ಚತ್ತೀಸ್ ಗಢ: ಮದುವೆ ಮುರಿದ ಪ್ರೀ ವೆಡ್ಡಿಂಗ್ ಶೂಟ್; ಅಲ್ಲಿ ಆಗಿದ್ದೇನು ಅಂದರೆ...

ವಿವಾಹವಾಗಬೇಕಿರುವ ನವಜೋಡಿಗಳಿಗೆ ಪ್ರೀ ವೆಡ್ಡಿಂಗ್ ಶೂಟ್ ಎಂಬುದು ಅತ್ಯಂತ ನೆನಪಿನಲ್ಲಿ ಉಳಿಯುವ ಸಂಗತಿ. ಆದರೆ ಇದೇ ವಿವಾಹಕ್ಕೆ ಮುಳುವಾದರೆ? ಇಂಥದ್ದೊಂದು ವಿಲಕ್ಷಣ ಘಟನೆ ಚತ್ತೀಸ್ ಗಢದಲ್ಲಿ ನಡೆದಿದೆ. 
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ರಾಯ್ ಪುರ: ವಿವಾಹವಾಗಬೇಕಿರುವ ನವಜೋಡಿಗಳಿಗೆ ಪ್ರೀ ವೆಡ್ಡಿಂಗ್ ಶೂಟ್ ಎಂಬುದು ಅತ್ಯಂತ ನೆನಪಿನಲ್ಲಿ ಉಳಿಯುವ ಸಂಗತಿ. ಆದರೆ ಇದೇ ವಿವಾಹಕ್ಕೆ ಮುಳುವಾದರೆ? ಇಂಥದ್ದೊಂದು ವಿಲಕ್ಷಣ ಘಟನೆ ಚತ್ತೀಸ್ ಗಢದಲ್ಲಿ ನಡೆದಿದೆ. 

ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಮತ್ತಷ್ಟು ಗಾಢವಾಗಬೇಕಿದ್ದ ಜೋಡಿಯ ಸಂಬಂಧ ಅಲ್ಲೇ ಮುರಿದುಬಿದ್ದಿದೆ. 

ವಿವಾಹಪೂರ್ವ ಶೂಟಿಂಗ್ ಗೂ ಮುನ್ನವೇ ಜೋಡಿಗಳಿಗೆ ತಾವು ಒಟ್ಟಿಗೆ ಇರುವುದು ಸಾಧ್ಯವಿಲ್ಲ ಎಂದೆನಿಸಿತ್ತು. ಆದರೆ ಸಂಬಂಧಿಕರು ಹರಸಾಹಸಪಟ್ಟು ಕೊನೆಪಕ್ಷ ಪ್ರೀ ವೆಡ್ಡಿಂಗ್ ಶೂಟ್ ಬಳಿಕವಾದರೂ ಇಬ್ಬರೂ ಮನಸ್ಸು ಬದಲಿಸಿಕೊಳ್ಳುತ್ತಾರೇನೋ ಕಾದು ನೋಡೋಣ ಎಂದು ತೇಪೆ ಹಚ್ಚಿದ್ದರು ಎನ್ನುತ್ತಾರೆ ವರನ ಕಡೆಯ ಸಂಬಂಧಿ.

ಪ್ರೀವೆಡ್ಡಿಂಗ್ ಶೂಟ್ ಬಳಿಕ ಅದೇನಾಯ್ತೋ ಗೊತ್ತಿಲ್ಲ ಆದರೆ ವಿವಾಹವಂತೂ ಮುರಿದುಬಿದ್ದಿದೆ. ಯುವತಿ ಪ್ರೀ ವೆಡ್ಡಿಂಗ್ ಶೂಟ್ ನ ಫೋಟೋ, ವೀಡಿಯೋಗಳನ್ನು ಡೀಲೀಟ್ ಮಾಡಿಸುವಂತೆ ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿದ್ದಾಳೆ. ಅಷ್ಟೇ ಅಲ್ಲದೇ ವಿವಾಹಕ್ಕಾಗಿ ಮಾಡಿದ್ದ ಖರ್ಚಿನಿಂದ ನಷ್ಟ ಉಂಟಾಗಿದ್ದು, ಪರಿಹಾರ ಕೊಡಿಸುವಂತೆ ಕೇಳಿದ್ದಾಳೆ.

ಆಯೋಗದ ಮಧ್ಯಪ್ರವೇಶದಿಂದಾಗಿ ಸಮಸ್ಯೆ ಸಂಧಾನದ ಮೂಲಕ ಬಗೆಹರಿದಿದ್ದು, ದೂರನ್ನು ಯುವತಿ ವಾಪಸ್ ತೆಗೆದುಕೊಂಡಿದ್ದಾಳೆ. ಮಹಿಳಾ ಆಯೋಗಕ್ಕೆ ಯುವತಿ ದೂರು ನೀಡಿದ್ದರ ಪ್ರಕಾರ, ಬೇಡಿಕೆ ಇಟ್ಟಿದ್ದ ಹಣ ತಲುಪಿದ್ದು, ವರ ಪ್ರೀ ವೆಡ್ಡಿಂಗ್ ಆಲ್ಬಂ ನ್ನು ಡಿಲೀಟ್ ಮಾಡುವುದಾಗಿ ಭರವಸೆ ನೀಡಿದ್ದಾನೆ.
 
ಭವಿಷ್ಯದಲ್ಲಿ ಹುಡುಗಿಯ ಯಾವುದೇ ಚಿತ್ರ ಅಥವಾ ವೀಡಿಯೊವನ್ನು ನೆಟ್ ಅಥವಾ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದರೆ, ಸಂತ್ರಸ್ತೆಯಾಗಿ ಅವಳು ಸೈಬರ್ ಕ್ರೈಮ್ ಸೆಲ್‌ಗೆ ದೂರು ದಾಖಲಿಸಬಹುದು ಎಂದು ಆಯೋಗವು ವರನಿಗೆ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com