ಪ್ರತಿಪಕ್ಷಗಳ ಮೇಲೆ ಬಿಜೆಪಿ ದಾಳಿಯ ಬಗ್ಗೆ ಪಿಡಿಪಿ ಮೌನವಾಗಿರುವುದಿಲ್ಲ: ಮೆಹಬೂಬಾ ಮುಫ್ತಿ
ಭಾರತವನ್ನು ಬಿಜೆಪಿ ರಾಷ್ಟ್ರವನ್ನಾಗಿ ಮಾಡುವ ಗುರಿ ಸಾಧಿಸಲು ವಿರೋಧ ಪಕ್ಷಗಳ ಮೇಲೆ ಬಿಜೆಪಿ ನಡೆಸುತ್ತಿರುವ ದಾಳಿಯ ಬಗ್ಗೆ ತಮ್ಮ ಪಕ್ಷ ಮೌನವಾಗಿರುವುದಿಲ್ಲ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೋಮವಾರ ಹೇಳಿದ್ದಾರೆ.
Published: 14th March 2023 12:21 AM | Last Updated: 04th April 2023 02:45 PM | A+A A-

ಮೆಹಬೂಬಾ ಮುಫ್ತಿ
ಪೂಂಚ್/ಜಮ್ಮು: ಭಾರತವನ್ನು ಬಿಜೆಪಿ ರಾಷ್ಟ್ರವನ್ನಾಗಿ ಮಾಡುವ ಗುರಿ ಸಾಧಿಸಲು ವಿರೋಧ ಪಕ್ಷಗಳ ಮೇಲೆ ಬಿಜೆಪಿ ನಡೆಸುತ್ತಿರುವ ದಾಳಿಯ ಬಗ್ಗೆ ತಮ್ಮ ಪಕ್ಷ ಮೌನವಾಗಿರುವುದಿಲ್ಲ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೋಮವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವಿರಾರು ಯುವಕರನ್ನು ಜೈಲಿಗೆ ಹಾಕಲಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿರುವ ಪರಿಸ್ಥಿತಿಯ ಬಗ್ಗೆ ಜನರ ಪರವಾಗಿ ಮಾತನಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಇದನ್ನು ಓದಿ: ಬಿಜೆಪಿ ಕಾಶ್ಮೀರವನ್ನು ಅಫ್ಘಾನಿಸ್ತಾನವನ್ನಾಗಿ ಮಾಡಿದೆ: ಮೆಹಬೂಬಾ ಮುಫ್ತಿ
ಜಿಲ್ಲೆ ಪೂಂಚ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೆಹಬೂಬಾ ಅವರು, "ಜಮ್ಮು ಮತ್ತು ಕಾಶ್ಮೀರಕ್ಕೆ(2019 ರ ನಂತರ) ಏನಾಯಿತು ಎಂಬುದು ದೇಶದ ಎಲ್ಲಾ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ನೀವು ಮೌನವಾಗಿರಲು ಅಥವಾ ಅರೆಮನಸ್ಸಿನ ರೀತಿಯಲ್ಲಿ ಮಾತನಾಡಲು ಆದ್ಯತೆ ನೀಡಿದರೆ ಅಂತಿಮವಾಗಿ ನಮ್ಮ ಕುತ್ತಿಗೆಗೆ ಬರುತ್ತದೆ. ನಮಗಾಗಿ ಮಾತ್ರವಲ್ಲದೆ ನಿಮಗಾಗಿಯೂ ಬಿಜೆಪಿ ವಿರುದ್ಧ ಹೋರಾಡಿ" ಎಂದು ಕರೆ ನೀಡಿದರು.
ದೇಶದ ಇತರ ಭಾಗಗಳಲ್ಲಿ ತಮ್ಮ ನೀತಿಗಳನ್ನು ಅನುಷ್ಠಾನಗೊಳಿಸುವ ಮುನ್ನ ಬಿಜೆಪಿ ತನ್ನ ನೀತಿಗಳನ್ನು ಪ್ರಯೋಗಿಸಲು ಕಾಶ್ಮೀರವನ್ನು ಪ್ರಯೋಗಾಲಯವಾಗಿ ಪರಿವರ್ತಿಸಿದೆ ಎಂದು ಮಾಜಿ ಸಿಎಂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.