ಜುಲೈ ತಿಂಗಳಲ್ಲಿ ಫ್ರಾನ್ಸ್ ಗೆ ಪ್ರಧಾನಿ ಮೋದಿ ಭೇಟಿ; ಗೌರವ ಅತಿಥಿಯಾಗಿ ಬಾಸ್ಟಿಲ್ ಡೇ ಪರೇಡ್ ನಲ್ಲಿ ಭಾಗಿ

ಭಾರತ-ಫ್ರಾನ್ಸ್ ನ ಕಾರ್ಯತಂತ್ರದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬಾಸ್ಟಿಲ್ ಡೇ ಪರೇಡ್ ನಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಭಾರತ-ಫ್ರಾನ್ಸ್ ನ ಕಾರ್ಯತಂತ್ರದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬಾಸ್ಟಿಲ್ ಡೇ ಪರೇಡ್ ನಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಜುಲೈ 14 ರಂದು ಪ್ಯಾರಿಸ್ ಗೆ ಪ್ರಧಾನಿ ಭೇಟಿ ನೀಡಲಿದ್ದು ಈ ಪ್ರವಾಸದ ವೇಲೆ ಬಾಸ್ಟಿಲ್ ಡೇ ಪರೇಡ್ ನಲ್ಲಿಯೂ ಭಾಗಿಯಾಗಲಿದ್ದಾರೆ.

ಈ ಪರೇಡ್ ನಲ್ಲಿ ಭಾಗಿಯಾಗುವಂತೆ ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಹ್ವಾನ ನೀಡಿದ್ದು, ಅಧಿಕೃತ ಮಾಹಿತಿಯ ಪ್ರಕಾರ, ಭಾರತೀಯ ಸಶಸ್ತ್ರ ಪಡೆಗಳು ತಮ್ಮ ಫ್ರೆಂಚ್ ಸಹವರ್ತಿಗಳೊಂದಿಗೆ ಪರೇಡ್‌ನಲ್ಲಿ ಭಾಗವಹಿಸುತ್ತವೆ.

ಪ್ರಧಾನಿ ಮೋದಿಯವರ ಭೇಟಿ ಫ್ರಾನ್ಸ್- ಭಾರತದ ನಡುವಿನ ಕಾರ್ಯತಂತ್ರ-ದ್ವಿಪಕ್ಷೀಯ ಸಂಬಂಧ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಮುಂದಿನ ಹಂತಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ

ಭಾರತ ಮತ್ತು ಫ್ರಾನ್ಸ್ ವಿಶ್ವಸಂಸ್ಥೆಯ ಚಾರ್ಟರ್‌ನ ಗುರಿಗಳು ಮತ್ತು ತತ್ವಗಳನ್ನು ರಕ್ಷಿಸುತ್ತಿದ್ದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಎರಡು ರಾಷ್ಟ್ರಗಳ ನಡುವಿನ ಸಹಯೋಗದ ಮೂಲಾಧಾರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವಿಶೇಷವಾಗಿ ಯುರೋಪ್ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಭದ್ರತೆಗಾಗಿ ದೃಷ್ಟಿಯನ್ನು ಹಂಚಿಕೊಳ್ಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com