
ಕೋಮು ಗಲಭೆ (ಸಂಗ್ರಹ ಚಿತ್ರ)
ಮುಂಬೈ: ಮಹಾರಾಷ್ಟ್ರದ ಅಕೋಲ ಹಾಗೂ ಶೆವ್ಗಾಂವ್ ನಲ್ಲಿ ಕಳೆದ 2 ದಿನಗಳಿಂದ ಕೋಮು ಗಲಭೆ ಉಂಟಾಗಿದ್ದು, ಇತರೆಡೆಗೆ ಈ ಕಿಚ್ಚು ಹರಡದಂತೆ ತಡೆಯಲು ಮಹಾರಾಷ್ಟ್ರ ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಈ ವರೆಗೂ 130 ಮಂದಿಯನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತ ಪಟ್ಟಿದ್ದರೆ, 13 ಮಂದಿಗೆ ತೀವ್ರ ಗಾಯಗಳಾಗಿವೆ.
ರಾಜ್ಯ ಸಚಿವ ಗಿರೀಶ್ ಮಹಾಜನ್ ಅಕೋಲಾದಲ್ಲಿನ ಗಲಭೆ ಬಗ್ಗೆ ಮಾತನಾಡಿದ್ದು, ಅಕೋಲಾದ ಗಲಭೆ ಪೂರ್ವಯೋಜಿತವಾಗಿದೆ ಎಂದು ಆರೋಪಿಸಿದ್ದರೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಕೆಲವು ಮಂದಿ ಹಾಗೂ ಸಂಘಟನೆಗಳು ರಾಜ್ಯ ಅಸ್ಥಿರದಲ್ಲಿರುವುದನ್ನು ಬಯಸುತ್ತಿದ್ದಾರೆ. ಆದರೆ ಸರ್ಕಾರ ಪಾಠ ಕಲಿಸಲಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ಈ ಗಲಭೆಗಳು ಪ್ರಾರಂಭವಾಗಿವೆ. ಶನಿವಾರದಂದು ಉಂಟಾದ ಈ ಗಲಭೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೂ ಪೆಟ್ಟಾಗಿದೆ.