
ಆಜಂ ಖಾನ್
ಲಖನೌ: 2019 ರ ದ್ವೇಷ ಭಾಷಣ ಪ್ರಕರಣದಲ್ಲಿ ರಾಮ್ ಪುರ ಕೋರ್ಟ್ ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ನ್ನು ಖುಲಾಸೆ ಮಾಡಿದೆ.
ಈ ಹಿಂದೆ ಆಜಂ ಖಾನ್ ಅವರನ್ನು ಕೋರ್ಟ್ ದೋಷಿ ಎಂದು ತೀರ್ಪು ನೀಡಿ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ಪರಿಣಾಮ ಕಳೆದ ವರ್ಷ ಉತ್ತರ ಪ್ರದೇಶ ವಿಧಾನಸಭಾ ಸದಸ್ಯತ್ವ ಸ್ಥಾನವನ್ನು ಕಳೆದುಕೊಂಡಿದ್ದರು.
ಕೆಳ ಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಜಿಲ್ಲಾ ಹೆಚ್ಚುವರಿ ಹಾಗೂ ಸೆಷನ್ಸ್ ನ್ಯಾಯಾಧೀಶ (ಎಂಪಿ/ ಎಂಎಲ್ಎ ನ್ಯಾಯಾಲಯ) ಅಮಿತ್ ವೀರ್ ಸಿಂಗ್ 2019 ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ 'ದ್ವೇಷ' ಭಾಷಣ ಮಾಡಿದ ಆರೋಪದಿಂದ ಎಸ್‌ಪಿ ನಾಯಕನನ್ನು ಮುಕ್ತಗೊಳಿಸಿದ್ದಾರೆ.
ಪ್ರಕರಣದ ಚಾರ್ಜ್‌ಶೀಟ್ ಪ್ರಕಾರ, ಅಜಂ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅಕ್ಟೋಬರ್ 27, 2022 ರಂದು ಹೆಚ್ಚುವರಿ ಮುಖ್ಯ ನ್ಯಾಯಾಧೀಶ ನಿಶಾಂತ್ ಮಾನ್ ಅವರು ಆಜಾಮ್ ಖಾನ್ ಗೆ ಶಿಕ್ಷೆಯ ಆದೇಶವನ್ನು ಜಾರಿಗೊಳಿಸಿದ್ದರು.