ಭಯೋತ್ಪಾದನೆಗೆ ಆರ್ಥಿಕ ನೆರವು ಪ್ರಕರಣ: ಮಧ್ಯ ಪ್ರದೇಶದ ಜಬಲ್‌ಪುರದ 13 ಸ್ಥಳಗಳಲ್ಲಿ ಎನ್‌ಐಎ ದಾಳಿ

ಭಯೋತ್ಪಾದನೆ ಸಂಚು, ಉಗ್ರದಾಳಿಗೆ ಆರ್ಥಿಕ ನೆರವು ಲಭ್ಯವಾಗುತ್ತಿದ್ದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶನಿವಾರ ಮಧ್ಯ ಪ್ರದೇಶದ ಜಬಲ್‌ಪುರದ 13 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಎನ್ಐಎ
ಎನ್ಐಎ

ಭೋಪಾಲ್: ಭಯೋತ್ಪಾದನೆ ಸಂಚು, ಉಗ್ರದಾಳಿಗೆ ಆರ್ಥಿಕ ನೆರವು ಲಭ್ಯವಾಗುತ್ತಿದ್ದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶನಿವಾರ ಮಧ್ಯ ಪ್ರದೇಶದ ಜಬಲ್‌ಪುರದ 13 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಬಾಂಗ್ಲಾದೇಶದ ಜಮಾತ್-ಉಲ್-ಮುಜಾಹಿದ್ದೀನ್ ಗೆ ಭೋಪಾಲ್ ನಲ್ಲಿ ಆರ್ಥಿಕ ನೆರವು ಸಿಗುತ್ತಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವವರ ಶಂಕಿತರ ಸ್ಥಳಗಳಲ್ಲಿ ಶೋಧಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಮಧ್ಯಪ್ರದೇಶದ ಪೊಲೀಸರ ಸಹಕಾರದೊಂದಿಗೆ ಎನ್ಐಎ ಈ ದಾಳಿ ನಡೆಸಿದೆ. ಮೇ.25 ರಂದು ಎನ್ಐಎ ಭೋಪಾಲ್ ನಲ್ಲಿ 2 ಸ್ಥಳಗಳಲ್ಲಿ ದಾಳಿ ನಡೆಸಿ, ಉಗ್ರರಿಗೆ ಸಿಗುತ್ತಿರುವ ಆರ್ಥಿಕ ನೆರವಿನ ಪ್ರಕರಣದಲ್ಲಿ ಶೋಧಕಾರ್ಯಾಚರಣೆ ನಡೆಸಿತ್ತು.

ಈಗಾಗಲೇ ಬಂಧಿತರಾಗಿರುವ 10 ಆರೋಪಿಗಳು ಮತ್ತು ಚಾರ್ಜ್‌ಶೀಟ್ ನಲ್ಲಿ ಹೆಸರು ಉಲ್ಲೇಖಗೊಂಡಿರುವವರ ಮತ್ತಷ್ಟು ಸಂಪರ್ಕಗಳು ಮತ್ತು ಪಿತೂರಿಗಳನ್ನು ಬಹಿರಂಗಪಡಿಸಲು ಈ ದಾಳಿಗಳು ನಡೆದಿವೆ. ಬಂಧನಕ್ಕೊಳಗಾಗಿರುವ 10 ಮಂದಿ ಪೈಕಿ 6 ಮಂದಿ ಬಾಂಗ್ಲಾದೇಶಿ ಪ್ರಜೆಗಳಾಗಿದ್ದು, ಜೆಎಂಬಿ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com