ಅತ್ಯಾಚಾರ ಆರೋಪ: ಕೇಂದ್ರ ಗುರುದ್ವಾರ ಪ್ರಬಂಧಕ್ ಸಮಿತಿಯ ಮಾಜಿ ಅಧ್ಯಕ್ಷನ ಬಂಧನ

ನಕಲಿ ಗುರುತಿನ ಚೀಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಗುರುದ್ವಾರ ಪರ್ಬಂಧಕ್ ಸಮಿತಿಯ (ಸಿಜಿಪಿಸಿ) ಮಾಜಿ ಅಧ್ಯಕ್ಷ ಗುರುಮುಖ್ ಸಿಂಗ್ ಮುಖೆ ಅವರನ್ನು ಜೆಮ್‌ಶೆಡ್‌ಪುರದ ಆಸ್ಪತ್ರೆಯಿಂದ ಬಂಧಿಸಲಾಗಿದೆ. 
ಗುರುಮುಖ್ ಸಿಂಗ್ ಮುಖೆ
ಗುರುಮುಖ್ ಸಿಂಗ್ ಮುಖೆ
Updated on

ರಾಂಚಿ: ನಕಲಿ ಗುರುತಿನ ಚೀಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಗುರುದ್ವಾರ ಪರ್ಬಂಧಕ್ ಸಮಿತಿಯ (ಸಿಜಿಪಿಸಿ) ಮಾಜಿ ಅಧ್ಯಕ್ಷ ಗುರುಮುಖ್ ಸಿಂಗ್ ಮುಖೆ ಅವರನ್ನು ಜೆಮ್‌ಶೆಡ್‌ಪುರದ ಆಸ್ಪತ್ರೆಯಿಂದ ಬಂಧಿಸಲಾಗಿದೆ. 

ಈಗಾಗಲೇ ಸಂಶಯಾಸ್ಪದ ಹಿನ್ನೆಲೆ ಹೊಂದಿರುವ ಗುರುಮುಖ್ ಸಿಂಗ್ ಮುಖೆ, ಕಳೆದ ವರ್ಷ ನವೆಂಬರ್‌ನಲ್ಲಿ ಕದ್ಮಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಬೇಕಾಗಿದ್ದನು. 

ಆರೋಪಿ ಗುರುಮುಖ್ ಸಿಂಗ್ ಮುಖೆ ಬರಿದಿಹ್‌ನ ಆಸ್ಪತ್ರೆಯಲ್ಲಿ ನಕಲಿ ಗುರುತಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದು ಆತನನ್ನು ಬಂಧಿಸಲಾಗಿದೆ ಎಂದು ಕಡ್ಮಾ ಪೊಲೀಸ್ ಠಾಣೆಯ ಪ್ರಭಾರಿ ಅಶೋಕ್ ಕುಮಾರ್ ರಾಮ್ ತಿಳಿಸಿದ್ದಾರೆ.

ಮಾಜಿ CGPC ಅಧ್ಯಕ್ಷರು ಜಮ್ಶೆಡ್‌ಪುರದ ಕದ್ಮಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತನ್ನ ಮನೆಯಲ್ಲಿ ಮಕ್ಕಳ ಮುಂದೆ ಬಂದೂಕು ತೋರಿಸಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. 

ಸಂತ್ರಸ್ತೆಯ ಪತಿ ವಿದೇಶದಲ್ಲಿದ್ದಾಗ ಈ ಘಟನೆ ನಡೆದಿದೆ. ಸಂತ್ರಸ್ತೆಯ ದೂರಿನ ಹಿನ್ನಲೆಯಲ್ಲಿ ಪೊಲೀಸರು ಮುಖೆ ವಿರುದ್ಧ ಪ್ರಕರಣ ದಾಖಲಿಸಿದರು. ನಂತರ ಅವರು ತಲೆಮರೆಸಿಕೊಂಡಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com