
ಮಣಿಪುರದಲ್ಲಿ ಕರ್ಫ್ಯೂ
ಮಣಿಪುರ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು, ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ.
ಕರ್ಫ್ಯೂ ಪರಿಣಾಮ ಅಡುಗೆ ಅನಿಲ, ಪೆಟ್ರೋಲ್ ಗಳ ಲಭ್ಯತೆಯಲ್ಲಿ ವ್ಯತ್ಯಯವಾಗತೊಡಗಿದ್ದು, ಕಾಳಸಂತೆಯಲ್ಲಿರುವವರು ಜನರ ಅಗತ್ಯತೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಹಿಂಸಾಚಾರದ ಪರಿಣಾಮವಾಗಿ ಮಣಿಪುರದಲ್ಲಿ ಕಾಳಸಂತೆಯಲ್ಲಿ ಎಲ್ ಪಿಜಿ ಸಿಲಿಂಡರ್ ದರ ಪ್ರತಿ ಯುನಿಟ್ ಗೆ 2,000 ರೂಪಾಯಿಗಳಿಗೆ ತಲುಪಿದ್ದರೆ, ಪೆಟ್ರೋಲ್ ಬೆಲೆ ಲೀಟರ್ ಗೆ 250 ರೂಪಾಯಿಗಳಾಗಿದೆ. ಇದೇ ರೀತಿಯಲ್ಲಿ ಅಕ್ಕಿ, ಆಲೂಗಡ್ಡೆ, ಈರುಳ್ಳಿ, ಇತರ ತರಕಾರಿಗಳ ಬೆಲೆಗಳೂ ಏರಿಕೆಯಾಗಿದೆ.
"ಒಂದು ಪ್ಲೇಟ್ ಬ್ರಾಯ್ಲರ್ ಮೊಟ್ಟೆ ಈಗ 260 ರಿಂದ 300 ರೂ.ವರೆಗೆ ಇದೆ. ಹಿಂಸಾಚಾರದ ಮೊದಲು ಅದನ್ನು 200 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಬ್ರಾಯ್ಲರ್ ಕೋಳಿ (ಇಡೀ) ಕೆಜಿಗೆ 200 ರೂ.ನಿಂದ 300 ರೂ.ಗೆ ಏರಿಕೆಯಾಗಿದೆ. ಕೆಜಿಗೆ 20 ರೂಪಾಯಿಗಳಿದ್ದ ಆಲೂಗಡ್ಡೆ ಬೆಲೆ ಈಗ ಕೆಜಿಗೆ 40 ರೂ. ಇದೆ. ಅದೇ ರೀತಿ ಈರುಳ್ಳಿ ಬೆಲೆ ಕೆಜಿಗೆ 30 ರೂ.ನಿಂದ 50-60 ರೂ.ಗೆ ಏರಿದೆ, ತರಕಾರಿಗಳು ಕೂಡ ದುಬಾರಿಯಾಗಿದೆ," ಎಂದು ಸ್ಥಳೀಯರು ಹೇಳಿದ್ದಾರೆ.