'ಅಶೋಕ್ ಗೆಹ್ಲೊಟ್ ಅವರ ನಾಯಕಿ ವಸುಂಧರಾ ರಾಜೆ ಎಂದು ಕಾಣುತ್ತದೆ': ಸಚಿನ್ ಪೈಲಟ್ ಟಾಂಗ್
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಮಂಗಳವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ, ಅಶೋಕ್ ಗೆಹ್ಲೊಟ್ ಅವರು ಧೋಲ್‌ಪುರದಲ್ಲಿ ಮಾಡಿದ ಭಾಷಣವನ್ನು ನೋಡಿದಾಗ ಅವರ ನಾಯಕಿ "ಸೋನಿಯಾ ಗಾಂಧಿ ಅಲ್ಲ ಆದರೆ ವಸುಂಧರಾ ರಾಜೇ ಸಿಂಧಿಯಾ" ಎಂದು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
Published: 09th May 2023 02:00 PM | Last Updated: 09th May 2023 02:14 PM | A+A A-

ಸಚಿನ್ ಪೈಲಟ್
ಜೈಪುರ (ರಾಜಸ್ಥಾನ): ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಮಂಗಳವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ, ಅಶೋಕ್ ಗೆಹ್ಲೊಟ್ ಅವರು ಧೋಲ್‌ಪುರದಲ್ಲಿ ಮಾಡಿದ ಭಾಷಣವನ್ನು ನೋಡಿದಾಗ ಅವರ ನಾಯಕಿ "ಸೋನಿಯಾ ಗಾಂಧಿ ಅಲ್ಲ ಆದರೆ ವಸುಂಧರಾ ರಾಜೇ ಸಿಂಧಿಯಾ" ಎಂದು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
2020ರಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೋರಿ ಪೈಲಟ್ ಮತ್ತು ಕೆಲವು ಕಾಂಗ್ರೆಸ್ ಶಾಸಕರು ಬಂಡಾಯವೆದ್ದ ಸಂದರ್ಭದಲ್ಲಿ ತಮ್ಮ ಸರ್ಕಾರವನ್ನು ಉಳಿಸಲು ಸಹಾಯ ಮಾಡಿದ ಬಿಜೆಪಿ ನಾಯಕರಲ್ಲಿ ವಸುಂಧರಾ ರಾಜೆ ಕೂಡ ಇದ್ದಾರೆ ಎಂದು ಗೆಹ್ಲೋಟ್ ಹೇಳಿಕೊಂಡಿದ್ದರು.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೈಲಟ್, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಗೆಹ್ಲೋಟ್ ಏಕೆ ಮೌನವಾಗಿದ್ದರು ಎಂದು ಈಗ ನನಗೆ ಅರ್ಥವಾಗಿದೆ ಎಂದು ಹೇಳಿದರು.
ಧೋಲ್ಪುರದಲ್ಲಿ ಅಶೋಕ್ ಗೆಹ್ಲೋಟ್ ಅವರ ಭಾಷಣವನ್ನು ಕೇಳಿದ ನಂತರ ಅವರ ನಾಯಕಿ ಸೋನಿಯಾ ಗಾಂಧಿ ಅಲ್ಲ ವಸುಂಧರಾ ರಾಜೇ ಸಿಂಧಿಯಾ ಎಂದು ತೋರುತ್ತದೆ. ಮೊದಲ ಬಾರಿಗೆ, ಯಾರಾದರೂ ತಮ್ಮದೇ ಪಕ್ಷದ ಸಂಸದರು ಮತ್ತು ಶಾಸಕರನ್ನು ಟೀಕಿಸುವುದನ್ನು ನಾನು ನೋಡುತ್ತಿದ್ದೇನೆ. ಬಿಜೆಪಿಯ ನಾಯಕರನ್ನು ಹೊಗಳುವುದು ಮತ್ತು ಕಾಂಗ್ರೆಸ್ ನಾಯಕರನ್ನು ಅವಮಾನಿಸುವುದು ಕಂಡುಬರುತ್ತಿದೆ. ಇದು ಸಂಪೂರ್ಣವಾಗಿ ತಪ್ಪು ಎಂದು ಪೈಲಟ್ ಹೇಳಿದರು.
#WATCH | After listening to Ashok Gehlot's speech in Dholpur, it seems like his leader is not Sonia Gandhi but Vasundhara Raje Scindia: Congress MLA Sachin Pilot pic.twitter.com/Cs6KoMpsbh
— ANI (@ANI) May 9, 2023
ಅಶೋಕ್ ಗೆಹ್ಲೋಟ್ ಭ್ರಷ್ಟಾಚಾರದ ವಿರುದ್ಧ ಏಕೆ ಕಾರ್ಯನಿರ್ವಹಿಸಲಿಲ್ಲ, ಧ್ವನಿಯೆತ್ತಲಿಲ್ಲ ಎಂದು ನನಗೆ ಈಗ ಅರ್ಥವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ನಮ್ಮಿಬ್ಬರ ಕಿತ್ತಾಟದಲ್ಲಿ ಜನ ಜಗಳವಾಡುವಂತೆ ಮಾಡಬೇಡಿ: ಮಾಧ್ಯಮಗಳಿಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮನವಿ
ರಾಜಸ್ತಾನದಲ್ಲಿ ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಇಬ್ಬರು ನಾಯಕರ ಮಧ್ಯೆ ಈ ರೀತಿಯ ಜಗಳ, ಭಿನ್ನಮತ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಕಾಂಗ್ರೆಸ್ ನಿರ್ಣಾಯಕ ಹೋರಾಟ ನಡೆಸುತ್ತಿರುವ ಕರ್ನಾಟಕ ಚುನಾವಣೆಯ ಮತದಾನಕ್ಕೆ ಒಂದು ದಿನ ಮೊದಲು ಸಚಿನ್ ಪೈಲಟ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಪೈಲಟ್ ಅವರು ಮೇ 11 ರಿಂದ ಅಜ್ಮೀರ್‌ನಿಂದ ಜೈಪುರಕ್ಕೆ ಐದು ದಿನಗಳ ಕಾಲ 'ಜನಸಂಘರ್ಷ್ ಯಾತ್ರೆ' ನಡೆಸುವುದಾಗಿ ಘೋಷಿಸಿದರು. ಈ ಯಾತ್ರೆ ಭ್ರಷ್ಟಾಚಾರದ ವಿರುದ್ಧ. ಈ ಯಾತ್ರೆಯ ನಂತರ ಯಾವುದೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ಅಶೋಕ್ ಗೆಹ್ಲೋಟ್ ಅವರ ಹೇಳಿಕೆಗೆ ಪ್ರತಿಯಾಗಿ, ರಾಜಸ್ಥಾನ ಮುಖ್ಯಮಂತ್ರಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಸುಳ್ಳು ಹೇಳುತ್ತಿದ್ದಾರೆ ಮತ್ತು ಅವರ ಸುಳ್ಳು ಆರೋಪಗಳು ರಾಜ್ಯ ಕಾಂಗ್ರೆಸ್ ಘಟಕದಲ್ಲಿನ ಬಂಡಾಯದಿಂದ ಅವರು ಜರ್ಜರಿತರಾಗಿದ್ದಾರೆಂದು ತೋರಿಸುತ್ತದೆ ಎಂದು ಹೇಳಿದ್ದಾರೆ.
ಮೊನ್ನೆ ಭಾನುವಾರ ಧೋಲ್ಪುರದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೆಹ್ಲೋಟ್, ತಮ್ಮ ಸರ್ಕಾರದ ವಿರುದ್ಧ ಪಿತೂರಿ ನಡೆದಿದೆ ಎಂದು ಆರೋಪಿಸಿದದ್ದರು.