ಪ್ರಧಾನಿ ಮೋದಿ ಒಳಗೊಂಡ 'ಅಬಂಡನ್ಸ್ ಇನ್ ಮಿಲೆಟ್ಸ್' ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ, ಸಿರಿಧಾನ್ಯಗಳ ಮಹತ್ವವನ್ನು ಸಾರುವ ವಿಶೇಷ ಹಾಡು  'ಅಬಂಡನ್ಸ್ ಇನ್ ಮಿಲೆಟ್ಸ್' ಈ ವರ್ಷದ(Grammy award 2024) ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಪ್ರಧಾನಿ ಮೋದಿ(ಸಂಗ್ರಹ ಚಿತ್ರ)
ಪ್ರಧಾನಿ ಮೋದಿ(ಸಂಗ್ರಹ ಚಿತ್ರ)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ, ಸಿರಿಧಾನ್ಯಗಳ ಮಹತ್ವವನ್ನು ಸಾರುವ ವಿಶೇಷ ಹಾಡು  'ಅಬಂಡನ್ಸ್ ಇನ್ ಮಿಲೆಟ್ಸ್' ಈ ವರ್ಷದ(Grammy award 2024) ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

'ಅಬಂಡನ್ಸ್ ಇನ್ ಮಿಲೆಟ್ಸ್' ಹಾಡು ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಹಾಡಿಗೆ ಭಾರತೀಯ ಮೂಲದ ಅಮೆರಿಕನ್ ಗಾಯಕಿ ಫಲ್ಗುಣಿ ಶಾ ಸಂಗೀತ ನೀಡಿದ್ದು, ಅವರ ಪತಿ ಗೌರವ್ ಶಾ ಅವರು ಹಾಡಿದ್ದಾರೆ.

ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ ವಿಭಾಗದ ಅಡಿಯಲ್ಲಿ, "ಫಾಲು ಮತ್ತು ಗೌರವ್ ಶಾ (ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಿರುವ) ಅವರ ಅಬಂಡನ್ಸ್ ಇನ್ ಮಿಲೆಟ್ಸ್ ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ ಎಂದು ಅವರು ಹೇಳಿದ್ದಾರೆ.

ಸಿರಿಧಾನ್ಯಗಳ ಮಹತ್ವವನ್ನು ಸಾರುವುದಕ್ಕಾಗಿ ಈ ಹಾಡನ್ನು ಲಾಂಚ್ ಮಾಡಲಾಗಿತ್ತು. ಇಡೀ ಜಗತ್ತು, 2023ರ ವಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಆಚರಿಸುತ್ತಿದೆ. ಸಿರಿಧಾನ್ಯಗಳನ್ನು ಉತ್ತೇಜಿಸುವುದಕ್ಕಾಗಿ ಸೃಷ್ಟಿಸಲಾದ ಈ ಹಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com