ಕಾಶಿ ವಿಶ್ವನಾಥ ದೇವಾಲಯಕ್ಕೆ 100 ಬಾರಿ ಭೇಟಿ ನೀಡಿದ ಮೊದಲ ಯುಪಿ ಸಿಎಂ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಬೆಳಗ್ಗೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಮೂಲಕ ಕಳೆದ ಆರು ವರ್ಷಗಳಲ್ಲಿ ಈ ದೇವಾಲಯಕ್ಕೆ 100 ಬಾರಿ ಭೇಟಿ ನೀಡಿದ ಉತ್ತರ ಪ್ರದೇಶದ ಮೊದಲ ಸಿಎಂ ಎಂಬ ಹೆಸರಿಗೂ ಪಾತ್ರರಾಗಿದ್ದಾರೆ.
Published: 18th March 2023 03:52 PM | Last Updated: 18th March 2023 03:52 PM | A+A A-

ಕಾಶಿಯಲ್ಲಿ ಪ್ರಧಾನಿ ಮೋದಿಯೊಂದಿಗೆ ಯೋಗಿ ಆದಿತ್ಯನಾಥ್
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಬೆಳಗ್ಗೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಮೂಲಕ ಕಳೆದ ಆರು ವರ್ಷಗಳಲ್ಲಿ ಈ ದೇವಾಲಯಕ್ಕೆ 100 ಬಾರಿ ಭೇಟಿ ನೀಡಿದ ಉತ್ತರ ಪ್ರದೇಶದ ಮೊದಲ ಸಿಎಂ ಎಂಬ ಹೆಸರಿಗೂ ಪಾತ್ರರಾಗಿದ್ದಾರೆ.
ಯೋಗಿ ಆದಿತ್ಯನಾಥ್ 2017 ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಬಾಬಾ ವಿಶ್ವನಾಥರನ್ನು ಪೂಜಿಸಲು ಮತ್ತು 'ಷೋಡಶೋಪಚಾರ' ವಿಧಾನದ ಮೂಲಕ ರಾಜ್ಯ ಮತ್ತು ದೇಶದ ಜನರ ಕಲ್ಯಾಣಕ್ಕಾಗಿ ಪ್ರಾರ್ಥಿಸಲು ಸರಾಸರಿ 21 ದಿನಗಳಿಗೊಮ್ಮೆ ದೇವಸ್ಥಾನಕ್ಕೆ ಬರುತ್ತಿದ್ದಾರೆ.
ಶುಕ್ರವಾರ 113ನೇ ಬಾರಿಗೆ ವಾರಣಾಸಿಗೆ ಎರಡು ದಿನಗಳ ಭೇಟಿಗೆ ಯೋಗಿ ಬಂದಿದ್ದರು. ಸಿಎಂ ತಿಂಗಳಿಗೊಮ್ಮೆಯಾದರೂ ಕಾಶಿಗೆ ಭೇಟಿ ನೀಡುತ್ತಿದ್ದು, ಪ್ರತಿ ಭೇಟಿಯಲ್ಲೂ ನಗರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಕ್ಷೇತ್ರ ಪರಿಶೀಲನೆ ನಡೆಸುತ್ತಾರೆ.
ಮೊದಲ ಬಾರಿಗೆ ಉತ್ತರ ಪ್ರದೇಶದ ಅಧಿಕಾರ ವಹಿಸಿಕೊಂಡ ನಂತರ, ಯೋಗಿ ಆದಿತ್ಯನಾಥ್ 2017 ರಿಂದ ಮಾರ್ಚ್ 22ರವರೆಗೆ ವಿಶ್ವೇಶ್ವರ ದೇವಾಲಯಕ್ಕೆ 74 ಸಲ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.