ಕೆಟ್ಟ ಉದ್ದೇಶವಿಲ್ಲದೆ ಅಪ್ರಾಪ್ತ ಬಾಲಕಿಯ ತಲೆ, ಬೆನ್ನು ಸವರುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್

ಯಾವುದೇ ಲೈಂಗಿಕ ಉದ್ದೇಶವಿಲ್ಲದೇ ಬಾಲಕಿಯೊಬ್ಬಳ ಬೆನ್ನು ಸವರಿದರೆ, ತಲೆ ಸವರಿದರೆ ಅದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ್ ಪೀಠವು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಯಾವುದೇ ಲೈಂಗಿಕ  ಉದ್ದೇಶವಿಲ್ಲದೇ ಬಾಲಕಿಯೊಬ್ಬಳ ಬೆನ್ನು ಸವರಿದರೆ, ತಲೆ ಸವರಿದರೆ ಅದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ್ ಪೀಠವು  ಹೇಳಿದೆ.

ಪ್ರಕರಣವೊಂದರಲ್ಲಿ 28 ವರ್ಷದ ವ್ಯಕ್ತಿಗೆ ಶಿಕ್ಷೆ ನೀಡಿದ ಪ್ರಕರಣದಲ್ಲಿ ಕೋರ್ಟ್ ಈ ಅಭಿಪ್ರಾಯಪಟ್ಟಿದೆ. ಈ ಪ್ರಕರಣವು 2012 ರ ಹಿಂದಿನದು. ಆಗ ಅಪರಾಧಿಗೆ 18 ವರ್ಷ ವಯಸ್ಸು, 12 ವರ್ಷದ ಬಾಲಕಿಯ ಮರ್ಯಾದೆಯನ್ನು ಹಾಳು ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಸಂತ್ರಸ್ತೆಯ ಪ್ರಕಾರ, ಅಪರಾಧಿಯು ಬೆನ್ನು ಮತ್ತು ತಲೆ ಮೇಲೆ ಕೈ ಸವರಿ, ಹುಡುಗಿ ದೊಡ್ಡವಳಾಗಿದ್ದಾಳೆಂದು ಹೇಳಿದ್ದ. ಈ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ನಡೆಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಶಿಕ್ಷೆಯನ್ನು ರದ್ದು ಮಾಡಿರುವ ಜಸ್ಟೀಸ್ ಭಾರತಿ ಡಾಂಗ್ರಿ ಅವರಿದ್ದ ಏಕ ಸದಸ್ಯ ಪೀಠವು, ಅಪರಾಧಿಯು ಮಾಡಿರುವ ಕೆಲಸದಲ್ಲಿ ಯಾವುದೇ ಲೈಂಗಿಕ ಉದ್ದೇಶವಿರಲಿಲ್ಲ. ಅವನ ಮಾತುಗಳು ಸಂತ್ರೆಸ್ತೆಯನ್ನು ಬಾಲಕಿಯ ರೀತಿಯಲ್ಲಿ ನೋಡಿದ್ದನ್ನು ಸೂಚಿಸುತ್ತವೆ ಎಂದು ಹೇಳಿದೆ.

ಹುಡುಗಿಯ ಮರ್ಯಾದೆಯನ್ನುಹಾಳು ಮಾಡುವ ಉದ್ದೇಶವನ್ನು ಅಪರಾಧಿಯು ಹೊಂದಿದ್ದ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದೂ ಪೀಠವು ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com