ಜಮ್ಮು-ಕಾಶ್ಮೀರ: ಶಿಬಿರದಲ್ಲಿ ಸಹೋದ್ಯೋಗಿಯ ಗುಂಡಿನ ದಾಳಿ, ಮೂವರು ಯೋಧರಿಗೆ ಗಾಯ

ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಶಿಬಿರವೊಂದರಲ್ಲಿ ನಿನ್ನೆ ಗುರುವಾರ ಅಧಿಕಾರಿಯೊಬ್ಬರು ಅನಧಿಕೃತವಾಗಿ ಗುಂಡು ಹಾರಿಸಿ ಗ್ರೆನೇಡ್‌ ಸ್ಫೋಟಿಸಿದ ಕಾರಣ ಮೂವರು ಅಧಿಕಾರಿಗಳು ಸೇರಿದಂತೆ ಕನಿಷ್ಠ ಐವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಭಾರತೀಯ ಸೇನಾ ಯೋಧರು (ಸಂಗ್ರಹ ಚಿತ್ರ)
ಭಾರತೀಯ ಸೇನಾ ಯೋಧರು (ಸಂಗ್ರಹ ಚಿತ್ರ)

ರಜೌರಿ: ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಶಿಬಿರವೊಂದರಲ್ಲಿ ನಿನ್ನೆ ಗುರುವಾರ ಅಧಿಕಾರಿಯೊಬ್ಬರು ಅನಧಿಕೃತವಾಗಿ ಗುಂಡು ಹಾರಿಸಿ ಗ್ರೆನೇಡ್‌ ಸ್ಫೋಟಿಸಿದ ಕಾರಣ ಮೂವರು ಅಧಿಕಾರಿಗಳು ಸೇರಿದಂತೆ ಕನಿಷ್ಠ ಐವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಮೇಜರ್ ಶ್ರೇಣಿಯ ಅಧಿಕಾರಿ, ಮದ್ದುಗುಂಡಿನ ಶೂಟಿಂಗ್ ಅಭ್ಯಾಸದ ಸಮಯದಲ್ಲಿ ತನ್ನ ಸಹೋದ್ಯೋಗಿಗಳ ಮೇಲೆ ಪ್ರಚೋದನೆರಹಿತ ಗುಂಡು ಹಾರಿಸಿದ್ದಾರೆ. ನಂತರ ಘಟಕದ ಶಸ್ತ್ರಾಗಾರದಲ್ಲಿ ಆಶ್ರಯ ಪಡೆದರು, ಅವರ ಮನವೊಲಿಸುವ ಪ್ರಯತ್ನದಲ್ಲಿ ಕಟ್ಟಡದ ಬಳಿ ತೆರಳಿದ ತನ್ನ ಮೇಲಾಧಿಕಾರಿಗಳ ಮೇಲೆ ಶರಣಾಗಲು ಹೇಳಿದಾಗ ಗ್ರೆನೇಡ್ ದಾಳಿ ನಡೆಸಿದರು ಎಂದು ಸೇನಾ ಮೂಲಗಳು ತಿಳಿಸಿವೆ. 

ಶಸ್ತ್ರಾಗಾರದೊಳಗೆ ಅಧಿಕಾರಿಯನ್ನು ಹತ್ತಿಕ್ಕುವ ಮೊದಲು ಅಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಜಿಲ್ಲೆಯ ಠಾಣಮಂಡಿ ಬಳಿಯ ನೀಲಿ ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ.

ಸೇನೆಯು ಮುನ್ನೆಚ್ಚರಿಕೆ ಕ್ರಮವಾಗಿ ಶಸ್ತ್ರಾಗಾರದ ಸಮೀಪದಲ್ಲಿರುವ ಗ್ರಾಮವನ್ನು ಸ್ಥಳಾಂತರಿಸಿದೆ. ರಾಜೌರಿಯ ಪೋಸ್ಟ್‌ನಲ್ಲಿ ಗ್ರೆನೇಡ್ ಅಪಘಾತದಲ್ಲಿ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆ ಹೇಳಿಕೊಂಡಿದೆ.

ಶಿಬಿರದಲ್ಲಿ ಕಳೆದ ಹಲವು ದಿನಗಳಿಂದ ಗುಂಡು ಹಾರಿಸುವ ಅಭ್ಯಾಸ ನಡೆಯುತ್ತಿದ್ದು, ಆರೋಪಿ ಅಧಿಕಾರಿ ನಿನ್ನೆ ಯಾವುದೇ ಪ್ರಚೋದನೆ ಇಲ್ಲದೆ ತನ್ನ ಸಹೋದ್ಯೋಗಿಗಳು ಮತ್ತು ಅಧೀನ ಅಧಿಕಾರಿಗಳ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ನಂತರ ಶಿಬಿರದ ಶಸ್ತ್ರಾಗಾರದೊಳಗೆ ಹೋಗಿ ಆಶ್ರಯ ಪಡೆದಿದ್ದಾರೆ. ಕಮಾಂಡಿಂಗ್ ಅಧಿಕಾರಿ, ಅವರ ಉಪ ಮತ್ತು ವೈದ್ಯಕೀಯ ಅಧಿಕಾರಿಯೊಂದಿಗೆ ಕಟ್ಟಡದ ಬಳಿಗೆ ತೆರಳಿ ಶರಣಾಗುವಂತೆ ಮನವೊಲಿಸುವ ಪ್ರಯತ್ನದಲ್ಲಿ ಗ್ರೆನೇಡ್ ಎಸೆದರು ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ಎಸೆದ ಗ್ರೆನೇಡ್ ಸ್ಫೋಟಗೊಂಡಾಗ ಎಲ್ಲಾ ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ ಘಟಕದ ಎರಡನೇ-ಕಮಾಂಡ್‌ ಸ್ಥಿತಿ ಚಿಂತಾಜನಕವಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಆರೋಪಿಗಳು ನಡೆಸಿದ ವಿವೇಚನಾರಹಿತ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಕುರಿತು ಜಮ್ಮು ಮೂಲದ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್, ಜನರಲ್ ಏರಿಯಾ ರಾಜೌರಿಯಲ್ಲಿರುವ ಸೇನಾ ಶಿಬಿರದ ಮೇಲೆ ಗುಂಡಿನ ದಾಳಿಯ ಬಗ್ಗೆ ನನಗೆ ಕರೆಗಳು ಬಂದಿವೆ. ಇದು ಭಯೋತ್ಪಾದಕ ದಾಳಿಯಲ್ಲ, ಶಿಬಿರದೊಳಗೆ ನಡೆದ ಆಂತರಿಕ ಘಟನೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com