ರಾಜ್ಯಪಾಲರು ಸರ್ಕಾರದ ಪತನಕ್ಕೆ ದಾರಿ ಮಾಡಿಕೊಂಡುವಂತಿಲ್ಲ: ಮಹಾರಾಷ್ಟ್ರ ಬಿಕ್ಕಟಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿಕೆ

ಮಹಾರಾಷ್ಟ್ರದಲ್ಲಿ ವರ್ಷದ ಹಿಂದೆ ಉಂಟಾಗಿದ್ದ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ರಾಜ್ಯಪಾಲರ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಅಂಶವೊಂದನ್ನು ಗಮನಿಸಿದೆ.
ಮಹಾರಷ್ಟ್ರ ಸಿಎಂ ಏಕನಾಥ್ ಶಿಂಧೆ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಮಾಜಿ ಸಿಎಂ ಉದ್ಧವ್ ಠಾಕ್ರೆ
ಮಹಾರಷ್ಟ್ರ ಸಿಎಂ ಏಕನಾಥ್ ಶಿಂಧೆ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಮಾಜಿ ಸಿಎಂ ಉದ್ಧವ್ ಠಾಕ್ರೆ

ನವದೆಹಲಿ: ಮಹಾರಾಷ್ಟ್ರದಲ್ಲಿ ವರ್ಷದ ಹಿಂದೆ ಉಂಟಾಗಿದ್ದ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ರಾಜ್ಯಪಾಲರ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಅಂಶವೊಂದನ್ನು ಗಮನಿಸಿದೆ.
 
ಏಕನಾಥ್ ಶಿಂಧೆ ಅವರ ಬಂಡಾಯದ ತರುವಾಯ ಮಹಾರಾಷ್ಟ್ರದ ರಾಜ್ಯಪಾಲರು ಅಂದಿನ ಸಿಎಂ ಸಿಎಂ ಉದ್ಧವ್ ಠಾಕ್ರೆಗೆ ವಿಶ್ವಾಸಮತ ಸಾಬೀತಿಗೆ ಸೂಚನೆ ನೀಡಿದ್ದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, ರಾಜ್ಯಪಾಲರ ನಡೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು ಎಂದು ಕೋರ್ಟ್ ಹೇಳಿದೆ. 

ಮೌಖಿಕವಾಗಿ ಕೆಲವು ಅಂಶಗಳನ್ನು ಗಮನಿಸಿರುವ ಸಿಜೆಐ ಡಿವೈ ಚಂದ್ರಚೂಡ್ ಈ ರೀತಿಯ ನಡೆ ಪ್ರಜಾಪ್ರಭುತ್ವಕ್ಕೆ ಶೋಚನೀಯ ದೃಶ್ಯವಾಯಿತು ಎಂದು ಹೇಳಿದ್ದು, "34 ಶಾಸಕರು ಅಂಗೀಕರಿಸಿದ್ದ ನಿರ್ಣಯದಲ್ಲಿ, ಪಕ್ಷದ ಕಾರ್ಯಕರ್ತರು ಮತ್ತು ಶಾಸಕರ ನಡುವೆ ವ್ಯಾಪಕ ಅಸಮಾಧಾನ ಇದೆ ಎಂದು ಹೇಳಿದ್ದೇ ವಿಶ್ವಾಸಮತ ಸಾಬೀತಿಗೆ ಆಧಾರವಾಗುವುದಕ್ಕೆ ಸಾಕಾಗುವ ಅಂಶವೇ"? ಎಂದು ಪ್ರಶ್ನಿಸಿದ್ದಾರೆ.

ಯಾವುದೇ ವಿಷಯವನ್ನು ಉಲ್ಬಣಿಸುವ ಅಥವಾ ಪ್ರಚೋದಿಸುವ ಜಾಗಕ್ಕೆ ರಾಜ್ಯಪಾಲರು ಪ್ರವೇಶಿಸುವಂತಿಲ್ಲ. "ಜನರು ಆಡಳಿತ ಪಕ್ಷವನ್ನು ತ್ಯಜಿಸಲು ಪ್ರಾರಂಭಿಸುತ್ತಾರೆ ಮತ್ತು ರಾಜ್ಯಪಾಲರ ಇಚ್ಛೆಯ ಮಿತ್ರರು ಆಡಳಿತ ಪಕ್ಷವನ್ನು ಉರುಳಿಸುವಲ್ಲಿ ಪ್ರಹಸನ ಕೊನೆಗೊಳ್ಳಲಿದೆ. ಇದು ಪ್ರಜಾಪ್ರಭುತ್ವದ ಶೋಚನೀಯ ದೃಶ್ಯವಾಗಿರಲಿದೆ.

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಚಿವರ ಗೈರು ಬಗ್ಗೆ ಅಜಿತ್ ಪವಾರ್ ತರಾಟೆ; ಕ್ಷಮೆಯಾಚಿಸಿದ ಫಡ್ನವಿಸ್
 
ವಿಶ್ವಾಸಮತ ಇರುವುದು ಸದನದ ನಾಯಕ ಯಾರು ಎಂಬುದನ್ನು ನಿರ್ಧರಿಸುವುದಕ್ಕಾಗಿಯೇ ಹೊರತು ಪಕ್ಷದ ನಾಯಕ ಯಾರು ಎಂಬುದನ್ನು ನಿರ್ಧರಿಸುವುದಕ್ಕೆ ಅಲ್ಲ ಎಂದು ಹೇಳಿದ್ದು ಬಂಡಾಯ ಶಾಸಕರಿಗೆ ಜೀವ ಬೆದರಿಕೆ ಇತ್ತು ಎಂಬ ಆರೋಪದ ಬಗ್ಗೆ ಉಲ್ಲೇಖಿಸಿ, ಜೀವ ಬೆದರಿಕೆ ಇದ್ದರೆ, ಎಫ್ಐಆರ್ ದಾಖಲಿಸುವುದು ಪ್ರಕ್ರಿಯೆಯೇ ಹೊರತು ಸರ್ಕಾರವನ್ನು ಉರುಳಿಸುವುದಲ್ಲ ಎಂದು ಸಿಜೆಐ ಹೇಳಿದ್ದಾರೆ. 

ಮೂರು ವರ್ಷಗಳ ಕಾಲ ಬಣಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಲಿಲ್ಲ. ಮೂರು ವರ್ಷಗಳ ಕಾಲ ಜೊತೆಯಲ್ಲಿಯೇ ಇದ್ದರು. ಬಂಡಾಯವೆದ್ದವರು ಅಲ್ಲಿಯವರೆಗೂ ಎನ್ ಸಿಪಿ ಕಾಂಗ್ರೆಸ್ ಜೊತೆ 3 ವರ್ಷಗಳ ಕಾಲ ಚೆನ್ನಾಗಿಯೇ ಇದ್ದರು. 3 ವರ್ಷದ ಮೈತ್ರಿಯ ಬಳಿಕ ಏಕಾ ಏಕಿ ಏನಾಯಿತು? ಎಂದು ಸಿಜೆಐ ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com