
ಅಮೃತಪಾಲ್ ಸಿಂಗ್
ಚಂಢಿಗಡ: ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿರುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಇದೇ ಮೊದಲ ಬಾರಿಗೆ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ವಿಡಿಯೋದಲ್ಲಿ ಅನ್ಯಾಯದ ವಿರುದ್ಧ ಹೋರಾಡಲು ಒಂದಾಗುವಂತೆ ಅಮೃತಪಾಲ್ ಸಿಂಗ್ ಭಾರತ ಮತ್ತು ವಿದೇಶದಲ್ಲಿರುವ ಸಿಖ್ ಸಮುದಾಯದ ಜನರಿಗೆ ಕರೆ ನೀಡಿದ್ದಾರೆ. ಇದೇ ವೇಳೆ ತಮ್ಮ ಸಹಚರರನ್ನು ಬಂಧಿಸಲಾಗಿದ್ದು ಅವರ ಮೇಲೆ ಎನ್‌ಎಸ್‌ಎ ವಿಧಿಸಲಾಗಿದೆ ಎಂದರು. ಅಮೃತಪಾಲ್ ಸಿಂಗ್ ಮಾರ್ಚ್ 18ರ ಘಟನೆಯ ಬಗ್ಗೆ ವಿವರಿಸಿದ್ದಾರೆ. ಇನ್ನು ಸರ್ಕಾರವು ಜನರನ್ನು, ಹೆಂಗಸರು, ಮಕ್ಕಳನ್ನೂ ಹಿಂಸಿಸುತ್ತಿದೆ ಎಂದರು.
ತನ್ನ ಸಹಚರ ಬಜೆಕೆ ಮೇಲೆ ಸರ್ಕಾರ ದೌರ್ಜನ್ಯ ಎಸಗಿದೆ. ಆತನ ಮೇಲೆ ಎನ್‌ಎಸ್‌ಎ ಹಾಕಿ ಅಸ್ಸಾಂಗೆ ಕಳುಹಿಸಲಾಗಿತ್ತು. ನನ್ನನ್ನು ಮತ್ತು ನನ್ನ ಸಹೋದ್ಯೋಗಿಗಳನ್ನು ಅಸ್ಸಾಂಗೆ ಕಳುಹಿಸಲಾಗಿದೆ. ನಾವು ನಡೆಯುವ ಹಾದಿಯಲ್ಲಿ ಇದೂ ಕೂಡ ನಮ್ಮ ಮುಂದೆ ಬರುತ್ತದೆ ಎಂದು ತಿಳಿದಿದ್ದೆವು ಎಂದು ಅಮೃತಪಾಲ್ ಹೇಳಿದ್ದಾರೆ. ಇದೇ ವೇಳೆ ಬೈಸಾಖಿಯ ಸರ್ಬತ್ ಖಾಲ್ಸಾದಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಎಲ್ಲಾ ಸಿಖ್ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಜಠೇದಾರರು ಈ ವಿಚಾರದಲ್ಲಿ ನಿಲುವು ತಳೆಯಬೇಕು ಹಾಗೂ ಸರ್ಬತ್ ಖಾಲ್ಸಾದಲ್ಲಿ ಎಲ್ಲ ಜಥೇದಾರರು, ತಕ್ಕಸರು ಭಾಗವಹಿಸಬೇಕು ಎಂದರು.
#BREAKING: Khalistani Radical Amritpal Singh releases a new video from hiding in Punjab. Requests Jathedar of Akal Takht to call Sarbad Khalsa (congregation of Sikhs) to discuss issues to save Punjab. Dares Punjab CM Bhagwant Mann and Punjab Police.
— Aditya Raj Kaul (@AdityaRajKaul) March 29, 2023
pic.twitter.com/vhcDN1lBaE
ಪರಾರಿಯಾಗಿರುವ ಅಮೃತಪಾಲ್ ಮತ್ತಷ್ಟು ಹೇಳಿದ್ದು ಬೈಸಾಖಿಯಂದು ನಡೆಯಲಿರುವ ಸರ್ಬತ್ ಖಾಲ್ಸಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶ ಮತ್ತು ವಿದೇಶದಲ್ಲಿರುವ ಎಲ್ಲಾ ಸಿಖ್ ಜನರಿಗೆ ನಾನು ಮನವಿ ಮಾಡುತ್ತೇನೆ. ಬಹಳ ದಿನಗಳಿಂದ ನಮ್ಮ ಸಮುದಾಯ ಸಣ್ಣಪುಟ್ಟ ವಿಚಾರಗಳಿಗೆ ಮಣೆ ಹಾಕುವುದರಲ್ಲಿ ಮಗ್ನವಾಗಿದೆ. ನಾವು ಪಂಜಾಬ್‌ನ ಸಮಸ್ಯೆಗಳನ್ನು ಪರಿಹರಿಸಬೇಕಾದರೆ, ನಾವು ಒಟ್ಟಿಗೆ ಇರಬೇಕು. ಸರ್ಕಾರ ನಮಗೆ ಮೋಸ ಮಾಡಿರುವ ರೀತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅನೇಕ ಸಹಚರರನ್ನು ಬಂಧಿಸಲಾಗಿದೆ ಎಂದರು.
ಇದನ್ನೂ ಓದಿ: ಪೇಟವಿಲ್ಲದೆ ಮಾಸ್ಕ್ ಧರಿಸಿ ಅಮೃತ್ ಪಾಲ್ ಸಿಂಗ್ ದೆಹಲಿಯ ಮಾರ್ಕೆಟ್ ನಲ್ಲಿ ಓಡಾಟ; ಸಿಸಿಟಿವಿಯಲ್ಲಿ ಪತ್ತೆ!
ಸರ್ಬತ್ ಖಾಲ್ಸಾ ಎಂದರೇನು?
ಸರ್ಬತ್ ಖಾಲ್ಸಾ ಅನೇಕ ಸಿಖ್ ಸಂಘಟನೆಗಳು ಭಾಗವಹಿಸುವ ಕೂಟವಾಗಿದೆ. ಈ ಸಮಯದಲ್ಲಿ, ಆರಾಧನಾ ಸಂಸ್ಥೆಗಳು ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಚರ್ಚಿಸುತ್ತವೆ. ಇದರ ನಂತರ, ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ, ತಖ್ತ್ ಸಾಹಿಬ್‌ನ ಜಥೇದಾರ್ ಅದನ್ನು ಅನುಸರಿಸಲು ಸಮುದಾಯಕ್ಕೆ ಆದೇಶಿಸುತ್ತಾರೆ.
'ನನ್ನನ್ನು ಬಂಧಿಸಲು ಸರ್ಕಾರ ಬಯಸಲಿಲ್ಲ'
ತನ್ನನ್ನು ಬಂಧಿಸುವುದು ಸರ್ಕಾರದ ಉದ್ದೇಶವಾಗಿದ್ದರೆ ಸರ್ಕಾರ ತನ್ನನ್ನು ಬಂಧಿಸುತ್ತಿತ್ತು ಎಂದು ಅಮೃತಪಾಲ್ ವಿಡಿಯೋದಲ್ಲಿ ಹೇಳಿದ್ದಾರೆ. ಸರ್ಕಾರ ಮನೆಯಿಂದಲೇ ನಮ್ಮನ್ನು ಬಂಧಿಸಿದ್ದರೆ ನಾವು ಬಂಧನಕ್ಕೆ ಶರಣಾಗುತ್ತಿದ್ದೆವು. ಆದರೆ ಸರಕಾರ ಅನುಸರಿಸುತ್ತಿರುವ ಧೋರಣೆ ಸರಿಯಿಲ್ಲ. ಲಕ್ಷಗಟ್ಟಲೆ ಬಲಪ್ರಯೋಗ ಮಾಡಿ ಮುತ್ತಿಗೆ ಹಾಕಿ ನನ್ನನ್ನು ಬಂಧಿಸಲು ಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.