ಭಾರತ ವಿರೋಧಿ ಗ್ಯಾಂಗ್ ಹೇಳಿಕೆ ನ್ಯಾಯಾಂಗದ ಮೇಲಿನ ಒತ್ತಡ, ನ್ಯಾಯಾಧೀಶರಿಗೆ ಬೆದರಿಕೆಯೊಡ್ಡುವ ಯತ್ನ: ಸಂಜಯ್ ರೌತ್
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಕೆಲವು ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗ್ ನ ಭಾಗವಾಗಿದ್ದಾರೆ ಎಂಬ ಹೇಳಿಕೆ ನ್ಯಾಯಾಂಗದ ಮೇಲೆ ಒತ್ತಡ ಹೇರುವ, ನ್ಯಾಯಾಧೀಶರಿಗೇ ಬೆದರಿಕೆಯೊಡ್ಡುವ ಯತ್ನ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
Published: 19th March 2023 01:59 PM | Last Updated: 19th March 2023 01:59 PM | A+A A-

ಸಂಜಯ್ ರಾವುತ್
ಮುಂಬೈ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಕೆಲವು ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗ್ ನ ಭಾಗವಾಗಿದ್ದಾರೆ ಎಂಬ ಹೇಳಿಕೆ ನ್ಯಾಯಾಂಗದ ಮೇಲೆ ಒತ್ತಡ ಹೇರುವ, ನ್ಯಾಯಾಧೀಶರಿಗೇ ಬೆದರಿಕೆಯೊಡ್ಡುವ ಯತ್ನ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಇಂಡಿಯಾ ಟುಡೆ ಕಾನ್ಲೇವ್ ನಲ್ಲಿ ಮಾತನಾಡಿದ್ದ ರಿಜಿಜು, ಕೆಲವು ನ್ಯಾಯಾಧೀಶರು ಹಾಗೂ ಕೆಲವು ಸಾಮಾಜಿಕ ಕಾರ್ಯಕರ್ತರು ಭಾರತ ವಿರೋಧಿ ಗ್ಯಾಂಗ್ ನ ಭಾಗವಾಗಿದ್ದು, ಭಾರತೀಯ ನ್ಯಾಯಾಂಗವನ್ನು ವಿಪಕ್ಷಗಳ ಪಾತ್ರ ನಿರ್ವಹಿಸುವಂತೆ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾವುತ್, ಇದು ಎಂತಹ ಪ್ರಜಾಪ್ರಭುತ್ವ? ನ್ಯಾಯಾಂಗಕ್ಕೇ ಬೆದರಿಕೆಯೊಡ್ಡುವುದು ಒಬ್ಬ ಕಾನೂನು ಸಚಿವರಿಗೆ ಸೂಕ್ತವೇ? ಸರ್ಕಾರದೆದುರು ತಲೆಬಾಗದ ನ್ಯಾಯಾಧೀಶರಿಗೆ ಇದು ಬೆದರಿಕೆಯೊಡ್ಡುವುದಾಗಿದೆ, ನ್ಯಾಯಾಂಗದ ಮೇಲಿನ ಒತ್ತಡ ಹೇರುವ ಯತ್ನವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರವನ್ನು ಟೀಕಿಸುವುದೆಂದರೆ, ರಾಷ್ಟ್ರದ ವಿರುದ್ಧ ಮಾತನಾಡುವುದಲ್ಲ ಎಂದು ರಾವುತ್ ಹೇಳಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರ ಬೆನ್ನಲ್ಲೇ ರಾವುತ್ ಹೇಳಿದ್ದಾರೆ.