಾನ್ಯತೆ ಇತಿಹಾಸದುದ್ದಕ್ಕೂ ರೂಢಿಯಾಗಿದೆ. ಇದು ಅಸ್ತಿತ್ವ ಮತ್ತು ಮುಂದುವರಿಕೆ ಎರಡಕ್ಕೂ ಅಡಿಪಾಯವಾಗಿದೆ ಎಂದು ಕೇಂದ್ರ ಹೇಳಿದೆ.
ಇದನ್ನು ಓದಿ: 'ಭಾರತೀಯ ಕುಟುಂಬ ವ್ಯವಸ್ಥೆಯೊಂದಿಗೆ ಹೋಲಿಕೆ ಸಲ್ಲ': ಸಲಿಂಗ ವಿವಾಹಕ್ಕೆ ಮಾನ್ಯತೆಗೆ ಕೇಂದ್ರ ಸರ್ಕಾರ ವಿರೋಧ
ಕೇಂದ್ರದ ಅಫಿಡವಿಟ್‌ಗೆ ಪ್ರತಿಕ್ರಿಯಿಸಿದ ಸಲಿಂಗಿ ಹಕ್ಕುಗಳ ಕಾರ್ಯಕರ್ತ ಮತ್ತು ಎಲ್ಜಿಬಿಟಿಕ್ಯೂ ಸಮುದಾಯದ ಸದಸ್ಯ ಹರೀಶ್ ಅಯ್ಯರ್ ಅವರು ಭಾರತ ಬಹುತ್ವದ ರಾಷ್ಟ್ರವಾಗಿದೆ ಎಂದಿದ್ದಾರೆ.
“ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ಶಾಲೆಗಳಲ್ಲಿ ನಾವು ಕಲಿಯುವ ಪಾಠವಾಗಿದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಆದರೂ ನಾವು ಬಹುಸಂಖ್ಯಾತರಿಗೆ ಮಾತ್ರ ವಿವಾಹದ ಹಕ್ಕುಗಳನ್ನು ನೀಡುತ್ತೇವೆ ಮತ್ತು ಅಲ್ಪಸಂಖ್ಯಾತರಾದ ನಮಗೆ ನೀಡುತ್ತಿಲ್ಲ. ಅಯ್ಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.