ಅನಾರೋಗ್ಯ ಪೀಡಿತ ಪತ್ನಿ ಭೇಟಿಯಾಗಲು ಸಿಸೋಡಿಯಾಗೆ ಕೋರ್ಟ್ ಅನುಮತಿ

ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಪತ್ನಿಯನ್ನು ಭೇಟಿಯಾಗಲು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ರೋಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ. ಅವರು ಐದು ದಿನಗಳ ಕಾಲ ಅನುಮತಿಯನ್ನು  ಕೋರಿದ್ದರು.  
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಪತ್ನಿಯನ್ನು ಭೇಟಿಯಾಗಲು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ರೋಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ. ಅವರು ಐದು ದಿನಗಳ ಕಾಲ ಅನುಮತಿಯನ್ನು  ಕೋರಿದ್ದರು.  

ಸಿಸೋಡಿಯಾ ತಮ್ಮ ಮನೆಯಲ್ಲಿ ಬೆಳಗ್ಗೆ 10 ರಿಂದ 4 ರ ನಡುವೆ ಪೊಲೀಸ್ ಕಸ್ಟಡಿಯಲ್ಲಿ ತಮ್ಮ ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿಯಾಗಲು ವಿಶೇಷ ನ್ಯಾಯಾಧೀಶ ಎಂ ಕೆ ನಾಗ್ಪಾಲ್ ಅವರು ಅನುಮತಿ ನೀಡಿದರು.

ಈ ಮಧ್ಯೆ ದೆಹಲಿ ಅಬಕಾರಿ ನೀತಿ ಹಣ ವರ್ಗಾವಣೆ  ಪ್ರಕರಣದಲ್ಲಿ ಸಂಸದ ಸಂಜಯ್ ಸಿಂಗ್ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ನವೆಂಬರ್ 24, 2023 ರವರೆಗೆ ವಿಸ್ತರಿಸಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಪಂಜಾಬ್‌ನ ಅಮೃತಸರದ ಸಿಜೆಎಂ ನ್ಯಾಯಾಲಯದ ಮುಂದೆ ಸಂಜಯ್ ಸಿಂಗ್ ಅವರನ್ನು ಇದೇ ತಿಂಗಳ 18 ರಂದು ಹಾಜರುಪಡಿಸಲು ವಿಶೇಷ ನ್ಯಾಯಾಧೀಶರು ಅನುಮತಿ ನೀಡಿದರು. 

ಸಂಜಯ್ ಸಿಂಗ್ ಅವರ  ಆರೋಗ್ಯ ಸಮಸ್ಯೆ ಮತ್ತು ಬದಲಾಗಿರುವ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ರಾಜಧಾನಿಯಿಂದ ರೈಲಿನಲ್ಲಿ ಪಂಜಾಬ್‌ಗೆ ಕರೆದುಕೊಂಡು ಹೋಗಿ ಅದೇ ದಿನ ವಾಪಸ್ ಬರುವಂತೆ ಜೈಲು ಅಧಿಕಾರಿಗಳಿಗೆ  ನಿರ್ದೇಶನ ನೀಡಿರುವ ನ್ಯಾಯಾಲಯ, ಸೂಕ್ತ ಭದ್ರತಾ ವ್ಯವಸ್ಥೆ ಮಾಡುವಂತೆಯೂ  ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com