ಜಮ್ಮು-ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಎಎಲ್ ಹೆಚ್ ಧ್ರುವ್ ಹಾರಾಟಕ್ಕೆ ತಾತ್ಕಾಲಿಕ ತಡೆ

ಜಮ್ಮು-ಕಾಶ್ಮೀರದಲ್ಲಿ ಕಳೆದ ಗುರುವಾರ ಹೆಲಿಕಾಪ್ಟರ್‌ ಪತನಗೊಂಡ ನಂತರ ಸುಧಾರಿತ ಹಗುರ ಹೆಲಿಕಾಪ್ಟರ್ (ALH) ಧ್ರುವ್‌ನ ಸಂಪೂರ್ಣ ಪಚಾಪರ್ ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 
ಜಮ್ಮು- ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಅರಣ್ಯ, ಡ್ಡಗಾಡು ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡ ನಂತರ ಸ್ಥಳೀಯರು ಪರಿಶೀಲಿಸುತ್ತಿರುವುದು
ಜಮ್ಮು- ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಅರಣ್ಯ, ಡ್ಡಗಾಡು ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡ ನಂತರ ಸ್ಥಳೀಯರು ಪರಿಶೀಲಿಸುತ್ತಿರುವುದು

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಕಳೆದ ಗುರುವಾರ ಹೆಲಿಕಾಪ್ಟರ್‌ ಪತನಗೊಂಡ ನಂತರ ಸುಧಾರಿತ ಹಗುರ ಹೆಲಿಕಾಪ್ಟರ್ (ALH) ಧ್ರುವ್‌ನ ಸಂಪೂರ್ಣ ಪಚಾಪರ್ ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

ಜಮ್ಮು- ಕಾಶ್ಮೀರದ ಕಿಶ್ತ್ವಾರದಲ್ಲಿ ಮೂರು ಜನರಿದ್ದ ಎಎಲ್‌ಹೆಚ್ ಧ್ರುವ ವಿಮಾನ ಕಳೆದ ಗುರುವಾರ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಓರ್ವ ತಂತ್ರಜ್ಞ ಮೃತಪಟ್ಟು ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದರು. 

ಮುನ್ನೆಚ್ಚರಿಕೆ ಕ್ರಮವಾಗಿ ಎಎಲ್‌ಎಚ್ ಧ್ರುವ್ ನೌಕಾಪಡೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ಲಾಟ್ ಫಾರ್ಮ್ ಸಮಸ್ಯೆ ಒಳಗೊಂಡ ಎರಡು ರೀತಿಯ ಘಟನೆಗಳ ನಂತರ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಮಾರ್ಚ್‌ನಲ್ಲಿ ತಮ್ಮ ALH ಧ್ರುವ್ ಚಾಪರ್‌ಗಳನ್ನು ಸ್ಥಗಿತಗೊಳಿಸಿದ್ದವು.

ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ ನಲ್ಲಿರುವ ಎಎಲ್‌ಹೆಚ್ ಧ್ರುವ ಚಾಪರ್‌ಗಳು ತಾಂತ್ರಿಕ ತಪಾಸಣೆಗೆ ಒಳಗಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.

ಪರಿಶೀಲನೆ ಪ್ರಕ್ರಿಯೆ ನಂತರ ಕ್ಲಿಯರೆನ್ಸ್ ಪಡೆದ ಹೆಲಿಕಾಪ್ಟರ್‌ಗಳು ಈಗ ಹಾರಾಟ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ವಾಯುಪಡೆಯು ಸುಮಾರು 70 ALH ಧ್ರುವ ಚಾಪರ್‌ಗಳ ಕಾರ್ಯನಿರ್ವಹಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com