ಶಾಲಾ ಶಿಕ್ಷಕರ ನೇಮಕಾತಿ ಹಗರಣ: ಅಭಿಷೇಕ್ ಬ್ಯಾನರ್ಜಿಗೆ ಸಿಬಿಐ ಸಮನ್ಸ್

ಶಾಲಾ ಉದ್ಯೋಗ ಹಗರಣದ ತನಿಖೆಯ ಭಾಗವಾಗಿ ಶನಿವಾರ ವಿಚಾರಣೆಗಾಗಿ  ಹಾಜರಾಗುವಂತೆ ಟಿಎಂಸಿ ನಾಯಕ ಅಭಿಷೇಖ್ ಬ್ಯಾನರ್ಜಿ ಅವರಿಗೆ ಸಿಬಿಐ ಸಮನ್ಸ್ ನೀಡಿದೆ. ಕೊಲ್ಕತ್ತಾದ ನಿಜಮ್ ಪ್ಯಾಲೇಸ್ ನಲ್ಲಿರುವ ಕಚೇರಿಯಲ್ಲಿ ತನಿಖೆಗೆ ಹಾಜರಾಗುವಂತೆ ಬ್ಯಾನರ್ಜಿ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಭಿಷೇಕ್ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ

ಕೊಲ್ಕತ್ತ: ಶಾಲಾ ಉದ್ಯೋಗ ಹಗರಣದ ತನಿಖೆಯ ಭಾಗವಾಗಿ ಶನಿವಾರ ವಿಚಾರಣೆಗಾಗಿ  ಹಾಜರಾಗುವಂತೆ ಟಿಎಂಸಿ ನಾಯಕ ಅಭಿಷೇಖ್ ಬ್ಯಾನರ್ಜಿ ಅವರಿಗೆ ಸಿಬಿಐ ಸಮನ್ಸ್ ನೀಡಿದೆ. ಕೊಲ್ಕತ್ತಾದ ನಿಜಮ್ ಪ್ಯಾಲೇಸ್ ನಲ್ಲಿರುವ ಕಚೇರಿಯಲ್ಲಿ ತನಿಖೆಗೆ ಹಾಜರಾಗುವಂತೆ ಬ್ಯಾನರ್ಜಿ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ತಮ್ಮನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ನ್ಯಾಯಾಲಯದ ಹಿಂದಿನ ಆದೇಶವನ್ನು ಹಿಂಪಡೆಯುವಂತೆ ಕೋರಿ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ಗುರುವಾರ ವಜಾಗೊಳಿಸಿತ್ತು.

ನೇಮಕಾತಿ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಹೆಸರಿಸುವಂತೆ ಕೇಂದ್ರ ತನಿಖಾ ಸಂಸ್ಥೆಗಳಿಂದ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ ಹಗರಣದ ಆರೋಪಿ ಕುಂತಲ್ ಘೋಷ್ ಸಲ್ಲಿಸಿರುವ ದೂರಿನಲ್ಲಿ  ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com