ಹಲವು ಆಫರ್ ಗಳಿತ್ತು, ಆದರೆ ತಂದೆಯ ಸಲಹೆಯಂತೆ ತಂಬಾಕು ಜಾಹಿರಾತಿನಿಂದ ದೂರವಿದ್ದೇನೆ: ಸಚಿನ್ ತೆಂಡೂಲ್ಕರ್

ಕ್ರಿಕೆಟ್ ಕ್ಷೇತ್ರದ ಲೆಜೆಂಡ್ ಸಚಿನ್ ತೆಂಡೂಲ್ಕರ್ ತಾವು ಎಂದಿಗೂ ತಂಬಾಕು ಜಾಹಿರಾತಿನಲ್ಲಿ ನಟಿಸದೇ ಇರುವುದಕ್ಕೆ ತಮ್ಮ ತಂದೆಯ ಸಲಹೆಯೇ ಕಾರಣ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಮುಂಬೈ: ಕ್ರಿಕೆಟ್ ಕ್ಷೇತ್ರದ ಲೆಜೆಂಡ್ ಸಚಿನ್ ತೆಂಡೂಲ್ಕರ್ ತಾವು ಎಂದಿಗೂ ತಂಬಾಕು ಜಾಹಿರಾತಿನಲ್ಲಿ ನಟಿಸದೇ ಇರುವುದಕ್ಕೆ ತಮ್ಮ ತಂದೆಯ ಸಲಹೆಯೇ ಕಾರಣ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ತಮಗೆ ತಂಬಾಕು ಉತ್ಪನ್ನಗಳನ್ನು ಉತ್ತೇಜಿಸುವುದಕ್ಕೆ, ಪ್ರೊಮೋಟ್ ಮಾಡುವುದಕ್ಕಾಗಿ ಬಹಳಷ್ಟು ಅವಕಾಶಗಳು ಬಂದಿತ್ತು. ಆದರೆ ಜೀವನದ ಗುರಿಗಳನ್ನು ಸಾಧಿಸುವುದಕ್ಕೆ ಫಿಟ್ನೆಸ್ ಬಗ್ಗೆ ಶಿಸ್ತನ್ನು ಬೆಳೆಸಿಕೊಳ್ಳುವುದು, ಜಾಗೃತರಾಗಿರುವುದು ಬಹಳ ಮುಖ್ಯ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. 

ಬಾಯಿಯ ನೈರ್ಮಲ್ಯ ಅಭಿಯಾನದ ಭಾಗವಾಗಿರುವ ಮಹಾರಾಷ್ಟ್ರ ಸರ್ಕಾರದ ಸ್ವಚ್ಛ ಮುಖ್ ಅಭಿಯಾನ್ (ಎಸ್ಎಂಎ) ಗೆ ನಗುವಿನ ರಾಯಭಾರಿ (Smile Ambassador)ಯಾಗಿ ನೇಮಕಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್, ನಾನು ಭಾರತ ಕ್ರಿಕೆಟ್ ತಂಡಕ್ಕಾಗಿ ಆಡಲು ಆರಂಭಿಸಿದಾಗ, ಆಗಷ್ಟೇ ಶಾಲಾ ವಿದ್ಯಾಭ್ಯಾಸ ಮುಗಿಸಿದ್ದೆ. ಆಗ ನನಗೆ ಜಾಹಿರಾತುಗಳಲ್ಲಿ ನಟಿಸಿ, ಉತ್ಪನ್ನಗಳನ್ನು ಪ್ರೊಮೋಟ್ ಮಾಡಲು ಅನೇಕ ಅವಕಾಶಗಳು ಬಂದಿದ್ದವು. ಆದರೆ ಎಂದಿಗೂ ತಂಬಾಕು ಉತ್ಪನ್ನಗಳನ್ನು ಉತ್ತೇಜಿಸದಂತೆ ನನಗೆ ಹೇಳಿದ್ದರು. ಅಂತೆಯೇ ನನಗೆ ಬಂದಿದ್ದ ಅನೇಕ ತಂಬಾಕು ಜಾಹಿರಾತು ಆಫರ್ ಗಳನ್ನು ನಾನು ಒಪ್ಪಿಕೊಳ್ಳಲಿಲ್ಲ ಎಂದು ತೆಂಡೂಲ್ಕರ್ ಹೇಳಿದ್ದಾರೆ.

"ಬಾಯಿಯ ಉತ್ತಮ ಆರೋಗ್ಯ ಉತ್ತಮವಾಗಿದ್ದರೆ ಒಟ್ಟಾರೆ ಆರೋಗ್ಯ ಉತ್ತಮವಾಗಿರಲಿದೆ ಎಂದು ತೆಂಡೂಲ್ಕರ್ ಈ ಕಾರ್ಯಕ್ರಮದಲ್ಲಿ ಹೇಳಿದರು. ಫಿಟ್‌ನೆಸ್‌ನ ಮಹತ್ವವನ್ನು ಅವರು ಒತ್ತಿ ಹೇಳಿದ್ದು, ಅದು ಅವರ ಜೀವನದ ಗುರಿ ಸಾಧಿಸಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com