ಕುಸ್ತಿಪಟುಗಳ ಬೆಂಬಲಿಸಿ 'ಮಹಾ ಪಂಚಾಯತ್'ಗೆ ಹೋಗದಂತೆ 'ತಡೆಯಲಾಗಿದೆ': ಜೆಎನ್‌ಯು ವಿದ್ಯಾರ್ಥಿಗಳು

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭದ್ರತೆಯನ್ನು ಹೆಚ್ಚಿಸುವ ಮೂಲಕ 'ಮಹಿಳಾ ಮಹಾ ಪಂಚಾಯತಿ'ಯಲ್ಲಿ ಪಾಲ್ಗೊಳ್ಳದಂತೆ ವಿವಿ ಅಧಿಕಾರಿಗಳು ತಮ್ಮನ್ನು "ತಡೆದಿದ್ದಾರೆ" ಎಂದು ಭಾನುವಾರ ಜೆಎನ್ ಯು ವಿದ್ಯಾರ್ಥಿಗಳು...
ಕುಸ್ತಿಪಟುಗಳಿಂದ ಪ್ರತಿಭಟನೆ
ಕುಸ್ತಿಪಟುಗಳಿಂದ ಪ್ರತಿಭಟನೆ

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭದ್ರತೆಯನ್ನು ಹೆಚ್ಚಿಸುವ ಮೂಲಕ 'ಮಹಿಳಾ ಮಹಾ ಪಂಚಾಯತಿ'ಯಲ್ಲಿ ಪಾಲ್ಗೊಳ್ಳದಂತೆ ವಿವಿ ಅಧಿಕಾರಿಗಳು ತಮ್ಮನ್ನು "ತಡೆದಿದ್ದಾರೆ" ಎಂದು ಭಾನುವಾರ ಜೆಎನ್ ಯು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಲು 'ಮಹಾ ಪಂಚಾಯತ್' ಕರೆಯಲಾಗಿದೆ.

ಕ್ಯಾಂಪಸ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಕ್ಯಾಂಪಸ್‌ನಲ್ಲಿ "ಅಘೋಷಿತ ಸೆಕ್ಷನ್ 144" ಅನ್ನು ಜಾರಿಗೊಳಿಸಲಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿಗಳ ಸಂಘ(ಎಐಎಸ್‌ಎ) ಹೇಳಿಕೊಂಡಿದೆ.

"ಇಂದು, ಮಹಿಳಾ ಪಂಚಾಯತ್ ಆಯೋಜಿಸಲಾಗಿದೆ. ಆದರೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಒಳಗೆ ಮತ್ತು ಹೊರಗೆ ಭಾರೀ ಪೊಲೀಸ್ ನಿಯೋಜನೆ ಮಾಡಲಾಗಿದೆ. ಈ ಮೂಲಕ ಸರ್ಕಾರ ಮಹಿಳಾ ಮಹಾ ಪಂಚಾಯತ್ ನಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ತಡೆಯಲಾಗಿದೆ. ಲೈಂಗಿಕ ದೌರ್ಜನ್ಯ ಆರೋಪಿಗಳನ್ನು ಸರ್ಕಾರ ರಕ್ಷಿಸುತ್ತಿದೆ" ಎಂದು ಎಐಎಸ್ಎ ಕಾರ್ಯಕರ್ತೆ ಮಧುರಿಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com