ಉತ್ತರಕಾಶಿ ಸುರಂಗ ಕುಸಿತ: 24 ಗಂಟೆಗಳಲ್ಲಿ ಸಿಹಿ ಸುದ್ದಿ ಕೊಡುತ್ತೇವೆ ಎಂದ ಹಿರಿಯ ಅಧಿಕಾರಿ

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ 264 ಗಂಟೆಗಳ ನಂತರವೂ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನು 24 ಗಂಟೆಗಳಲ್ಲಿ ಸಿಹಿ ಸುದ್ದಿ...
ಸುರಂಗದೊಳಗೆ ರಕ್ಷಣಾ ಕಾರ್ಯ
ಸುರಂಗದೊಳಗೆ ರಕ್ಷಣಾ ಕಾರ್ಯ
Updated on

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ 264 ಗಂಟೆಗಳ ನಂತರವೂ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನು 24 ಗಂಟೆಗಳಲ್ಲಿ ಸಿಹಿ ಸುದ್ದಿ ನೀಡುವುದಾಗಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿರುವ ಅಧಿಕಾರಿ ಹೇಳಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಸಿಹಿ ಸುದ್ದಿಯನ್ನು ನಿರೀಕ್ಷಿಸಲಾಗಿದೆ ಎಂದು ತಾಂತ್ರಿಕ, ರಸ್ತೆ ಮತ್ತು ಸಾರಿಗೆ ಹೆಚ್ಚುವರಿ ಕಾರ್ಯದರ್ಶಿ ಮಹಮೂದ್ ಅಹ್ಮದ್ ಅವರು ಬುಧವಾರ ಹೇಳಿದ್ದಾರೆ.

41 ಕಾರ್ಮಿಕರನ್ನು ರಕ್ಷಿಸಲು ಅವಶೇಷಗಳ ಮೂಲಕ ಹೆಚ್ಚುವರಿಯಾಗಿ 880-ಮಿಲಿಮೀಟರ್ ಪೈಪ್ ಅನ್ನು ಸಹ ಅಳವಡಿಸಲಾಗಿದೆ. ಮಂಗಳವಾರ ರಾತ್ರಿಯಿಂದ ಇನ್ನೂ ಮೂರು ಪೈಪ್‌ಗಳನ್ನು ತಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸುರಂಗದ ಸಮೀಪ ಪ್ರಧಾನಿ ಕಚೇರಿಯ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅಹ್ಮದ್ ಅವರು, "

ಹೆಚ್ಚುವರಿ 800 ಎಂಎಂ ಪೈಪ್ ಅನ್ನು ಸಹ ಸುರಂಗದೊಳಗೆ 21 ಮೀಟರ್ ತಳ್ಳಲಾಗಿದೆ" ಎಂದು ಹೇಳಿದರು.

12:45 ರ ಸುಮಾರಿಗೆ "ಅವರು ಆಗರ್ ಯಂತ್ರದ ಮೂಲಕ ಕೊರೆಯಲು ಪ್ರಾರಂಭಿಸಿದರು" ಮತ್ತು ಇಲ್ಲಿಯವರೆಗೆ, "ನಾವು ಇನ್ನೂ ಮೂರು ಪೈಪ್‌ಗಳನ್ನು ತಳ್ಳಿದ್ದೇವೆ..." ಎಂದು ಅಧಿಕಾರಿ ತಿಳಿಸಿದರು.

"ನಾವು ಸುರಂಗದೊಳಗೆ 45-50 ಮೀಟರ್ ತಲುಪುವವರೆಗೆ, ನಿಮಗೆ ನಿಖರವಾದ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ, ನಾವು ಅಡ್ಡಲಾಗಿ ಕೊರೆಯುತ್ತಿದ್ದೇವೆ" ಎಂದು ಅವರು ಹೇಳಿದರು. .

ಯಾವುದೇ ಅಡೆತಡೆಗಳಿಲ್ಲದಿದ್ದರೆ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಏನಾದರೂ ಸಿಹಿ ಸುದ್ದಿ ಬರಬಹುದು ಎಂದು ಅಹ್ಮದ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com