ನಾವು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದೇವೆಯೇ?: ಶರದ್ ಪವಾರ್

ಹೊಸ ಸಂಸತ್ ಭವನ ಉದ್ಘಾಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ತಾವು ಅಲ್ಲಿಗೆ ಹೋಗುವುದಿಲ್ಲ ಎಂದು ಭಾನುವಾರ ಹೇಳಿದ್ದಾರೆ.
ಹೊಸ ಸಂಸತ್ ಭವನ ಉದ್ಘಾಟನೆ ವೇಳೆ ಪ್ರಧಾನಿ ಮೋದಿ
ಹೊಸ ಸಂಸತ್ ಭವನ ಉದ್ಘಾಟನೆ ವೇಳೆ ಪ್ರಧಾನಿ ಮೋದಿ

ಮುಂಬೈ: ಹೊಸ ಸಂಸತ್ ಭವನ ಉದ್ಘಾಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ತಾವು ಅಲ್ಲಿಗೆ ಹೋಗುವುದಿಲ್ಲ ಎಂದು ಭಾನುವಾರ ಹೇಳಿದ್ದಾರೆ.
 
"ಹೊಸ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನ್ನು ನಾನು ಬೆಳಗ್ಗೆ ನೋಡಿದೆ. ಆದರೆ ನಾನು ಅಲ್ಲಿಗೆ ಹೋಗುತ್ತಿಲ್ಲವಾದ್ದರಿಂದ ಸಂತೋಷವಾಗಿದೆ. ಅಲ್ಲಿ ನಡೆದದ್ದನ್ನು ನೋಡಿದ ನಂತರ ನಾನು ಚಿಂತಿತನಾಗಿದ್ದೇನೆ. ನಾವು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದೇವೆಯೇ? ಈ ಕಾರ್ಯಕ್ರಮವು ಸೀಮಿತ ಜನರಿಗೆ ಮಾತ್ರವೇ?" ಎಂದು ಶರದ್ ಪವಾರ್ ಪ್ರಶ್ನಿಸಿದರು. ಹವನ, ಬಹು ನಂಬಿಕೆಯ ಪ್ರಾರ್ಥನೆಗಳು ಮತ್ತು 'ಸೆಂಗೊಲ್' ನೊಂದಿಗೆ ಇಂದು ಹೊಸ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.

ಇದನ್ನು ಓದಿ: ದೇಶದ ಅಭಿವೃದ್ಧಿಗೆ ಸಾಕ್ಷಿಯಾಗಿದ್ದ ಹಳೆಯ ಸಂಸತ್ ಭವನದ ಗತವೈಭವದ ಕುರಿತ ಮಾಹಿತಿ ಇಲ್ಲಿದೆ...
 
ಇಂದು ಏನೇ ನಡೆದರೂ ಅದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಮಾಜದ ಪರಿಕಲ್ಪನೆಗೆ ವ್ಯತಿರಿಕ್ತವಾಗಿದೆ ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ.
 
"ಆಧುನಿಕ ವಿಜ್ಞಾನದ ಆಧಾರದ ಮೇಲೆ ಸಮಾಜವನ್ನು ನಿರ್ಮಿಸುವ ಪರಿಕಲ್ಪನೆ ಹೊಂದಿದ್ದ ಪಂ. ನೆಹರೂ ಅವರಿಗೆ ವಿರುದ್ಧವಾಗಿದೆ. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳನ್ನು ಆಹ್ವಾನಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು. ಆದರೆ ಉಪ ರಾಷ್ಟ್ರಪತಿ ಜಗದೀಪ್ ಧಂಖರ್, ರಾಜ್ಯಸಭೆಯ ಮುಖ್ಯಸ್ಥರು ಅಲ್ಲಿರಲಿಲ್ಲ. ಆದ್ದರಿಂದ ಇಡೀ ಕಾರ್ಯಕ್ರಮವು ಸೀಮಿತ ಜನರಿಗಾಗಿ ನಡೆದಂತೆ ತೋರುತ್ತಿದೆ" ಎಂದರು.
 
ಜನ ಹಳೆಯ ಸಂಸತ್ತಿನೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಆದರೆ ಕೇಂದ್ರ ಸರ್ಕಾರ ಪ್ರತಿಪಕ್ಷಗಳೊಂದಿಗೆ ಹೊಸ ಸಂಸತ್ತಿನ ಬಗ್ಗೆ ಏನನ್ನೂ ಚರ್ಚಿಸಿಲ್ಲ ಎಂದು ಪವಾರ್ ಹೇಳಿದ್ದಾರೆ.
 
"ನಮಗೆ ಹಳೆಯ ಸಂಸತ್ತಿನ ಜೊತೆಗೆ ವಿಶೇಷ ನಂಟು ಇದೆ. ಈ ಹೊಸ ಕಟ್ಟಡದ ಬಗ್ಗೆ ನಮ್ಮೊಂದಿಗೆ ಏನನ್ನೂ ಚರ್ಚಿಸಿಲ್ಲ. ಪ್ರತಿಯೊಬ್ಬರೂ ಅದರಲ್ಲಿ ತೊಡಗಿಸಿಕೊಂಡಿದ್ದರೆ ಉತ್ತಮ" ಎಂದು ಶರದ್ ಪವಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com