ಮುಸ್ಲಿಂ ಯುವಕನ ಜೊತೆ ಬಿಜೆಪಿ ಮುಖಂಡನ ಪುತ್ರಿಯ ವಿವಾಹ: ಹಿಂದೂ ಸಂಘಟನೆಗಳ ಪ್ರತಿಭಟನೆ

ಬಿಜೆಪಿ ನಾಯಕರೊಬ್ಬರ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿದ್ದಾಳೆ ಎಂಬ  ಲಗ್ನ ಪತ್ರಿಕೆ ಫೋಟೋ ವೈರಲ್ ಆಗಿದೆ, ಇದರ ಬೆನ್ನಲ್ಲೇ ಇದನ್ನು ವಿರೋಧಿಸಿ ಝಂಡಾ ಚೌಕ್‌ನಲ್ಲಿ ಶುಕ್ರವಾರ ಹಿಂದುತ್ವ ಸಂಘಟನೆಗಳು ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉತ್ತರಾಖಂಡ: ಬಿಜೆಪಿ ನಾಯಕರೊಬ್ಬರ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿದ್ದಾಳೆ ಎಂಬ  ಲಗ್ನ ಪತ್ರಿಕೆ ಫೋಟೋ ವೈರಲ್ ಆಗಿದೆ, ಇದರ ಬೆನ್ನಲ್ಲೇ ಇದನ್ನು ವಿರೋಧಿಸಿ ಝಂಡಾ ಚೌಕ್‌ನಲ್ಲಿ ಶುಕ್ರವಾರ ಹಿಂದುತ್ವ ಸಂಘಟನೆಗಳು ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ವಿಎಚ್‌ಪಿ, ಭೈರವ ಸೇನೆ ಮತ್ತು ಬಜರಂಗದಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಇಂತಹ ಮದುವೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಜಿಲ್ಲಾ ವಿಎಚ್‌ಪಿ ಕಾರ್ಯಾಧ್ಯಕ್ಷ ದೀಪಕ್‌ಗೌಡ ಹೇಳಿದರು.

ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿರುವ ಬಿಜೆಪಿ ನಾಯಕರ ಮಗಳ ಮದುವೆ ಕಾರ್ಡ್‌ನ ಫೋಟೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ನಿಷ್ಠುರವಾದಿಗಳಲ್ಲಿ ಅಸಮಾಧಾನ ಮೂಡಿಸಿದೆ.

ಮೇ 28 ರಂದು ಘುದ್ದೌಡಿ ಪ್ರದೇಶದ ರೆಸಾರ್ಟ್‌ನಲ್ಲಿ ವಿವಾಹ ನಡೆಯಲಿದೆ. ಬೇನಾಮ್ ಪ್ರಸ್ತುತ ಪೌರಿ ಮುನ್ಸಿಪಲ್ ಕಾರ್ಪೊರೇಶನ್ ಅಧ್ಯಕ್ಷರಾಗಿದ್ದಾರೆ. ಮಾಜಿ ಶಾಸಕರಾಗಿದ್ದ ಅವರು ಈ ಹಿಂದೆ ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡು ಬಿಜೆಪಿ ಸೇರಿದ್ದರು.  ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ರಾಜಕೀಯ ನಾಯಕರನ್ನು ಮದುವೆಗೆ ಆಹ್ವಾನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com