ಜಾತಿ ಸಮೀಕ್ಷೆ ನಡೆಸಲು ರಾಜಸ್ಥಾನ ಸರ್ಕಾರ ಆದೇಶ

ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸಲು ರಾಜಸ್ಥಾನ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಇದರೊಂದಿಗೆ ರಾಜಸ್ಥಾನ, ಬಿಹಾರ ನಂತರ ಜನಗಣತಿ ನಡೆಸುತ್ತಿರುವ ದೇಶದ ಎರಡನೇ ರಾಜ್ಯವಾಗಲಿದೆ.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಜೈಪುರ: ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸಲು ರಾಜಸ್ಥಾನ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಇದರೊಂದಿಗೆ ರಾಜಸ್ಥಾನ, ಬಿಹಾರ ನಂತರ ಜನಗಣತಿ ನಡೆಸುತ್ತಿರುವ ದೇಶದ ಎರಡನೇ ರಾಜ್ಯವಾಗಲಿದೆ.

ಬಿಹಾರ ತನ್ನ ಜಾತಿ ಸಮೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಮತ್ತು ರಾಜಸ್ಥಾನದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಈ ಆದೇಶ ಹೊರಡಿಸಿದೆ.

ರಾಜ್ಯ ಸಚಿವ ಸಂಪುಟದ ಒಪ್ಪಿಗೆ ಬಳಿಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಈ ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ರಾಜಸ್ಥಾನ ಸರ್ಕಾರ ತನ್ನ ಎಲ್ಲಾ ನಾಗರಿಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಗುಣಮಟ್ಟಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಅಂಕಿಅಂಶಗಳನ್ನು ಸಂಗ್ರಹಿಸಲು ತನ್ನದೇ ಆದ ಸಂಪನ್ಮೂಲಗಳೊಂದಿಗೆ ಸಮೀಕ್ಷೆ ನಡೆಸುತ್ತಿದೆ.

ಆದಾಗ್ಯೂ, ಈ ಆದೇಶವು ಜನ ಗಣತಿ ನಡೆಸಲು ಸಮಯದ ಚೌಕಟ್ಟನ್ನು ಒದಗಿಸಿಲ್ಲ. ಇದಕ್ಕೂ ಮುನ್ನ ಜಾತಿ ಗಣತಿ ಕುರಿತು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸುದ್ದಿಗಾರರಿಗೆ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com