ರಾಹುಲ್ ಗಾಂಧಿ ಅನರ್ಹತೆಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಇದೆ: ಜೆಡಿಯು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ "ತರಾತುರಿ"ಯಲ್ಲಿ ಅನರ್ಹಗೊಳಿಸಿರುವುದರ ಹಿಂದೆ ಕೇಂದ್ರ ಸರ್ಕಾರದ "ಸಕ್ರಿಯ ಪಾತ್ರ" ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್...
Published: 25th March 2023 04:35 PM | Last Updated: 04th April 2023 01:03 PM | A+A A-

ರಾಹುಲ್ ಗಾಂಧಿ
ಪಾಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ "ತರಾತುರಿ"ಯಲ್ಲಿ ಅನರ್ಹಗೊಳಿಸಿರುವುದರ ಹಿಂದೆ ಕೇಂದ್ರ ಸರ್ಕಾರದ "ಸಕ್ರಿಯ ಪಾತ್ರ" ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ-ಯುನೈಟೆಡ್(ಜೆಡಿಯು) ಶನಿವಾರ ಆರೋಪಿಸಿದೆ.
ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಗುಜರಾತ್ ಕೋರ್ಟ್ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ನಂತರ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಲನ್, ಇದರಲ್ಲಿ ಸರ್ಕಾರದ ಪಾತ್ರ ಇದೆ ಎಂದಿದ್ದಾರೆ.
ಇದನ್ನು ಓದಿ: ನಾನು ಭಾರತೀಯರ ಧ್ವನಿಗಾಗಿ ಹೋರಾಡುತ್ತಿದ್ದೇನೆ: ಲೋಕಸಭಾ ಸದಸ್ಯತ್ವ ಅನರ್ಹತೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ
"ಪ್ರಕರಣವೊಂದರಲ್ಲಿ ಅಪರಾಧ ಸಾಬೀತಾದ ನಂತರ ಸಂಸತ್ತು ಮತ್ತು ಶಾಸಕಾಂಗ ಸದಸ್ಯರನ್ನು ಅನರ್ಹಗೊಳಿಸಲು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಬೇಕು. ಚುನಾವಣಾ ಆಯೋಗದಿಂದ ಅಧಿಸೂಚನೆ ಇರಬೇಕು. ರಾಷ್ಟ್ರಪತಿಗಳ ಅನುಮೋದನೆಯನ್ನು ಪಡೆದ ನಂತರ ಲೋಕಸಭೆ ಸ್ಪೀಕರ್ ಕಾರ್ಯನಿರ್ವಹಿಸಬೇಕು. ನಿಸ್ಸಂಶಯವಾಗಿ, ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ" ಎಂದು ಲಲನ್ ಹೇಳಿದ್ದಾರೆ.
"ಆದರೆ ರಾಹುಲ್ ಗಾಂಧಿ ಪ್ರಕರಣದಲ್ಲಿ, ನ್ಯಾಯಾಲಯ ತೀರ್ಪು ನೀಡಿದ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅನರ್ಹತೆಗೆ ಆದೇಶ ನೀಡಿದ್ದಾರೆ. ಈ ಆತುರದ ನಿರ್ಧಾರದಲ್ಲಿ ಕೇಂದ್ರ ಸರ್ಕಾರ ಪಾತ್ರ ಇದೆ ಎಂದು ತೋರಿಸುತ್ತಿದೆ" ಎಂದು ಅವರು ತಿಳಿಸಿದ್ದಾರೆ.
"ಇಂದು ಕೇಂದ್ರ ಸರ್ಕಾರದ ಉದ್ರೇಕ ಮತ್ತು ಹತಾಶೆಯನ್ನು ತೋರಿಸುತ್ತದೆ. ಆದರೆ ದೇಶದ ಜನರು ಸಾಕಷ್ಟು ಬುದ್ಧಿವಂತರಾಗಿದ್ದಾರೆ ಮತ್ತು ಅವರು ಬಿಜೆಪಿಗೆ ಸೂಕ್ತ ಸಮಯದಲ್ಲಿ ಪಾಠ ಕಲಿಸುತ್ತಾರೆ ಎಂದು ಜೆಡಿಯು ನಾಯಕ ಹೇಳಿದ್ದಾರೆ.