ಸಿಕ್ಕಿಂ ಪ್ರವಾಹ: ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆ, ನಾಪತ್ತೆಯಾದವರಿಗಾಗಿ ಶೋಧ

ಮೇಘ ಸ್ಫೋಟದಿಂದ ಸಿಕ್ಕಿಂನಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 32ಕ್ಕೆ ಏರಿಕೆಯಾಗಿದೆ.
ಉತ್ತರ ಸಿಕ್ಕಿಂನಲ್ಲಿ ಪ್ರವಾಹದಿಂದ ತುಂಬಿ ಹರಿಯುತ್ತಿರುವ ತೀಸ್ತಾ ನದಿ
ಉತ್ತರ ಸಿಕ್ಕಿಂನಲ್ಲಿ ಪ್ರವಾಹದಿಂದ ತುಂಬಿ ಹರಿಯುತ್ತಿರುವ ತೀಸ್ತಾ ನದಿ

ಗ್ಯಾಂಗ್‌ಟಕ್: ಮೇಘ ಸ್ಫೋಟದಿಂದ ಸಿಕ್ಕಿಂನಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 32ಕ್ಕೆ ಏರಿಕೆಯಾಗಿದೆ.

ಇದುವರೆಗೆ ಅವಶೇಷಗಳಿಂದ ಒಂಬತ್ತು ಸೈನಿಕರು ಸೇರಿದಂತೆ ಮೂವತ್ತೆರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ನಾಪತ್ತೆಯಾಗಿರುವ 100ಕ್ಕೂ ಹೆಚ್ಚು ಜನರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎಸ್‌ಎಸ್‌ಡಿಎಂಎ)ದ ಪ್ರಕಾರ, ಇದುವರೆಗೆ ರಾಜ್ಯದ ವಿವಿಧ ಪ್ರದೇಶಗಳಿಂದ 2,563 ಜನರನ್ನು ರಕ್ಷಿಸಲಾಗಿದೆ.

ನಾಪತ್ತೆಯಾಗಿರುವ 122 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಪಾಕ್ಯೊಂಗ್ ಜಿಲ್ಲೆಯಲ್ಲಿ 78, ಗ್ಯಾಂಗ್ಟಾಕ್ ಜಿಲ್ಲೆಯ 23, ಮಂಗನ್ ನಲ್ಲಿ 15 ಮತ್ತು ನಾಮ್ಚಿಯಲ್ಲಿ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್‌ಎಸ್‌ಡಿಎಂಎ ಹೇಳಿದೆ.

ವಿಶೇಷ ರಾಡಾರ್‌ಗಳು, ಡ್ರೋನ್‌ಗಳು ಮತ್ತು ಸೇನಾ ಶ್ವಾನಗಳನ್ನು ಶೋಧ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com