ಲಂಡನ್ ನಲ್ಲಿ ಭಾರತ ಪ್ರಜಾಪ್ರಭುತ್ವ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ: ಬಿಜೆಪಿ ಬೇಡಿಕೆಯಂತೆ ನಿಯಮ 223ರಡಿ ತನಿಖಾ ಸಮಿತಿ ಸ್ಥಾಪಿಸಲು ಸಾಧ್ಯವಿಲ್ಲ ಎಂದು ತಜ್ಞರ ಅಭಿಮತ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇತ್ತೀಚೆಗೆ ಲಂಡನ್ ಗೆ ಹೋಗಿದ್ದಾಗ ಅಲ್ಲಿ ಭಾಷಣದಲ್ಲಿ ಭಾರತದಲ್ಲಿ 'ಪ್ರಜಾಪ್ರಭುತ್ವ ವಿನಾಶದಂಚಿನಲ್ಲಿದೆ' ಎಂದು ಹೇಳಿಕೆ ನೀಡಿದ್ದರ ಕುರಿತು ಬಿಜೆಪಿ ತನ್ನ ವಾಗ್ದಾಳಿಯನ್ನು ತೀಕ್ಷ್ಣಗೊಳಿಸಿದೆ. ಲೋಕಸಭೆಯಿಂದ ಅವರನ್ನು ಉಚ್ಚಾಟಿಸುವ ಬಗ್ಗೆ ವಿಶೇಷ ಸಂಸದೀಯ ಸಮಿತಿಯನ್ನು ಪರಿಗಣಿಸಲು ಒತ್ತಾಯಿಸಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇತ್ತೀಚೆಗೆ ಲಂಡನ್ ಗೆ ಹೋಗಿದ್ದಾಗ ಅಲ್ಲಿ ಭಾಷಣದಲ್ಲಿ ಭಾರತದಲ್ಲಿ 'ಪ್ರಜಾಪ್ರಭುತ್ವ ವಿನಾಶದಂಚಿನಲ್ಲಿದೆ' ಎಂದು ಹೇಳಿಕೆ ನೀಡಿದ್ದರ ಕುರಿತು ಬಿಜೆಪಿ ತನ್ನ ವಾಗ್ದಾಳಿಯನ್ನು ತೀಕ್ಷ್ಣಗೊಳಿಸಿದೆ. ಲೋಕಸಭೆಯಿಂದ ಅವರನ್ನು ಉಚ್ಚಾಟಿಸುವ ಬಗ್ಗೆ ವಿಶೇಷ ಸಂಸದೀಯ ಸಮಿತಿಯನ್ನು ಪರಿಗಣಿಸಲು ಒತ್ತಾಯಿಸಿದೆ.

ಆದರೆ 2008 ರ ಮತಕ್ಕಾಗಿ ನಗದು ಹಗರಣವನ್ನು ತನಿಖೆ ನಡೆಸಿದ ಸಮಿತಿಯಂತಹ ಸಮಿತಿಯನ್ನು ರಾಹುಲ್ ಗಾಂಧಿ ವಿಚಾರಕ್ಕೆ ನಿಯಮ 223 ರ ಅಡಿಯಲ್ಲಿ ರಚಿಸಲಾಗುವುದಿಲ್ಲ ಏಕೆಂದರೆ ಎರಡೂ ಪ್ರಕರಣಗಳು ಒಂದೇ ಆಗಿಲ್ಲ ಎಂದು ತಜ್ಞರು ಹೇಳುತ್ತಾರೆ. 2005 ರಲ್ಲಿ ಯುಪಿಎ ಸರ್ಕಾರವು ನಗದು ಹಗರಣದ ಬಗ್ಗೆ ವಿಶೇಷ ಸಂಸದೀಯ ಸಮಿತಿಯನ್ನು ರಚಿಸಿದಾಗ ಲೋಕಸಭೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಪಿಡಿಟಿ ಆಚಾರಿ, ಗಂಭೀರ ಸ್ವರೂಪದ ಪ್ರಕರಣಗಳು ಒಳಗೊಂಡಿರುವಾಗ ವಿಶೇಷ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಹೇಳುತ್ತಾರೆ. 

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ತಮ್ಮ ಅವಹೇಳನಕಾರಿ ಮತ್ತು ಅನುಚಿತ ವರ್ತನೆಯ ಕುರಿತು ಸದನದಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 223 ರ ಅಡಿಯಲ್ಲಿ ನೋಟಿಸ್ ನೀಡುವುದಾಗಿ ತಿಳಿಸಿದ್ದಾರೆ. 2008 ರಲ್ಲಿ ರಚಿಸಿದ ರೀತಿಯಲ್ಲಿಯೇ ವಿಶೇಷ ಸಂಸದೀಯ ಸಮಿತಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಸಂವಿಧಾನ ತಜ್ಞ ಆಚಾರ್ಯ, ನಿಯಮ 223ರ ಅಡಿಯಲ್ಲಿ ನೋಟಿಸ್ ನ್ನು ವಿಶೇಷಾಧಿಕಾರ ಸಮಿತಿಗೆ ಮಾತ್ರ ಉಲ್ಲೇಖಿಸಬಹುದು.

ನಿಯಮ 223 ಸದಸ್ಯ ಅಥವಾ ಸಮಿತಿಯು ಮಾಡಿದ ಸವಲತ್ತು ಉಲ್ಲಂಘನೆಯ ವಿಷಯದ ಬಗ್ಗೆ ಸಂಸತ್ತಿನಲ್ಲಿ ಸ್ಪೀಕರ್ ಅನುಮತಿಯೊಂದಿಗೆ ಪ್ರಶ್ನೆಯನ್ನು ಎತ್ತಲು ಸದಸ್ಯರಿಗೆ ಅವಕಾಶ ನೀಡುತ್ತದೆ. “ನಿಯಮ 223 ಸಂಸತ್ತಿನ ವಿಶೇಷಾಧಿಕಾರದ ಪ್ರಶ್ನೆಯನ್ನು ಚರ್ಚಿಸುತ್ತದೆ. ಫೆಬ್ರವರಿ 7 ರಂದು ಸಂಸತ್ತಿನಲ್ಲಿ ಪ್ರಧಾನಿ ಕುರಿತು ಮಾಡಿದ ಹೇಳಿಕೆಗೆ ದುಬೆ ಈಗಾಗಲೇ ರಾಹುಲ್ ಗಾಂಧಿ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆ ನೋಟಿಸ್ ನೀಡಿದ್ದಾರೆ.

ನಿಯಮ 223 ರ ಅಡಿಯಲ್ಲಿ, ದುಬೆ ಅವರು ರಾಹುಲ್ ಅವರ ಟೀಕೆಗಳ ತನಿಖೆಗೆ ಪ್ರತ್ಯೇಕ ಸಮಿತಿಯನ್ನು ಕೇಳಲು ಸಾಧ್ಯವಿಲ್ಲ ಎಂದು ಹೇಳತ್ತಾರೆ. 

2005 ರಲ್ಲಿ ಪವನ್ ಕುಮಾರ್ ಬನ್ಸಾಲ್ ನೇತೃತ್ವದ ಸಮಿತಿಯನ್ನು ಸ್ಟಿಂಗ್ ಕಾರ್ಯಾಚರಣೆಯ ನಂತರ 11 ಸಂಸದರು 'ನಗದು-ಹಣ-ಪಾವತಿಯಲ್ಲಿ ಭಾಗಿಯಾಗಿದ್ದಾರೆಂದು ಬಹಿರಂಗಪಡಿಸಿದ ನಂತರ ರಚಿಸಲಾಯಿತು. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತುವುದಕ್ಕೆ ಬದಲಾಗಿ ನಗದು ಸ್ವೀಕರಿಸುವ ಕ್ವೆರಿ ಹಗರಣ ಪ್ರಕರಣವಾಗಿತ್ತು.  11 ಮಂದಿ ಸಂಸದರಲ್ಲಿ ಆರು ಸಂಸದರು ಬಿಜೆಪಿಯವರಾಗಿದ್ದರು. ಸದನದಲ್ಲಿ ಪ್ರಸ್ತಾವನೆಯನ್ನು ಮಂಡಿಸಿದ ನಂತರ ವಿಶೇಷ ಸಮಿತಿಯನ್ನು ರಚಿಸಬಹುದು. ಸಮಿತಿಗೆ ಸದನವು ತನಿಖಾ ಅಧಿಕಾರವನ್ನು ನೀಡುತ್ತದೆ. ತನಿಖಾ ಅಧಿಕಾರವು ಸದನದ ವ್ಯಾಪ್ತಿಯಲ್ಲಿದೆ ಎಂದು ಹೇಳಿದರು.

ಪ್ರಶ್ನೆಗೆ ನಗದು ಹಗರಣ: 2005 ರಲ್ಲಿ, ಪವನ್ ಕುಮಾರ್ ಬನ್ಸಾಲ್ ನೇತೃತ್ವದ ಸಮಿತಿಯನ್ನು ಕುಟುಕು ಕಾರ್ಯಾಚರಣೆಯ ನಂತರ 11 ಸಂಸದರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತುವ ಬದಲು ನಗದು ಸ್ವೀಕರಿಸುವ 'ಕ್ಯಾಶ್-ಫಾರ್-ಕ್ವೆರಿ' ಹಗರಣದಲ್ಲಿ ಭಾಗಿಯಾಗಿರುವುದನ್ನು ಬಹಿರಂಗಪಡಿಸಿದ ನಂತರ ರಚಿಸಲಾಯಿತು. 11 ಸಂಸದರ ಪೈಕಿ ಆರು ಮಂದಿ ಬಿಜೆಪಿಯವರೇ ಆಗಿದ್ದರು. ಅದೇ ರೀತಿ 2008ರಲ್ಲಿ ‘ಮತಕ್ಕೆ ನಗದು’ ಹಗರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿಯನ್ನು ತನಿಖೆಗೆ ರಚಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com