ಜಾರ್ಖಂಡ್: ಏಕ ಶಿಕ್ಷಕಿ ಶಾಲೆಯ ವಿದ್ಯಾರ್ಥಿನಿಯರ ಅದ್ಭುತ ಸಾಧನೆ; ಶೇ.93 ರಷ್ಟು ಫಲಿತಾಂಶ!

ಎಲ್ಲಾ ಅಡೆತಡೆಗಳನ್ನು ಮೀರಿದ, ಜಾರ್ಖಂಡ್‌ನ ಏಕ-ಶಿಕ್ಷಕಿಯ ವಿದ್ಯಾರ್ಥಿನಿಯರು, ಶಾಲೆಯು ಹತ್ತನೇ ತರಗತಿ ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (ಜೆಎಸಿ) ಬೋರ್ಡ್ ಪರೀಕ್ಷೆಗಳಲ್ಲಿ ಶೇಕಡಾ 93 ರಷ್ಟು ಫಲಿತಾಂಶ ಪಡೆದಿದ್ದಾರೆ.
ಜಾರ್ಖಂಡ್ ಶಾಲೆಯ ವಿದ್ಯಾರ್ಥಿನಿಯರು
ಜಾರ್ಖಂಡ್ ಶಾಲೆಯ ವಿದ್ಯಾರ್ಥಿನಿಯರು

ರಾಂಚಿ: ಎಲ್ಲಾ ಅಡೆತಡೆಗಳನ್ನು ಮೀರಿದ, ಜಾರ್ಖಂಡ್‌ನ ಏಕ-ಶಿಕ್ಷಕಿಯ ವಿದ್ಯಾರ್ಥಿನಿಯರು, ಶಾಲೆಯು ಹತ್ತನೇ ತರಗತಿ ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (ಜೆಎಸಿ) ಬೋರ್ಡ್ ಪರೀಕ್ಷೆಗಳಲ್ಲಿ ಶೇಕಡಾ 93 ರಷ್ಟು ಫಲಿತಾಂಶ ಪಡೆದಿದ್ದಾರೆ.

ಈ ವರ್ಷ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳ ಪೈಕಿ 15 ವಿದ್ಯಾರ್ಥಿಗಳು ಪ್ರಥಮ, 9 ಮಂದಿ ದ್ವಿತೀಯ ಹಾಗೂ ಮೂವರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ನಡುವೆ ಶಾಲೆಯ ಆಡಳಿತ ಮಂಡಳಿಗೆ ಫಲಿತಾಂಶ ತೃಪ್ತಿಯಾಗದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದ ಇಬ್ಬರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನಕ್ಕೆ ಕಳುಹಿಸಲಾಗಿದೆ.

ಜಮ್ ಶೆಡ್ ಪುರದ ಪಟಮ್ಡಾ ಬ್ಲಾಕ್‌ನಲ್ಲಿರುವ ಮಚಾದಲ್ಲಿರುವ ಪ್ರಾಜೆಕ್ಟ್ ಗರ್ಲ್ಸ್ ಹೈಸ್ಕೂಲ್, ಬಹುತೇಕ ಬುಡಕಟ್ಟು ಮತ್ತು ಅಳಿವಿನ ಅಂಚಿನಲ್ಲಿರುವ ವಿದ್ಯಾರ್ಥಿಗಳ ಶಿಕ್ಷಣ ಪೂರೈಸುತ್ತಿದೆ, ಜೀವಶಾಸ್ತ್ರವನ್ನು ಕಲಿಸಲು 2019 ರಲ್ಲಿ  ಒಬ್ಬ ಶಿಕ್ಷಕಿ ಮಾತ್ರ ಇದ್ದರು, ಆದರೆ ಜನವರಿ 2021 ರಿಂದ ಜನವರಿ 2023 ರ ನಡುವೆ ಎಲ್ಲಾ ವಿಷಯಗಳನ್ನು ಒಬ್ಬರೇ ಕಲಿಸಬೇಕಾಗಿತ್ತು. ಅಲ್ಲಿ ಬೇರೆ ಶಿಕ್ಷಕರು ಲಭ್ಯವಿರಲಿಲ್ಲ.

ಈ ವರ್ಷದ ಜನವರಿಯಲ್ಲಿ ಇನ್ನೂ ಮೂವರು ಶಿಕ್ಷಕರನ್ನು ಶಾಲೆಗೆ ನಿಯೋಜಿಸಲಾಗಿದ್ದರೂ, ಅವರಲ್ಲಿ ಇಬ್ಬರು ಒಂದೇ ತಿಂಗಳೊಳಗೆ ಹಿಂತಿರುಗಿದರು, ಆದರೆ ಮೂರನೆಯವರು ಡೆಪ್ಯೂಟೇಶನ್‌ನಲ್ಲಿದ್ದು ಇನ್ನೂ ಅಲ್ಲಿಯೇ ಪಾಠ ಮಾಡುತ್ತಿದ್ದಾರೆ. 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಲ್ಲಿ ಲಭ್ಯವಿರುವ ಏಕೈಕ ತರಗತಿಯಲ್ಲಿ ಶಾಲೆಯಲ್ಲಿ ಏಕೈಕ ಶಿಕ್ಷಕಿ, ಪ್ರಿಯಾಂಕಾ ಝಾ ಅವರು ಕಲಿಸುತ್ತಿದ್ದರು.

9  ಮತ್ತು  10 ನೇ ತರಗತಿಯ ಎಲ್ಲಾ 86 ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಹಿಂದೆ-ಮುಂದೆ ಕುಳಿತುಕೊಂಡು ಪಾಠ ಕೇಳುತ್ತಿದ್ದರು ಎಂದು  ಪರೀಕ್ಷೆಯಲ್ಲಿ ಶೇ. 91 ರಷ್ಟು  ಅಂಕಗಳಿಸಿ ತನ್ನ ಶಾಲೆಯಲ್ಲಿ ಅಗ್ರಸ್ಥಾನ ಪಡೆದಿರುವ ವಿದ್ಯಾರ್ಥಿ ಸಂಜು ಮಹ್ತೋ ಮಾಹಿತಿ ನೀಡಿದ್ದಾರೆ.

ಪ್ರಾಂಶುಪಾಲರಾದ ಪ್ರಿಯಾಂಕಾ ಝಾ ಗಣಿತವನ್ನು ಹೊರತುಪಡಿಸಿ ಎಲ್ಲಾ ವಿಷಯಗಳನ್ನು ಕಲಿಸುತ್ತಿದ್ದರು. ಪ್ರಾಂಶುಪಾಲರು  ಇತರ ಸರ್ಕಾರಿ ಶಾಲೆಯಲ್ಲಿ ತರಬೇತಿ ಪಡೆದ ಬ್ಯಾಚುಲರ್ ಆಫ್ ಎಜುಕೇಶನ್ (BEd) ವಿದ್ಯಾರ್ಥಿಗಳನ್ನು ಗಣಿತ ಪಾಠ ಕಲಿಸಲು ಆಹ್ವಾನಿಸುತ್ತಾರೆ. ಅದರ ಜೊತೆಗೆ, ನಾವು ನಿಯಮಿತವಾಗಿ ತರಗತಿಯಲ್ಲಿ ಏನು ಕಲಿಸುತ್ತೇವೆಯೋ ಅದನ್ನು ನಾವು ಮನೆಯಲ್ಲಿ ಅಧ್ಯಯನ ಮಾಡುತ್ತಿದ್ದೆವು" ಎಂದು ಸಂಜು ಮಹ್ತೋ ಹೇಳಿದರು.

ತಮ್ಮ ಶಾಲೆಯಲ್ಲಿ ಹೆಚ್ಚು ಶಿಕ್ಷಕರು ಇದ್ದಿದ್ದರೆ ಅವರು ಹೆಚ್ಚು ಉತ್ತಮ ಅಂಕಗಳನ್ನು ಗಳಿಸಬಹುದಿತ್ತು ಮತ್ತು ರಾಜ್ಯದ ಟಾಪರ್‌ಗಳಲ್ಲಿ ಸ್ಥಾನ ಗಳಿಸಬಹುದಿತ್ತು, ಈಗ ನಾನು ಮುಂದಿನ ದಿನಗಳಲ್ಲಿ ಹೆಚ್ಚು ಶ್ರಮಿಸುತ್ತೇನೆ ಮತ್ತು ಮಧ್ಯಂತರ ಮಟ್ಟದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಪ್ರಯತ್ನಿಸುತ್ತೇನೆ" ಎಂದು  ಭವಿಷ್ಯದಲ್ಲಿ ವೈದ್ಯರಾಗಲು ಬಯಸಿರುವ  ಸಂಜು ಮಹತೋ ಹೇಳಿದ್ದಾರೆ.

ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇ.89 ಅಂಕಗಳನ್ನು ಪಡೆದಿರುವ ಮತ್ತೊಬ್ಬ ಬಾಲಕಿ ರೀನಾ ಮಹ್ತೋ, ತಾನು ಶೇ.89 ಅಂಕಗಳನ್ನು ತೆಗೆಯುತ್ತೇನೆ ಎಂದು ತಾನು ಯಾವತ್ತೂ ಯೋಚಿಸಿರಲಿಲ್ಲ ಎಂದು ಪ್ರಹೇಳಿದ್ದಾರೆ.

ಜಿಲ್ಲಾಧಿಕಾರಿಗಳು ಪರೀಕ್ಷೆಯ ಮೊದಲು ವಿದ್ಯಾರ್ಥಿಗಳಿಗೆ ಮಾದರಿ ಪತ್ರಿಕೆಗಳನ್ನು ಒದಗಿಸಿದರು ಮತ್ತು ಅದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರು. ಈ ಮಕ್ಕಳ ಅನುಮಾನಗಳನ್ನು ನಿವಾರಿಸಲು ವಿಶೇಷ ಆನ್‌ಲೈನ್ ತರಗತಿಗಳನ್ನು ಸಹ ನಡೆಸಲಾಗಿದೆ ಎಂದು ಅವರು ಹೇಳಿದರು. ಸೀಮಿತ ಸಂಪನ್ಮೂಲಗಳ ಹೊರತಾಗಿಯೂ, ಹುಡುಗಿಯರು ಉತ್ತಮ ಪ್ರದರ್ಶನ ನೀಡಿರುವುದು ಸಂತಸ ತಂದಿದೆ. ಅವರ ಸಾಧನೆಗಳ ಬಗ್ಗೆ ನಾನು ಖಂಡಿತವಾಗಿಯೂ ಹೆಮ್ಮೆಪಡುತ್ತೇನೆ ಎಂದು ಬಿರುಲಿಯಾ ಹೇಳಿದರು. ಆದರೆ, ವಾರಕ್ಕೆ ಎರಡು ಬಾರಿಯಾದರೂ ಬೇರೆ ಶಾಲೆಗಳಿಂದ ಶಿಕ್ಷಕರನ್ನು ಕರೆಸುತ್ತಿದ್ದುದ್ದಾಗಿ ಡಿಇಒ ವ್ಯತಿರಿಕ್ತವಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com