ಸೆಲೆಬ್ರಿಟಿಗಳ ನಿದ್ದೆಗೆಡಿಸಿದ ಡೀಪ್ ಫೇಕ್ ತಂತ್ರಜ್ಞಾನ: ರಶ್ಮಿಕಾ, ಕತ್ರೀನಾ ಬಳಿಕ ಶುಬ್ಮನ್ ಗಿಲ್-ಸಾರಾ ಫೋಟೋ ವೈರಲ್‌!

ಶುಭ್ಮನ್ ಗಿಲ್ ಮತ್ತು ಸಾರಾ‌ ತೆಂಡೂಲ್ಕರ್ ಅವರ ಡೀಪ್‌ಫೇಕ್ ಫೋಟೋ ವೈರಲ್ ಆಗಿದೆ. ಮಾರ್ಫಿಂಗ್‌ ಮಾಡಲಾದ ಇಮೇಜ್‌ನಿಂದಾಗಿ ಸೆಲೆಬ್ರಿಟಿಗಳ ಖ್ಯಾತಿಗೆ ಧಕ್ಕೆಯಾಗುತ್ತಿವೆ
ಶುಭ್ ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್
ಶುಭ್ ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್

ಸೆಲೆಬ್ರಿಟಿಗಳ ಡೀಪ್‌ಫೇಕ್, ಮಾರ್ಫ್ಡ್ ಅಥವಾ ಫೋಟೋಶಾಪ್ ಮಾಡಿದ ಚಿತ್ರಗಳು ಮತ್ತು ವೀಡಿಯೊಗಳು ವೈರಲ್‌ ಆಗುವುದು ಹೊಸದೇನಲ್ಲ. ಆದರೆ, ಇತ್ತೀಚೆಗೆ, ಜಾರಾ ಪಟೇಲ್ ಎಂಬ ಮಹಿಳೆಯ ದೇಹದ ಮೇಲೆ ರಶ್ಮಿಕಾ ಮಂದಣ್ಣ ಅವರ ಮಾರ್ಫ್ಡ್ ಮುಖವನ್ನು ಒಳಗೊಂಡಿರುವ ವೀಡಿಯೊ ವೈರಲ್ ಆಗಿದ್ದು, ಟೆಕ್ನಾಲಜಿಯ ಬಗ್ಗೆ ಆತಂಕ ಉಂಟು ಮಾಡಿದೆ.

ಶುಭ್ಮನ್ ಗಿಲ್ ಮತ್ತು ಸಾರಾ‌ ತೆಂಡೂಲ್ಕರ್ ಅವರ ಡೀಪ್‌ಫೇಕ್ ಫೋಟೋ ವೈರಲ್ ಆಗಿದೆ. ಮಾರ್ಫಿಂಗ್‌ ಮಾಡಲಾದ ಇಮೇಜ್‌ನಿಂದಾಗಿ ಸೆಲೆಬ್ರಿಟಿಗಳ ಖ್ಯಾತಿಗೆ ಧಕ್ಕೆಯಾಗುತ್ತಿವೆ.

ಏಕದಿನ ಕ್ರಿಕೆಟ್‌ನಲ್ಲಿ ನಂಬರ್‌ ವನ್‌ ಶ್ರೇಯಾಂಕದ ಶುಭ್ಮನ್ ಗಿಲ್ ಮತ್ತು ಸಚಿನ್‌ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್ ರಹಸ್ಯವಾಗಿ ಡೇಟಿಂಗ್ ನಡೆಸುತ್ತಿರುವ ಕುರಿತಾಗಿ ವರ್ಷಗಳಿಂದ ಸುದ್ದಿ ಹರಿದಾಡುತ್ತಿದೆ. ಈ ವದಂತಿಗಳಿಗೆ ಪುಷ್ಠಿ ನೀಡುವ ಉದ್ದೇಶದೊಂದಿಗೆ ಡೀಪ್‌ಫೇಕ್ ಫೋಟೋವನ್ನು ಸೃಷ್ಟಿಸಲಾಗಿದೆ. ಫೋಟೋದಲ್ಲಿ ಶುಭ್ಮನ್‌ ಗಿಲ್‌ ಅವರ ಹೆಗಲಿಗೆ ಕೈ ಹಾಕಿ ನಿಂತಿರುವಂತೆ ಸಾರಾ ಕಾಣಿಸುತ್ತಿದ್ದಾರೆ.

'ಸಾರಾ ತೆಂಡೂಲ್ಕರ್ ಅವರು ಶುಭ್‌ಮನ್‌  ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ' ಎಂಬ ಶೀರ್ಷಿಕೆಯಡಿ ಫೋಟೋ ವೈರಲ್ ಆಗ್ತಿದೆ. ಇದು ಅಭಿಮಾನಿಗಳ (Fans) ಖುಷಿಯನ್ನು ಸಹ ಹೆಚ್ಚಿಸಿದೆ. ಆದರೆ ಈ ಫೋಟೋ ಅಸಲಿಯಲ್ಲ ಮಾರ್ಫ್ಡ್‌ ಎಂಬುದು ಬಯಲಾಗಿದೆ.

ಮೂಲ ಚಿತ್ರವನ್ನು ಸಾರಾ ಅವರು ತಮ್ಮ ಸಹೋದರ ಅರ್ಜುನ್ ತೆಂಡೂಲ್ಕರ್ ಅವರ 24ನೇ ಹುಟ್ಟುಹಬ್ಬದಂದು ಸೆಪ್ಟೆಂಬರ್ 24, 2023ರಂದು ಒಂದೆರಡು ಫೋಟೋಗಳೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ, ಮೂಲ ಚಿತ್ರದಲ್ಲಿ ಅರ್ಜುನ್ ಕುರ್ಚಿಯ ಮೇಲೆ ಕುಳಿತಿದ್ದು, ಕೈಯಲ್ಲಿ ಐಸ್ ಕ್ರೀಮ್ ಕೋನ್ ಹಿಡಿದುಕೊಂಡು ಹಸಿರು ಪ್ಯಾಂಟ್‌ನೊಂದಿಗೆ ಕಪ್ಪು ಟೀ ಶರ್ಟ್‌ನಲ್ಲಿ ಡ್ಯಾಪರ್ ಆಗಿ ಕಾಣುತ್ತಿದ್ದಾರೆ.

ಅದೇ ಚಿತ್ರದಲ್ಲಿ, ಕಪ್ಪು ಪ್ಯಾಂಟ್‌ನೊಂದಿಗೆ ಜೋಡಿಯಾಗಿರುವ ಕಂದು ಬಣ್ಣದ ಟಾಪ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದ ಸಾರಾ, ತನ್ನ ಸಹೋದರನನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬಂದಿದೆ. ಇದೇ ಚಿತ್ರವನ್ನು ಎಡಿಟ್ ಮಾಡಲಾಗಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com