ಮಹಾ ಸಿಎಂ ಶಿಂಧೆ ಬಣ ಸೇರಿದ ಉದ್ಧವ್ ಠಾಕ್ರೆ ಆಪ್ತ ಸುಭಾಷ್ ದೇಸಾಯಿ ಪುತ್ರ
ಮಹಾರಾಷ್ಟ್ರ ಮಾಜಿ ಕೈಗಾರಿಕಾ ಸಚಿವ ಮತ್ತು ಉದ್ಧವ್ ಠಾಕ್ರೆ ಅವರ ಆಪ್ತ ಸುಭಾಷ್ ದೇಸಾಯಿ ಅವರ ಪುತ್ರ ಭೂಷಣ್ ದೇಸಾಯಿ ಅವರು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದಾರೆ.
Published: 13th March 2023 08:39 PM | Last Updated: 13th March 2023 08:39 PM | A+A A-

ಭೂಷಣ್ ದೇಸಾಯಿ - ಏಕನಾಥ್ ಶಿಂಧೆ
ಮುಂಬೈ: ಮಹಾರಾಷ್ಟ್ರ ಮಾಜಿ ಕೈಗಾರಿಕಾ ಸಚಿವ ಮತ್ತು ಉದ್ಧವ್ ಠಾಕ್ರೆ ಅವರ ಆಪ್ತ ಸುಭಾಷ್ ದೇಸಾಯಿ ಅವರ ಪುತ್ರ ಭೂಷಣ್ ದೇಸಾಯಿ ಅವರು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದಾರೆ.
ಸುಭಾಷ್ ದೇಸಾಯಿ ಅವರು ಹಲವು ವರ್ಷಗಳಿಂದ ಉದ್ಧವ್ ಠಾಕ್ರೆ ಮತ್ತು ಅವರ ಕುಟುಂಬದ ಅತ್ಯಂತ ವಿಶ್ವಾಸಾರ್ಹ ನಾಯಕ ಆಗಿದ್ದಾರೆ.
ಇದನ್ನು ಓದಿ: ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆ: ಚುನಾವಣಾ ಆಯೋಗದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ!
ಸುಭಾಷ್ ದೇಸಾಯಿ ಪುತ್ರ ಶಿಂಧೆ ಬಣ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ(ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ಭೂಷಣ್ ಉದ್ಧವ್ ಬಣದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
“ಸುಭಾಷ್ ದೇಸಾಯಿ ನಮ್ಮ ದೊಡ್ಡ ನಾಯಕ. ನಾವು ಅವರ ಮಾರ್ಗದರ್ಶನವನ್ನು ಅನುಸರಿಸುತ್ತೇವೆ. ಆದರೆ ಅವರ ಮಗ ನಮ್ಮೊಂದಿಗೆ ಇರಲಿಲ್ಲ. ವಾಷಿಂಗ್ ಮೆಷಿನ್‌ಗೆ ಹೋಗಲು ಬಯಸುವವರು ಹೋಗಬಹುದು ” ಎಂದು ಹೇಳಿದ್ದಾರೆ.