
ಅಕ್ರಮ ಶಸ್ತ್ರಾಸ್ತ್ರ
ಚಂಡೀಗಢ: ತೀವ್ರಗಾಮಿ ಧಾರ್ಮಿಕ ಮುಖಂಡ ಅಮೃತ್ ಸಿಂಗ್ ಪಾಲ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕೆ ಮತ್ತೊಂದು ಎಫ್ಐಆರ್ ಭಾನುವಾರದಂದು ದಾಖಲಾಗಿದೆ.
ಅಮೃತ್ ಸರ ಗ್ರಾಮೀಣ ವಿಭಾಗದ ಹಿರಿಯ ಎಸ್ ಪಿ ಸತೀಂದ್ರ ಸಿಂಗ್ ಈ ಬಗ್ಗೆ ಮಾತನಾಡಿದ್ದು ಅಮೃತ್ ಪಾಲ್ ಅವರ ಸಹಚಾರಿಗಳನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಅಮೃತ್ ಪಾಲ್ ವಿರುದ್ಧ ಪಂಜಾಬ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು ಆತನ 78 ಸಹಚರರು ಅಥವಾ ಆತನ ಸಂಘಟನೆಯ ಸದಸ್ಯರನ್ನು ಬಂಧಿಸಿದ್ದಾರೆ.
ಅಮೃತ್ ಪಾಲ್ ನ್ನು ಸೆರೆಹಿಡಿಲು ಕಾರ್ಯಾಚರಣೆ ಮುಂದುವರೆದಿದೆ. ಅಮೃತ್ ಪಾಲ್ ಗೆ ಸಂಬಂಧಿಸಿದ 12 ಬೋರ್ ಗನ್ ಹಾಗೂ ಕೆಲವು ಕಾರ್ಟ್ರಿಜ್ಗಳನ್ನು ವಶಕ್ಕೆ ಪಡೆಯಲಾಗಿದೆ.