ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 474 ರೂ.ಗೆ ಎಲ್‌ಪಿಜಿ ಸಿಲಿಂಡರ್

70 ಸದಸ್ಯ ಬಲದ ಛತ್ತೀಸ್‌ಗಢದ ವಿಧಾನಸಭೆಗೆ ನಡೆಯಲಿರುವ ನಿರ್ಣಾಯಕ ಎರಡನೇ ಹಂತದ ಚುನಾವಣೆಗೆ ಇನ್ನು ಎಂಟು ದಿನಗಳು ಬಾಕಿ ಉಳಿದಿದ್ದು, ಆಡಳಿತರೂಢ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 474 ರೂ.ಗೆ ಅಡುಗೆ ಅನಿಲ ಸಿಲಿಂಡರ್...
ಕಾಂಗ್ರೆಸ್ ಲೋಗೋ
ಕಾಂಗ್ರೆಸ್ ಲೋಗೋ

ರಾಯ್‌ಪುರ: 70 ಸದಸ್ಯ ಬಲದ ಛತ್ತೀಸ್‌ಗಢದ ವಿಧಾನಸಭೆಗೆ ನಡೆಯಲಿರುವ ನಿರ್ಣಾಯಕ ಎರಡನೇ ಹಂತದ ಚುನಾವಣೆಗೆ ಇನ್ನು ಎಂಟು ದಿನಗಳು ಬಾಕಿ ಉಳಿದಿದ್ದು, ಆಡಳಿತರೂಢ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 474 ರೂ.ಗೆ ಅಡುಗೆ ಅನಿಲ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ಬುಧವಾರ ಭರವಸೆ ನೀಡಿದೆ.

ಇಂದು ನಡೆದ ಮಹಿಳಾ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಸಂಯೋಜಕಿ ರಾಧಿಕಾ ಖೇರಾ ಅವರು, “ಚುನಾವಣೆಯಲ್ಲಿ ಗೆದ್ದ ನಂತರ, ನಾವು ತಕ್ಷಣವೇ ರಾಜ್ಯದ ಮಹಿಳೆಯರ ಖಾತೆಗಳಿಗೆ ಗ್ಯಾಸ್ ಸಿಲಿಂಡರ್‌ಗಳ ಮೇಲೆ 500 ರೂ. ಸಬ್ಸಿಡಿ ಜಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು. 

ಕಾಂಗ್ರೆಸ್ ಪಾರದರ್ಶಕತೆಯನ್ನು ಬಯಸುತ್ತದೆ. ಆದ್ದರಿಂದ ಈ ಸಿಲಿಂಡರ್‌ಗಳ ಮೇಲಿನ 500 ರೂ. ಸಬ್ಸಿಡಿಯನ್ನು ನೇರವಾಗಿ ಮಹಿಳೆಯರ ಖಾತೆಗೆ ಜಮೆ ಮಾಡುತ್ತೇವೆ ಎಂದು ಹೇಳಿದರು.

ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಮಾತ್ರ 500 ರೂಪಾಯಿ ಸಬ್ಸಿಡಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಆದರೆ ಕಾಂಗ್ರೆಸ್ ರಾಜ್ಯದ ಎಲ್ಲಾ ವರ್ಗದವರಿಗೆ 500 ರೂ. ಸಬ್ಸಿಡಿ ನೀಡಲಿದೆ ಎಂದು ರಾಧಿಕಾ ತಿಳಿಸಿದ್ದಾರೆ.

ಉದಾಹರಣೆಗೆ ಪ್ರಸ್ತುತ 974 ರೂ.ಗಳಿರುವ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಸಬ್ಸಿಡಿ ನಂತರ ಮಹಿಳೆಯರಿಗೆ 474 ರೂ.ಗೆ ಸಿಗಲಿದೆ. ಈ ಸಬ್ಸಿಡಿ ನಂತರ ಪ್ರಸ್ತುತ 607 ರೂ.ಗೆ ಲಭ್ಯವಿರುವ ಉಜ್ವಲ ಸಿಲಿಂಡರ್ ಕೇವಲ 107 ರೂ.ಗೆ ದೊರೆಯಲಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com