ಎಎಪಿ ಸಂಸದ ರಾಘವ್ ಛಡ್ಡಾ ಜೊತೆ ನಟಿ ಪರಿಣಿತಿ ಛೋಪ್ರಾ ಡೇಟಿಂಗ್?
ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವ್ ಛಡ್ಡಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಘವ್ ಛಡ್ಡಾ, ಪರಿಣಿತಿ ಚೋಪ್ರಾ ಒಟ್ಟಿಗೆ ಡಿನ್ನರ್‌ಗೆ ಆಗಮಿಸಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
Published: 25th March 2023 12:59 PM | Last Updated: 25th March 2023 05:04 PM | A+A A-

ಪರಿಣಿತಿ ಮತ್ತು ರಾಘವ್ ಛಡ್ಡಾ
ಮುಂಬಯಿ: ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವ್ ಛಡ್ಡಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಘವ್ ಛಡ್ಡಾ, ಪರಿಣಿತಿ ಚೋಪ್ರಾ ಒಟ್ಟಿಗೆ ಡಿನ್ನರ್‌ಗೆ ಆಗಮಿಸಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
34 ವರ್ಷದ ರಾಘವ್ ಛಡ್ಡಾ, ಎಎಪಿ ಪಕ್ಷದ ರಾಜ್ಯಸಭಾ ಸದಸ್ಯ. ದೇಶದ ಮೋಸ್ಟ್ ಬ್ಯಾಚುಲರ್ ಸಂಸದರ ಪೈಕಿ ರಾಘವ್ ಛಡ್ಡಾ ಕೂಡ ಪ್ರಮುಖರು. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ರಾಘವ್ ಛಡ್ಡಾ, 2023ರ ಜನವರಿಯಲ್ಲಿ ಇಂಡಿಯಾ- ಯುಕೆ ಆಚೀವರ್ಸ್ ಆಗಿ ಆಯ್ಕೆಯಾಗಿದ್ದರು.
Raghav Chadha & Parineeti Chopra spotted together at a restaurant in Mumbai, pic.twitter.com/HnQJOW8xXV
— News Arena India (@NewsArenaIndia) March 23, 2023
ದೆಹಲಿ ಮೂಲದ ರಾಘವ್ ಛಡ್ಡಾ ಲಂಡನ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ರಾಘವ್ ಛಡ್ಡಾ ಜೊತೆಗೆ ಪರಿಣಿತಿ ಚೋಪ್ರಾ ಕೂಡ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಹೀಗಾಗಿ ಇವರಿಬ್ಬರು ಅಂದಿನಿಂದಲೇ ಆತ್ಮೀಯ ಸ್ನೇಹಿತರಾಗಿದ್ದಾರೆ. ಈ ಇಬ್ಬರು ಇದೀಗ ಒಟ್ಟಿಗೆ ಕಾಣಿಸಿಕೊಂಡಿರೋದು ಇಬ್ಬರ ನಡುವೆ ಪ್ರೇಮಾಂಕುರ ಆಗಿರಬಹುದು ಅನ್ನೋ ಚರ್ಚೆ ಆಗುತ್ತಿದೆ.