ಛತ್ತೀಸ್‌ಗಢದಲ್ಲಿ 14 ಭದ್ರತಾ ಸಿಬ್ಬಂದಿಯನ್ನು ಬಲಿ ಪಡೆದಿದ್ದ ಮಾವೋವಾದಿಗಳ ಬಂಧನ

14 ಭದ್ರತಾ ಸಿಬ್ಬಂದಿಯನ್ನು ಬಲಿಪಡೆದಿದ್ದ 2014ರ ನಕ್ಸಲ್ ದಾಳಿಯಲ್ಲಿ ಭಾಗಿಯಾಗಿದ್ದ ನಾಲ್ವರು ಮಾವೋವಾದಿಗಳನ್ನು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸುಕ್ಮಾ: 14 ಭದ್ರತಾ ಸಿಬ್ಬಂದಿಯನ್ನು ಬಲಿಪಡೆದಿದ್ದ 2014ರ ನಕ್ಸಲ್ ದಾಳಿಯಲ್ಲಿ ಭಾಗಿಯಾಗಿದ್ದ ನಾಲ್ವರು ಮಾವೋವಾದಿಗಳನ್ನು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಭಾನುವಾರ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಬರ್ಸೆ ಪೊಜ್ಜ, ಪೊಡಿಯಂ ದೇವ ಮತ್ತು ಸೋಡಿ ಭೀಮನನ್ನು ತೊಂಡಮಾರ್ಕ ಗ್ರಾಮದ ಬಳಿ ಬಂಧಿಸಲಾಗಿದ್ದು, ಪೊಡಿಯಂ ಮುಕ್ಕ ಅಲಿಯಾಸ್ ಮುಖೇಶ್‌ನನ್ನು ಚಿಂತಗುಫಾದ ಪಿಡ್ಮೆಲ್ ಗ್ರಾಮದ ಬಳಿ ಬಂಧಿಸಲಾಗಿದೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಶರ್ಮಾ ಹೇಳಿದ್ದಾರೆ.

2014ರ ಕಾಸಲ್‌ಪಾಡ್‌ ನಕ್ಸಲ್ ದಾಳಿಯಲ್ಲಿ ಪೊಜ್ಜ, ಪೊಡಿಯಂ ದೇವ ಮತ್ತು ಸೋಡಿ ಭೀಮ ಭಾಗಿಯಾಗಿದ್ದರು. ಈ  ದಾಲಿಯಲ್ಲಿ 14 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು.

ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಡೆಸಿದ ಐಇಡಿಗಳಲ್ಲಿ ಮುಕೇಶ್ ಭಾಗಿಯಾಗಿದ್ದಾರೆ ಎಂದು ಎಸ್ ಪಿ ಶರ್ಮಾ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com